More

    ವಾರದಲ್ಲಿ 27 ಜಾನುವಾರು ಅಕಾಲಿಕ ಸಾವು

    ಬೆಳಗಾವಿ: ಮೂಡಲಗಿ ತಾಲೂಕಿನ ವೆಂಕಟಾಪುರ ಗ್ರಾಮದ ತೋಟಪಟ್ಟಿಗಳಲ್ಲಿರುವ ಎಮ್ಮೆ, ಹಸು, ಎತ್ತು , ಕರುಗಳು ನಿರಂತರವಾಗಿ ಮೃತಪಡುತ್ತಿದ್ದು, ರೈತರು, ಕಾರ್ಮಿಕರು ಕಂಗಾಲಾಗಿದ್ದಾರೆ. ಒಂದೇ ವಾರದಲ್ಲಿ 27 ಜಾನುವಾರು ಮೃತಪಟ್ಟಿವೆ.

    ವೆಂಕಟಾಪುರ- ಹೊಸಯರಗುದ್ರಿ ಗ್ರಾಮಗಳ ನಡುವಿನ ತೋಟ್ಟಪಟ್ಟಿ ಪ್ರದೇಶದಲ್ಲಿ ವಾಸಿಸುತ್ತಿರುವ ರೈತರು, ಕೂಲಿ ಕಾರ್ಮಿಕರಿಗೆ ಸೇರಿರುವ ಎಮ್ಮೆ, ಹಸು, ಕರು, ಎತ್ತುಗಳು ಡಿ. 26ರಿಂದ ನಿರಂತವಾಗಿ ಸಾಯುತ್ತಿವೆ. ಆದರೆ, ಯಾವ ಕಾರಣಕ್ಕೆ ಸಾಯುತ್ತಿವೆ ಎಂಬುದು ರೈತರಿಗೆ, ಪಶುವೈದ್ಯರಿಗೆ ಗೊತ್ತಾಗುತ್ತಿಲ್ಲ. ಆರಂಭದಲ್ಲಿ ಹುಚ್ಚು ನರಿ ಕಡಿತದಿಂದ ಸಾವನ್ನಪ್ಪುತ್ತಿವೆ ಎಂದು ಭಾವಿಸಿದ್ದರು. ಆದರೆ, ದಿನಕ್ಕೆ 2- 3 ಎಮ್ಮೆ, ಹಸುಗಳು ಸಾಯುತ್ತಿರುವುದು ಸಾಕಣೆದಾರರಲ್ಲೂ ಆತಂಕ ಮೂಡಿಸಿದೆ.

    ಪಶು ವೈದ್ಯರು ಹೀಗೆ ಏಕಾಏಕಿ ಸಾಯುತ್ತಿರುವ ಜಾನುವಾರು ಪರೀಕ್ಷಿಸಿ ಹೋಗಿದ್ದಾರೆ. ಕೆಲ ಜಾನುವಾರುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಒಂದೇ ವಾರದಲ್ಲಿ 40 ರಿಂದ 50 ಸಾವಿರ ರೂ. ಬೆಲೆಬಾಳುವ 15 ಎಮ್ಮೆ, ಹಸುಗಳು ಮೃತಪಟ್ಟಿವೆ. 80 ಸಾವಿರ ರೂ. ಬೆಲೆಯ ಎತ್ತುಗಳು ಸತ್ತಿವೆ. ಈ ಕುರಿತು ವೈದ್ಯರಿಗೆ ಮೇಲಿಂದ ಮೇಲೆ ತಿಳಿಸಿದರೂ ಪ್ರಯೋಜನವಾ ಗುತ್ತಿಲ್ಲ. ಹೈನು ಗಾರಿಕೆ ನಂಬಿ ಕೊಂಡು ಬದುಕು ಸಾಗಿಸುತ್ತಿರುವ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ ಎಂದು ಗ್ರಾಮಸ್ಥರಾದ ಶಿವನಗೌಡ ಪಾಟೀಲ, ಎಂ.ಎಸ್. ನಾಯಕ್, ಪಿ.ಹೊರಟ್ಟಿ ಇತರರು ಅಳಲು ತೋಡಿಕೊಂಡಿದ್ದಾರೆ.

    ಮೂಡಲಗಿ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಹುಚ್ಚು ನರಿ ಕಡಿತದಿಂದ ಹಸು, ಎಮ್ಮೆ, ಎತ್ತುಗಳು ಮೃತಪಟ್ಟಿರುವ ಕುರಿತು ಮಾಹಿತಿ ಬಂದಿದೆ. ಕೂಡಲೇ ಚಿಕಿತ್ಸೆ ನೀಡುವಂತೆ ಸ್ಥಳೀಯ ವೈದ್ಯರಿಗೆ ಸೂಚಿಸಲಾಗಿದೆ. ಅಲ್ಲದೆ, ರೇಬಿಸ್ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೃತಪಟ್ಟ ಜಾನುವಾರುಗಳಿಗೆ ಸರ್ಕಾರದಿಂದ ಪರಿಹಾರ ಕೊಡಿಸಲಾಗುವುದು.
    | ಎ.ಕೆ. ಚಂದ್ರಶೇಖರ ಜಂಟಿ ನಿರ್ದೇಶಕ, ಪಶುಸಂಗೋಪನಾ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts