More

    ರಾಜಧಾನಿ ಬೆಂಗಳೂರಿನಲ್ಲಿ ಮದ್ಯ ಸಿಗಲ್ಲ; ಯಾಕೆ, ಎಷ್ಟು ದಿನ, ಎಲ್ಲೆಲ್ಲಿ..? ಇಲ್ಲಿದೆ ವಿವರ…

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿನ ಮದ್ಯಪ್ರಿಯರಿಗೆ ಇದು ಕಿಕ್ಕಿಳಿಸುವ ಸುದ್ದಿ ಎಂದರೂ ತಪ್ಪೇನಲ್ಲ. ಏಕೆಂದರೆ ಬೆಂಗಳೂರಿನಲ್ಲಿ ನಾಳೆಯಿಂದಲೇ ಮದ್ಯ ಸಿಗುವುದಿಲ್ಲ. ಮದ್ಯ ಮಾರಾಟ ಮಾಡದಂತೆ ಸರ್ಕಾರ ಆದೇಶ ಹೊರಡಿಸಿದೆ.

    ಹೌದು.. ವಿಧಾನ ಪರಿಷತ್ ಚುನಾವಣೆಯನ್ನು ಸುಗಮವಾಗಿ ನಡೆಸುವ ಸಲುವಾಗಿ ಚುನಾವಣೆ ಮುಂಚಿನ ಎರಡು ದಿನಗಳನ್ನು ಒಣದಿನ ಎಂದು ಘೋಷಿಸಿ, ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ.

    ಇದನ್ನೂ ಓದಿ: ವಿಧಾನಪರಿಷತ್ ಮಾಜಿ ಸದಸ್ಯನಿಗೀಗ ಬಂಧನದ ಭೀತಿ; ಮದುವೆ ವಿಚಾರದಲ್ಲಿ ಮಾಡಿದ್ದ ಜಾತಿ ನಿಂದನೆ..

    ಮದ್ಯ ಮಾರಾಟಕ್ಕೆ ನಿಷೇಧ ಹೇರಿರುವ ಆದೇಶ ನಾಳೆ ಅಂದರೆ ಡಿ. 8ರ ಸಂಜೆ 4ರಿಂದಲೇ ಜಾರಿಗೆ ಬರಲಿದೆ. ಈ ಆದೇಶ ಚುನಾವಣಾ ದಿನವಾದ ಡಿ. 10ರ ರಾತ್ರಿ 10 ಗಂಟೆಯವರೆಗೂ ಜಾರಿಯಲ್ಲಿ ಇರಲಿದೆ.

    ಇದನ್ನೂ ಓದಿ: ಕೋವಿಡ್ ಪರೀಕ್ಷೆಗೆ ಇಷ್ಟೇ ಹಣ ತೆಗೆದುಕೊಳ್ಳಬೇಕು; ಇದಕ್ಕಿಂತ ಜಾಸ್ತಿ ಪಡೆಯುವಂತಿಲ್ಲ

    ಮದ್ಯ ಮಾರಾಟ ನಿಷೇಧ ಆದೇಶವು ಬೆಂಗಳೂರು ಜಿಲ್ಲಾ ವ್ಯಾಪ್ತಿಯ 83 ಗ್ರಾಮ ಪಂಚಾಯಿತಿ ಹಾಗೂ ಆನೇಕಲ್​, ಅತ್ತಿಬೆಲೆ, ಬೊಮ್ಮಸಂದ್ರ ಪುರಸಭೆ ವ್ಯಾಪ್ತಿಗೆ ಅನ್ವಯಿಸಲಿದೆ. ಆದೇಶದಲ್ಲಿ ಸೂಚಿಸಿರುವ ಅವಧಿಯಲ್ಲಿ ಹಾಗೂ ನಿಗದಿತ ಪ್ರದೇಶದಲ್ಲಿ ಮದ್ಯ, ಬಿಯರ್​, ವೈನ್​, ಮಾದಕ ದ್ರವ್ಯಗಳ ಸರಬರಾಜು, ಸಾಗಾಟ, ಮಾರಾಟ, ಹೊಂದುವಿಕೆ ಹಾಗೂ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    26 ಮಕ್ಕಳಿದ್ದ ಶಾಲಾ ಬಸ್​ ಅಪಘಾತ; ದಾರಿ ತಪ್ಪಿ ಹೊಲದ ಏರಿಗೆ ಡಿಕ್ಕಿ ಹೊಡೆದ ಬಸ್…

    ಸಾಲಿಗ್ರಾಮ ದೇವಸ್ಥಾನದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ; ಕೆಲಸವಿಲ್ಲದೆ ಮಾನಸಿಕವಾಗಿ ಕುಗ್ಗಿ ಹೋಗಿದ್ದ..

    ವೈಡ್ ಬಾಲ್​ಗೆ ತಲೆ ಕೆಳಗಾದ ಅಂಪೈರ್​!; ಅಷ್ಟಕ್ಕೂ ಆಗಿದ್ದೇನು..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts