More

    ಟಿ20 ಕ್ರಿಕೆಟ್ ಬಳಿಕ ಟೀಮ್ ಇಂಡಿಯಾ ಪರ ಏಕದಿನಕ್ಕೂ ಪದಾರ್ಪಣೆ ಮಾಡಿದ ಆರ್‌ಸಿಬಿ ಆಲ್ರೌಂಡರ್

    ಮುಂಬೈ: ವಿಕೆಟ್ ಕೀಪರ್-ಬ್ಯಾಟುಗಾರ್ತಿ ರಿಚಾ ೋಷ್ (96 ರನ್, 117 ಎಸೆತ, 13 ಬೌಂಡರಿ) ಭರ್ಜರಿ ಬ್ಯಾಟಿಂಗ್ ಹೊರತಾಗಿಯೂ ಭಾರತ ತಂಡ ಮಹಿಳೆಯರ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಎದುರು 3 ರನ್‌ಗಳಿಂದ ವೀರೋಚಿತ ಸೋಲು ಕಂಡಿದೆ. ಇದರೊಂದಿಗೆ ಹರ್ಮಾನ್‌ಪ್ರೀತ್ ಕೌರ್ ಬಳಗ 3 ಪಂದ್ಯಗಳ ಸರಣಿಯಲ್ಲಿ 0-2ರಿಂದ ಸೋಲು ಅನುಭವಿಸಿದೆ. 3ನೇ ಹಾಗೂ ಅಂತಿಮ ಪಂದ್ಯ ಮಂಗಳವಾರ ನಡೆಯಲಿದೆ.

    ಶ್ರೇಯಾಂಕಾ ಪದಾರ್ಪಣೆ: ಇಂಗ್ಲೆಂಡ್ ವಿರುದ್ಧದ ಪದಾರ್ಪಣೆಯ ಟಿ20 ಸರಣಿಯಲ್ಲಿ ಗರಿಷ್ಠ ವಿಕೆಟ್ ಸಾಧನೆ ಮಾಡಿದ ಕರ್ನಾಟಕದ ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ ಶನಿವಾರ ಏಕದಿನಕ್ಕೂ ಪದಾರ್ಪಣೆ ಮಾಡಿದರು. ಸೈಕಾ ಇಶಾಕ್ ಬದಲಿಗೆ ಶ್ರೇಯಾಂಕಾ ಸ್ಥಾನ ಪಡೆದರು. ಹರ್ಮಾನ್‌ಪ್ರೀತ್ ಕೌರ್ ಕ್ಯಾಪ್ ನೀಡಿದರು. ಅನಾರೋಗ್ಯದಿಂದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಉಪನಾಯಕಿ ಸ್ಮತಿ ಮಂದನಾಗೆ ಶೆಾಲಿ ವರ್ಮ ಸ್ಥಾನ ಬಿಟ್ಟುಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts