More

    ಮಹಾ ಜನರಿಗೆ ವಾಪಸ್ ಕಳುಹಿಸಿದ ಪೊಲೀಸ್ ಸಿಬ್ಬಂದಿ

    ರೇವತಗಾಂವ: ಮಹಾರಾಷ್ಟ್ರದಿಂದ ಬತ್ತಿದ ಭೀಮಾ ನದಿ ಮೂಲಕ ನಿತ್ಯ ನೂರಾರು ಜನರು ಉಮರಜ ಗ್ರಾಮದ ಮೂಲಕ ಒಳನುಸುಳುತ್ತಿರುವುದನ್ನು ಪೊಲೀಸ್ ಸಿಬ್ಬಂದಿ ತಡೆದು ವಾಪಸ್ ಕಳುಹಿಸಿದ್ದಾರೆ. ಈ ಕುರಿತು ಜೂ.8 ರಂದು ‘ವಿಜಯವಾಣಿಯಲ್ಲಿ ‘ಮಹಾ ಜನರ ದಾಂಗುಡಿ’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ವರದಿಗೆ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಸಿಬ್ಬಂದಿ ತಕ್ಷಣವೇ ಕಾರ್ಯ ಪ್ರವೃತ್ತರಾಗಿ ಉಮರಜ ಗ್ರಾಮದ ಬಳಿ ಬತ್ತಿದ ಭೀಮೆ ಮೂಲಕ ಮಹಾರಾಷ್ಟ್ರದಿಂದ ಅಕ್ರಮ ಒಳ ನುಸುಳುತ್ತಿರುವವರನ್ನು ತಡೆದು ತರಾಟೆಗೆ ತೆಗೆದುಕೊಂಡು ವಾಪಸ್ ಕಳುಹಿಸಿದರು.

    ಈಗಾಗಲೇ ಮಹಾರಾಷ್ಟ್ರದಲ್ಲಿ ವರ್ಷಧಾರೆ ಹೆಚ್ಚಾಗಿರುವುದರಿಂದ ಉಜನಿ ಜಲಾಶಯದಿಂದ 4 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಟ್ಟಿರುವುದರಿಂದ, ಇನ್ನೆರಡ್ಮೂರು ದಿನಗಳಲ್ಲಿ ಗಡಿ ಭಾಗದಲ್ಲಿನ ಭೀಮಾ ನದಿಗೆ ಪ್ರವೇಶಿಸಲಿದ್ದು, ಆಗ ಅಕ್ರಮ ಗಡಿ ನುಸುಳುವುದು ಕಡಿಮೆಯಾಗಲಿದೆ. ಅಲ್ಲಿಯವರಗೆ ಪೊಲೀಸ್ ಸಿಬ್ಬಂದಿಯನ್ನು ಈ ಭಾಗಗಳಲ್ಲಿ ನಿಯೋಜಿಸಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts