More

    ರಾಮ-ಕೃಷ್ಣ ಇತಿಹಾಸ ಪುರುಷರಲ್ಲ! ಮತ್ತೊಂದು ವಿವಾದ ಸೃಷ್ಟಿಸಿದ ನಿವೃತ್ತ ನ್ಯಾ. ವಸಂತ ಮುಳಸಾವಳಗಿ

    ವಿಜಯಪುರ: ರಾಮ ಮತ್ತು ಕೃಷ್ಣ ಇತಿಹಾಸ ಪುರುಷರಲ್ಲ, ಅವರು ಕೇವಲ ಕಾದಂಬರಿ ಪಾತ್ರಧಾರಿಗಳು ಎಂದು ನಿವೃತ್ತ ನ್ಯಾಯಾಧೀಶ ವಸಂತ ಮುಳಸಾವಳಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆದ ‘ಸಂವಿಧಾನ ಆಶಯ ಈಡೇರಿದೆಯೇ?’ ಎನ್ನುವ ವಿಚಾರಗೋಷ್ಠಿಯಲ್ಲಿ ಮಾತನಾಡಿದ ವಸಂತ ಮುಳಸಾವಳಗಿ, ರಾಮ ಮತ್ತು ಕೃಷ್ಣ ಇತಿಹಾಸ ಪುರುಷರಲ್ಲ. ಅವರು ಕೇವಲ ಕಾದಂಬರಿ ಪಾತ್ರಧಾರಿಗಳು. ಅಶೋಕ ಚಕ್ರವರ್ತಿ ನಿಜವಾದ ಇತಿಹಾಸ ಪುರುಷ ಎಂದು ಪ್ರತಿಪಾದಿಸಿದರು.

    ಅಕ್ಬರ್ ಹೆಂಡತಿ ಹಿಂದು. ಆಕೆ ಧರ್ಮಾಂತರ ಆಗಿರಲಿಲ್ಲ. ಆಕೆ ಹಿಂದೂ, ಅವ ಮುಸ್ಲಿಂ. ಅಕ್ಬರ್​ನ ಆಸ್ಥಾನದಲ್ಲಿ ಕೃಷ್ಣನ ಮಂದಿರ ಕಟ್ಟಿದ್ದಾನೆ, ಹೋಗಿ ನೋಡಬಹುದು. ಮುಸ್ಲಿಮರು ಹಾಗೆ ಮಾಡಿದ್ದಾರೆ, ಹೀಗೆ ಮಾಡಿದ್ದಾರೆ ಅಂತೀರಲ್ಲ, ಮುಸ್ಲಿಮರು ಏಳುನೂರು ವರ್ಷ ಆಳ್ವಿಕೆ ಮಾಡಿರೋದು ಇತಿಹಾಸ ಹೇಳುತ್ತೆ. ಅವರು ಹಿಂದೂಗಳನ್ನ ವಿರೋಧ ಮಾಡಿದ್ರು ಅಂದ್ರೆ ಒಬ್ಬ ಹಿಂದೂ ಭಾರತದಲ್ಲಿ ಇರುತ್ತಿರಲಿಲ್ಲ. ಎಲ್ಲರನ್ನೂ ಕೊಲ್ಲಬಹುದಿತ್ತು ಅವರು. ಅಷ್ಟಾದರೂ ಮುಸ್ಲಿಮರು ಅಲ್ಪಸಂಖ್ಯಾತರು ಯಾಕಾದ್ರು? ಎಂದು ವಸಂತ ಮುಳಸಾವಳಗಿ ಪ್ರಶ್ನಿಸಿದ್ದಾರೆ.

    ಯುವಕನಿಗೆ ಮದ್ವೆ ಆಸೆ ಹುಟ್ಟಿಸಿ ಹಾಸನದ ಮಹಿಳೆ ಹೀಗಾ ಮಾಡೋದು? ನನ್ನಾಕೆ ಡಿಸಿ… ಅಂತ ಖುಷಿಯಲ್ಲಿದ್ದವನಿಗೆ ಭಾರೀ ಸಂಕಷ್ಟ

    ಶಾಮಿಯಾನದ ಕಂಬ ಮುಟ್ಟಿದ ವಿದ್ಯಾರ್ಥಿ ಸಾವು: ಈಜು ಸ್ಪರ್ಧೆಗೆ ರಾಮನಗರಕ್ಕೆ ಆಗಮಿಸಿದ್ದವ ದುರಂತ ಅಂತ್ಯ

    ಮುಂಬೈ ಘಟನೆಯಿಂದ ಭಾರತದ ಬಗ್ಗೆ ನಿಮ್ಮ ಗ್ರಹಿಕೆ ಬದಲಾಯಿತೇ? ವಿದೇಶಿ​ ಯುವತಿಯ ಉತ್ತರಕ್ಕೆ ಮೆಚ್ಚುಗೆ ಮಹಾಪೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts