More

    ಶತಕ ವಂಚಿತ ರಿಚಾ ಘೋಷ್, ದೀಪ್ತಿ ಶರ್ಮ ಆಟ ವ್ಯರ್ಥ: 3 ರನ್‌ಗಳ ರೋಚಕ ಸೋಲುಂಡ ಭಾರತ

    ಮುಂಬೈ: ವಿಕೆಟ್ ಕೀಪರ್-ಬ್ಯಾಟುಗಾರ್ತಿ ರಿಚಾ ಘೋಷ್ (96 ರನ್, 117 ಎಸೆತ, 13 ಬೌಂಡರಿ) ಭರ್ಜರಿ ಬ್ಯಾಟಿಂಗ್ ಹೊರತಾಗಿಯೂ ಭಾರತ ತಂಡ ಮಹಿಳೆಯರ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಎದುರು 3 ರನ್‌ಗಳಿಂದ ವೀರೋಚಿತ ಸೋಲು ಕಂಡಿದೆ. ಇದರೊಂದಿಗೆ ಹರ್ಮಾನ್‌ಪ್ರೀತ್ ಕೌರ್ ಬಳಗ 3 ಪಂದ್ಯಗಳ ಸರಣಿಯಲ್ಲಿ 0-2ರಿಂದ ಸೋಲು ಅನುಭವಿಸಿದೆ. 3ನೇ ಹಾಗೂ ಅಂತಿಮ ಪಂದ್ಯ ಮಂಗಳವಾರ ನಡೆಯಲಿದೆ.

    ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಆಸೀಸ್, ದೀಪ್ತಿ ಶರ್ಮ (38ಕ್ಕೆ 5) ಬಿಗಿ ಬೌಲಿಂಗ್ ದಾಳಿಯ ನಡುವೆಯೂ, ಪೋಬೆ ಲಿಚ್‌ಫೀಲ್ಡ್ (63 ರನ್, 98 ಎಸೆತ, 6 ಬೌಂಡರಿ) ಹಾಗೂ ಎಲ್ಲಿಸ್ ಪೆರ‌್ರಿ (50 ರನ್, 47 ಎಸೆತ, 5 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳ ಬಲದಿಂದ 8 ವಿಕೆಟ್‌ಗೆ 258 ರನ್ ಪೇರಿಸಿತು. ಪ್ರತಿಯಾಗಿ ರಿಚಾ ೋಷ್ ಹಾಗೂ ಜೆಮೀಮಾ ರೋಡ್ರಿಗಸ್ (44) ಜತೆಯಾಟದ ನಡುವೆಯೂ 8 ವಿಕೆಟ್‌ಗೆ 255 ರನ್‌ಗಳಿಸಲಷ್ಟೇ ಶಕ್ತವಾಯಿತು. ಫೀಲ್ಡಿಂಗ್‌ನಲ್ಲಿ ಒಟ್ಟು ಏಳು ಕ್ಯಾಚ್ ಕೈಚೆಲ್ಲಿದ ಭಾರತ ಅಂತಿಮ ಓವರ್‌ನಲ್ಲಿ 18 ರನ್ ಬಿಟ್ಟುಕೊಟ್ಟಿದ್ದು ಪ್ರಮುಖ ಹಿನ್ನಡೆ ಎನಿಸಿತು.

    ಆಸ್ಟ್ರೇಲಿಯಾ: 8 ವಿಕೆಟ್‌ಗೆ 258 (ಲಿಚ್ ಫೀಲ್ಡ್ 63, ಹೀಲಿ 13, ಎಲ್ಲಿಸ್ 50, ಮೆಕ್‌ಗ್ರಾತ್ 24, ಅನ್ನಾಬೆಲ್ 23, ಜಾರ್ಜಿಯಾ 22, ಅಲಾನ್ ಕಿಂಗ್ 28*, ದೀಪ್ತಿ ಶರ್ಮ 38ಕ್ಕೆ 5, ಶ್ರೇಯಾಂಕಾ 43ಕ್ಕೆ 1).

    ಭಾರತ: 8 ವಿಕೆಟ್‌ಗೆ 255 (ಸ್ಮತಿ 34, ಯಸ್ತಿಕಾ 14, ರಿಚಾ 96, ಜೆಮೀಮಾ 44, ಹರ್ಮಾನ್‌ಪ್ರೀತ್ 5, ದೀಪ್ತಿ 24*, ವಸಾಕರ್ 8, ಶ್ರೇಯಾಂಕಾ 5*, ಅನ್ನಾಬೆಲ್ 47ಕ್ಕೆ3, ಜಾರ್ಜಿಯಾ 39ಕ್ಕೆ 2).

    ಟಿ20 ಕ್ರಿಕೆಟ್ ಬಳಿಕ ಟೀಮ್ ಇಂಡಿಯಾ ಪರ ಏಕದಿನಕ್ಕೂ ಪದಾರ್ಪಣೆ ಮಾಡಿದ ಆರ್‌ಸಿಬಿ ಆಲ್ರೌಂಡರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts