More

    ವಂದೇ ಭಾರತ್​ ರೈಲಿನಲ್ಲಿ ಟಿಕೆಟ್​ ಇಲ್ಲದೆ ಪ್ರಯಾಣಿಸಿ ಸಿಕ್ಕಿಬಿದ್ದ ಪೊಲೀಸ್​ ಅಧಿಕಾರಿ! ಮುಂದೇನಾಯ್ತು ನೀವೇ ನೋಡಿ

    ನವದೆಹಲಿ: ಪ್ರಯಾಣಿಕರು ಟಿಕೆಟ್​ ಇಲ್ಲದೆ ರೈಲಿನಲ್ಲಿ ಪ್ರಯಾಣ ಮಾಡುವ ಸಾಕಷ್ಟು ಪ್ರಕರಣಗಳು ನಿತ್ಯವು ವರದಿಯಾಗುತ್ತಲೇ ಇರುತ್ತವೆ. ಇದನ್ನು ತಡೆಗಟ್ಟಲು ರೈಲ್ವೆ ಇಲಾಖೆ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದರೂ ಪೂರ್ಣ ಪ್ರಮಾಣದಲ್ಲಿ ಯಶಸ್ಸನ್ನು ಸಾಧಿಸಿಲ್ಲ. ಸ್ಥಳೀಯ ವಾಸಿಗಳು ಈ ಕೃತ್ಯವನ್ನು ಎಸಗುವುದು ಸಾಮಾನ್ಯ ಸಂಗತಿ. ಆದರೆ, ಪೊಲೀಸ್​ ಅಧಿಕಾರಿಯೇ ಟಿಕೆಟ್​ ಇಲ್ಲದೆ ಅದರಲ್ಲೂ ಪ್ರತಿಷ್ಠಿತ ವಂದೇ ಭಾರತ್​ ರೈಲಿನಲ್ಲಿ ಪ್ರಯಾಣಿಸಿರುವುದು ಎಷ್ಟು ಸರಿ? ಎಂಬ ಪ್ರಶ್ನೆ ಇದೀಗ ಮೂಡಿದೆ.

    ಪೊಲೀಸ್​ ಅಧಿಕಾರಿಯೊಬ್ಬರು ವಂದೇ ಭಾರತ್​ ರೈಲಿನಲ್ಲಿ ಟಿಕೆಟ್​ ಇಲ್ಲದೆ, ಟೀ ಸವಿಯುತ್ತಾ ಪ್ರಯಾಣ ಮಾಡುವಾಗ ಪ್ರಯಾಣ ಟಿಕೆಟ್ ಪರೀಕ್ಷಕ (ಟಿಟಿಇ)ರ ಕೈಗೆ ಸಿಕ್ಕಿಬಿದ್ದು, ವಾಗ್ವಾದ ನಡೆಸಿದ ಪ್ರಸಂಗ ಜರುಗಿದೆ. ಈ ಘಟನೆ ಎಲ್ಲಿ ನಡೆದಿದ್ದು ಎಂಬುದರ ಮಾಹಿತಿ ಇಲ್ಲ. ಆದರೆ, ಇದಕ್ಕೆ ಸಂಬಂಧಿಸಿದ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಇದನ್ನೂ ಓದಿ: ಝಗಮಗಿಸುವ ಡ್ರೆಸ್​​​ನಲ್ಲಿ ಜಾನ್ವಿ ಮಿಂಚಿಂಗ್​, ಅಮ್ಮನಂತೆ ಕ್ಯೂಟ್​​​ ಎಂದ ನೆಟ್ಟಿಗರು..!

    ಅದೇ ಕೋಚ್‌ನಲ್ಲಿ ಕುಳಿತಿದ್ದ ಕೆಲವು ಪ್ರಯಾಣಿಕರು ಪೊಲೀಸ್​ ಅಧಿಕಾರಿ ಮತ್ತು ಟಿಟಿಇ ನಡುವಿನ ವಾಗ್ವಾದವನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ಸಾಮಾಜಿಕ ಜಾಲತಾಣ ವೇದಿಕೆ ಎಕ್ಸ್ ಮೂಲಕ ಹಂಚಿಕೊಂಡಿದ್ದಾರೆ. ತಕ್ಷಣವೇ ವಿಡಿಯೋ ವೈರಲ್ ಆಗಿದ್ದು, ಅನೇಕ ಚರ್ಚೆಗಳನ್ನು ಹುಟ್ಟುಹಾಕಿದೆ. ಪೊಲೀಸ್ ಅಧಿಕಾರಿಯ ನಾಚಿಕೆಗೇಡಿನ ಕೃತ್ಯವನ್ನು ಖಂಡಿಸಿದ್ದಾರೆ. ಈಗಾಗಲೇ ಈ ವಿಡಿಯೋವನ್ನು 2 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.

    ತಾನು ಪ್ರಯಾಣ ಮಾಡಬೇಕಿದ್ದ ರೈಲು ಮಿಸ್​ ಆದ ಬಳಿಕವೇ ವಂದೇ ಭಾರತ್‌ ರೈಲನ್ನು ಏರಿದ್ದಾಗಿ ಪೊಲೀಸ್​ ಅಧಿಕಾರಿ ಸಮರ್ಥನೆ ನೀಡಿದ್ದಾರೆ. ಅಲ್ಲದೆ, ಟಿಟಿಇ ಬಳಿ ಕ್ಷಮೆ ಸಹ ಯಾಚಿಸಿದ್ದಾರೆ. ಆದರೆ, ಅಲ್ಲಿಯೇ ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕರು ಅಧಿಕಾರಿಯನ್ನು ಮುಂದಿನ ನಿಲ್ದಾಣದಲ್ಲಿ ಕೆಳಗಿಳಿಸುವಂತೆ ಟಿಟಿಇ ಬಳಿ ಕೇಳಿದರು.

    ವಿಡಿಯೋಗೆ ಕಾಮೆಂಟ್‌ಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಮಂದಿ ಹೇಗೆ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ನೋಡಿ, ಸಮವಸ್ತ್ರವನ್ನು ಧರಿಸಿದರೆ ಎಲ್ಲಾ ಅಧಿಕಾರವೂ ಇದೆ ಎಂದು ಭಾವಿಸಿದ್ದಾರೆ ಮತ್ತು ರಸ್ತೆಯಲ್ಲಿ ಸಾಮಾನ್ಯ ನಾಗರಿಕನಿಗೆ ಈ ರೀತಿ ಆಗಿದ್ದರೆ ಇದೇ ಪೊಲೀಸರು ಹಿಂದು-ಮುಂದು ನೋಡದೆಯೇ ಟ್ರಾಫಿಕ್ ಚಲನ್ ನೀಡುತ್ತಿದ್ದರು ಎಂದು ಟೀಕಾ ಪ್ರಹಾರ ನಡೆಸಿದ್ದಾರೆ. (ಏಜೆನ್ಸೀಸ್​)

    ಉತ್ತರ ಕೊರಿಯಾದಿಂದ ರಷ್ಯಾಗೆ ಶಸ್ತ್ರಾಸ್ತ್ರ ಪೂರೈಕೆ: ಉಪಗ್ರಹ ಚಿತ್ರ ಬಿಡುಗಡೆ ಮಾಡಿದ ಅಮೆರಿಕ

    ಇಂಡೋ-ಪಾಕ್​ ಹೈವೋಲ್ಟೇಜ್​ ಪಂದ್ಯಕ್ಕೂ ಮುನ್ನ ವಿಶೇಷ ಮನವಿ ಮಾಡಿದ ಸೂರ್ಯಕುಮಾರ್​ ಯಾದವ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts