More

    ಬಯಲಾಟ ಕಲಾವಿದೆ ಕೆ.ನಾಗರತ್ನಮ್ಮಗೆ ಕಲಾರತ್ನ ಪ್ರಶಸ್ತಿ

    ಕಂಪ್ಲಿ: ತಾಲೂಕಿನ ನಂ.3 ಸಣಾಪುರದಲ್ಲಿ ಶ್ರೀ ಉದ್ಭವ ವೀರಭದ್ರೇಶ್ವರ ಜಾತ್ರೆ ಪ್ರಯುಕ್ತ ಶನಿವಾರ ಗಿರಿಜಾ ಕಲ್ಯಾಣ ಬಯಲಾಟ ಪ್ರದರ್ಶನಗೊಂಡಿತು.

    ಶ್ರೀ ವೀರಭದ್ರೇಶ್ವರ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ, ಬಯಲಾಟ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಕೂಡ್ಲಿಗಿಯ ಬಯಲಾಟ ಕಲಾವಿದೆ ಕೆ.ನಾಗರತ್ನಮ್ಮ, 1978ರಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದು ಗಂಡುಕಲೆ ಬಯಲಾಟವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ಪ್ರಮುಖಪಾತ್ರವಹಿಸಿದ್ದಾರೆ. ಗ್ರಾಮದಲ್ಲಿನ ಗಿರಿಜಾ ಕಲ್ಯಾಣ ಬಯಲಾಟದಲ್ಲಿ ರತಿ ಪಾತ್ರ ಅಭಿನಯದೊಂದಿಗೆ ತಮ್ಮ ರಂಗ ಸೇವೆಗೆ ವಿದಾಯ ಹೇಳಿದ್ದಾರೆ. ಅವರ ಜೀವನ ಶ್ರೇಷ್ಠ ಕಲೆಯನ್ನು ಗೌರವಿಸಿ ಕಲಾರತ್ನ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

    ಗಿರಿಜಾ ಕಲ್ಯಾಣ ಬಯಲಾಟ ಅಮೋಘವಾಗಿ ಪ್ರದರ್ಶನಗೊಂಡಿತು. ಈ ವೇಳೆ ಕಲಾವಿದೆ ನಾಗರತ್ನಮ್ಮಗೆ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚನ್ನವೀರ ಶರಣರ ಬಳಗದ ಅಧ್ಯಕ್ಷ ಜಿ.ಈಶಪ್ಪ, ಪ್ರಮುಖರಾದ ಕೆ.ಮರಿಶಾಂತ, ಎಂ.ಚನ್ನಪ್ಪ, ಕೆ.ಬಸವರಾಜ್, ಇಟ್ಗಿ ಬಸವರಾಜ್, ಟಿ.ಶರಣಪ್ಪ, ಗುಂಡೂರು ವೀರೇಶಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts