More

    ರಿಯಾ ಚಕ್ರವರ್ತಿಗೆ ಅಕ್ಟೋಬರ್​ 20ರವರೆಗೂ ಮುಂದುವರೆದ ಬಂಧನ

    ಮುಂಬೈ: ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್​ ಸಿಂಗ್​ ರಜಪೂತ್​ ಗೆಳತಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೋವಿಕ್​​ ಚಕ್ರವರ್ತಿಗೆ ಇಂದು ಬೇಲ್​ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ನ್ಯಾಯಾಲಯವು ರಿಯಾ ಮತ್ತು ಶೋವಿಕ್​ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಅಕ್ಟೋಬರ್​ 20ರವರೆಗೂ ವಿಸ್ತರಿಸಿದೆ.

    ಇದನ್ನೂ ಓದಿ: ಜ್ಯೂನಿಯರ್​ ರಾಜಕುಮಾರ್​ ಎಂದೇ ಜನಪ್ರಿಯರಾಗಿದ್ದ ಜಯಕುಮಾರ್​ ಇನ್ನಿಲ್ಲ

    ಬಾಲಿವುಡ್​ ನಟ ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣದಲ್ಲಿ ರಿಯಾ ಅವರನ್ನು ವಿಚರಣೆ ಮಾಡಿದಾಗ, ಅವರಿಗೆ ಡ್ರಗ್ಸ್​ ನಂಟಿರುವುದು ಪತ್ತೆಯಾಗಿತ್ತು. ಈ ಸಂಬಂಧ ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ (ಎನ್​ಸಿಬಿ) ಅಧಿಕಾರಿಗಳು, ರಿಯಾ ಮತ್ತು ಶೋವಿಕ್​ ಅವರನ್ನು ಬಂಧಿಸಿದ್ದರು.

    ಕಳೆದ 20ಕ್ಕೂ ಹೆಚ್ಚು ದಿನಗಳಿಂದ ನ್ಯಾಯಾಂಗ ಬಂಧನದಲ್ಲಿರುವ ರಿಯಾ ಮತ್ತು ಆಕೆಯ ಸಹೋದರ, ಎನ್​ಸಿಬಿ ಅಧಿಕಾರಿಗಳೆದರು ಹಲವು ಸ್ಪೋಟಕ ಮಾಹಿತಿಗಳನ್ನು ಹೇಳಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ಡ್ರಗ್ಸ್​ ಜಾಲದಲ್ಲಿ ಹಲವು ಬಾಲಿವುಡ್​ ನಟ-ನಟಿಯರ ಲಿಂಕ್​ ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆನ್ನಲಾಗಿದೆ.

    ರಿಯಾ ಮತ್ತು ಶೋವಿಕ್​ ಕೊಟ್ಟ ಮಾಹಿತಿಯ ಮೇಲೆ ಎನ್​ಸಿಬಿ ಅಧಿಕಾರಿಗಳು ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್​, ಸಾರಾ ಅಲಿ ಖಾನ್​ ಮತ್ತು ರಾಕುಲ್​ ಪ್ರೀತ್​ ಸಿಂಗ್​ ಅವರನ್ನು ಕರೆದು ವಿಚಾರಣೆ ನಡೆಸಲಾಗಿದೆ.

    ಇದನ್ನೂ ಓದಿ: ‘ಆರ್​ಆರ್​ಆರ್​’ ಶೂಟಿಂಗ್​ ಶುರು ಆಯ್ತು ಅಂತ ಹೇಳೋಕೆ ಒಂದು ಪ್ರೋಮೋ …

    ಹೀಗಿರುವಾಗಲೇ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ನ್ಯಾಯಾಂಗ ಬಂಧನ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು ಬಂಧನ ಅವಧಿಯನ್ನು ಅಕ್ಟೋಬರ್ 20ರವರೆಗೆ ಮತ್ತೆ ವಿಸ್ತರಿಸಿ ನ್ಯಾಯಾಲಯ ಆದೇಶ ನೀಡಿದೆ.

    ಪಾಯಲ್​ ಮೇಲೆ ಒಂದು ಕೋಟಿ ಮಾನನಷ್ಟ ಕೇಸ್​ ಹಾಕಿದ ರಿಚಾ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts