More

    ಜೇವೂರ ರೇವಣಸಿದ್ಧೇಶ್ವರ ಜಾತ್ರೆ

    ಝಳಕಿ: ಸಮೀಪದ ಸುಕ್ಷೇತ್ರ ಜೇವೂರದ ಹಠಯೋಗಿ ರೇವಣಸಿದ್ಧೇಶ್ವರರ 37ನೇ ಪುಣ್ಯಾರಾಧನೆ ಮಾ. 11 ರಿಂದ 15ರ ವರೆಗೆ ನಡೆಯಲ್ಲಿದೆ.

    ಮಾ. 11 ರಂದು ಹತ್ತಳ್ಳಿಯ ಶ್ರೀ ಗುರು ಗುರುಪಾದೇಶ್ವರ ಶಿವಾಚಾರ್ಯರು ಹಾಗೂ ತಡವಲಗಾದ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರ ಮಾರ್ಗದರ್ಶನದಲ್ಲಿ ಕೋಟಿ ಜಪಯಜ್ಞ, ವೀಣಾ ಸಲ್ಲಿಸುವ ಕಾರ್ಯಕ್ರಮ, ಧರ್ಮಸಭೆ, ರಾತ್ರಿ ‘ಧರ್ಮ ವಿಜಯ’ ಬಯಲಾಟ ಪ್ರದರ್ಶನಗೊಳ್ಳಲಿದೆ.

    ಮಾ. 12 ರಂದು ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳ ಸಾನ್ನಿಧ್ಯದಲ್ಲಿ ಸಾಮೂಹಿಕ ವಿವಾಹ ನಡೆಯಲಿದೆ. ಮಾ. 13 ರಂದು ಬೆಳಗ್ಗೆ 9 ರಿಂದ 6 ರಿಂದ ಹರದೇಸಿ ಅವರಿಂದ ಗೀ ಗೀ ಪದಗಳು, ರಾತ್ರಿ 10 ಗಂಟೆಗೆ ಭಜನಾ ಪದಗಳು ನಡೆಯಲಿವೆ.

    ಮಾ. 14 ರಂದು ಬೆಳಗ್ಗೆ 8 ಗಂಟೆಯಿಂದ ಕಾಶೀಪೀಠದ ಡಾ. ಮಲ್ಲಿಕಾರ್ಜುನ ವಿಶ್ವಾರಾದ್ಯ ಭಗವತ್ಪಾದಂಗಳ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮ ನಡೆಯಲಿದೆ. ಮಾ. 15 ರಂದು ಬೆಳಗ್ಗೆ ರೇವಣಸಿದ್ಧೇಶ್ವರ ಶ್ರೀಗಳ ಬೆಳ್ಳಿಮೂರ್ತಿ ಮೆರವಣಿಗೆ, 11 ಗಂಟೆಗೆ ಡಾ. ಮುರುಘರಾಜೇಂದ್ರ ಸ್ವಾಮೀಜಿಯವರ ಅಮೃತ ಹಸ್ತದಿಂದ ರೇವಣಸಿದ್ಧೇಶ್ವರ ಶ್ರೀಗಳ ಕತೃಗದ್ದುಗೆಗೆ ಪುಷ್ಪವೃಷ್ಠಿ, 3ಗಂಟೆಗೆ ರಥೋತ್ಸವ 4 ಗಂಟೆಗೆ ‘ಜಂಗೀ ನಿಕಾಲಿ ಗದಾ ಕುಸ್ತಿಗಳು’, ರಾತ್ರಿ 8 ಗಂಟೆಗೆ ವರ್ಣ ರಂಜಿತ ಮದ್ದು ಸುಡುವುದು, ರಾತ್ರಿ 10 ಗಂಟೆಗೆ ‘ಮಾನವಂತರ ಮಗ’ ನಾಟಕ ಪ್ರದರ್ಶನದೊಂದಿಗೆ ಜಾತ್ರೆಗೆ ತೆರೆ ಬೀಳುತ್ತದೆ ಎಂದು ಜಾತ್ರಾ ಕಮಿಟಿ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts