More

    ರಿಲಯನ್ಸ್​ನಿಂದ 27,000 ಕೋಟಿ ರೂ.ಗೆ ಬಿಗ್​ ಬಜಾರ್​ ಖರೀದಿ? ರಿಟೇಲ್​ ಕ್ಷೇತ್ರದಲ್ಲಿ ಸಂಚಲನ; ಅಮೆಜಾನ್​, ಫ್ಲಿಫ್​ಕಾರ್ಟ್​ಗೆ ಠಕ್ಕರ್​

    ಮುಂಬೈ: ಜಗತ್ತಿನ ಪ್ರಮುಖ ಕಂಪನಿಗಳಿಂದ ಭಾರಿ ಪ್ರಮಾಣದಲ್ಲಿ ಬಂಡವಾಳ ಆಕರ್ಷಿಸಿರುವ ರಿಲಾಯನ್ಸ್​ ಇಂಡಸ್ಟ್ರೀಸ್​ ಇದೀಗ ಫ್ಯೂಚರ್​ ಗ್ರೂಪ್​ ಸ್ವಾಧೀನ ಪ್ರಕ್ರಿಯೆಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.

    ಈ ಹೊತ್ತಿಗಾಗಲೇ ಈ ವ್ಯವಹಾರ ಮುಗಿದು ಘೋಷಣೆಯಾಗುವ ನಿರೀಕ್ಷೆಯಿತ್ತು. ಇತ್ತೀಚೆಗೆ ನಡೆದ ರಿಲಾಯನ್ಸ್​ನ ವಾರ್ಷಿಕ ಮಹಾಸಣೆಯಲ್ಲಿ ಇದರ ಘೋಷಣೆಯಾಗಬೇಕಿತ್ತು. ಆದರೆ, ಕೊಂಚ ವಿಳಂಬವಾಗಿದೆ. ಇ-ಕಾಮರ್ಸ್​ ವಹಿವಾಟನ್ನು ವಿಸ್ತರಿಸುವ, ಅಮೆಜಾನ್​, ಫ್ಲಿಪ್​ಕಾರ್ಟ್​ಗೆ ಠಕ್ಕರ್​ ಕೊಡಲು ರಿಲಾಯನ್ಸ್​ ಸಜ್ಜಾಗಿದೆ.

    ಇದನ್ನೂ ಓದಿ; ಕರೊನಾ ಚಿಕಿತ್ಸೆಗೆ ಬೆಡ್​ಗಳಿವೆ ; ರೋಗಿಗಳೇ ಇಲ್ಲ; ಒಂದೇ ತಿಂಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಏನಿದು ಬದಲಾವಣೆ?

    ಅಂದಾಜು 24,000 ದಿಂದ 27,000 ಕೋಟಿ ರೂ.ಗೆ ಕಿಶೋರ್​ ಬಿಯಾನಿ ನೇತೃತ್ವದ ಫ್ಯೂಚರ್​ ಗ್ರೂಪ್​ನ ರಿಟೇಲ್​ ವಹಿವಾಟನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ. ಫ್ಯೂಚರ್​ ಗ್ರೂಪ್​ನ ಎಲ್ಲ ಸಾಲಗಳನ್ನು ರಿಲಾಯನ್ಸ್​ ವಹಿಸಿಕೊಳ್ಳಲಿದೆ.

    ಫ್ಯೂಚರ್​ ಗ್ರೂಪ್​ನಲ್ಲೀಗ ಪ್ಯೂಚರ್​ ರಿಟೇಲ್​, ಫ್ಯೂಚರ್​ ಕನ್ಸೂಮರ್​, ಫ್ಯೂಚರ್​ ಲೈಫ್​ಸ್ಟೈಲ್​ ಫ್ಯಾಷನ್ಸ್​, ಫ್ಯೂಚರ್​ ಸಪ್ಲೈ ಚೈನ್ಸ್​ ಹಾಗೂ ಫ್ಯೂಚರ್​ ಮಾರ್ಕೆಟ್​ ನೆಟ್ವರ್ಕ್​ಗಳಿವೆ. ಇವೆಲ್ಲವನ್ನೂ ಫ್ಯೂಚರ್​ ಎಂಟರ್​ಪ್ರೈಸಸ್​ ಲಿಮಿಟೆಡ್​ ಹೆಸರಿನಲ್ಲಿ ಒಂದುಗೂಡಿಸಿ ರಿಲಾಯನ್ಸ್​ಗೆ ಹಸ್ತಾಂತರಿಸಲಾಗುತ್ತದೆ. ಇದು ಭಾರತದ ಅತಿ ದೊಡ್ಡ ರಿಟೇಲ್​ ಜಾಲ ಎನಿಸಿಕೊಳ್ಳಲಿದೆ.

    ಇದನ್ನೂ ಓದಿ; 65 ಸಾವಿರ ರೂ.ಗೆ ಏರಲಿದೆ 10 ಗ್ರಾಂ ಚಿನ್ನದ ಬೆಲೆ; ಬಂಗಾರದಲ್ಲಿ ಹೂಡಿಕೆಗೆ ಸಕಾಲ….! 

    ಈ ಜಾಲದಲ್ಲಿ ಬಿಗ್​ ಬಜಾರ್​, ಫುಡ್​ಹಾಲ್​, ಎಫ್​ಬಿಬಿ, ನೀಲಗಿರಿಸ್​, ಸೆಂಟ್ರಲ್​, ಹೆರಿಟೇಜ್​ ಫುಡ್ಸ್​ ಹಾಗೂ ಬ್ರ್ಯಾಂಡ್​ ಫ್ಯಾಕ್ಟರಿ ಮೊದಲಾದ ಬ್ರ್ಯಾಂಡ್​ಗಳ ರಿಲಯನ್ಸ್​ ಅಧೀನಕ್ಕೆ ಬರಲಿವೆ. ಜತೆಗೆ 1,700 ಮಳಿಗೆಗಳನ್ನು ಹೊಂದಲಿದೆ.

    ಭಾರತಕ್ಕೆ ಬಲ ಬಂತು; ಚೀನಾದ ಶಕ್ತಿ ಕುಂದಿತು; ಡ್ರ್ಯಾಗನ್​ಗೆ ಶಾಕ್​ ನೀಡಿದ್ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts