ವಿಧಾನಪರಿಷತ್ ಮಾಜಿ ಸದಸ್ಯನಿಗೀಗ ಬಂಧನದ ಭೀತಿ; ಮದುವೆ ವಿಚಾರದಲ್ಲಿ ಮಾಡಿದ್ದ ಜಾತಿ ನಿಂದನೆ..

Handcuffed
Person in handcuffs
Published on

ಉತ್ತರಕನ್ನಡ: ರಾಜ್ಯದಾದ್ಯಂತ ವಿಧಾನ ಪರಿಷತ್ ಚುನಾವಣೆ ಸಲುವಾಗಿ ಬಿರುಸಾದ ರಾಜಕೀಯ ಚಟುವಟಿಕೆ ನಡೆಯುತ್ತಿದ್ದರೆ ಇಲ್ಲೊಬ್ಬರು ಮಾಜಿ ಎಂಎಲ್​ಸಿಗೆ ಬಂಧನದ ಭೀತಿ ಕಾಡಲಾರಂಭಿಸಿದೆ. ಯಾವ ಕ್ಷಣದಲ್ಲಿ ಬಂಧನವಾಗುವುದೋ ಎಂಬ ಭಯದಲ್ಲಿ ಅವರಿದ್ದಾರೆ ಎನ್ನಲಾಗಿದೆ.

ಸದ್ಯ ಬಂಧನದ ಭೀತಿ ಎದುರಿಸುತ್ತಿರುವ ಈ ಮಾಜಿ ಎಂಎಲ್​ಸಿಯ ಹೆಸರು ಶ್ರೀಕಾಂತ ಘೋಟ್ನೇಕರ. ಉತ್ತರಕನ್ನಡ ಜಿಲ್ಲೆಯ ಕಾರವಾರದ ಇವರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2019ರ ಸೆ. 11ರಂದು ದಾಖಲಾಗಿದ್ದ ಈ ದೂರಿನ ಹಿನ್ನೆಲೆಯಲ್ಲಿ ಬಂಧನವಾಗುವ ಸಾಧ್ಯತೆ ಇರುವುದರಿಂದ ಇವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

ಆದರೆ ವಿಧಾನಪರಿಷತ್ ಮಾಜಿ ಸದಸ್ಯ ಶ್ರೀಕಾಂತ ಘೋಟ್ನೇಕರ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕಾರವಾರ ಸೆಷನ್ಸ್​ ನ್ಯಾಯಾಲಯ ಇಂದು ತಿರಸ್ಕರಿಸಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಇವರ ಬಂಧನವಾದರೂ ಅಚ್ಚರಿ ಏನಿಲ್ಲ. ಅದೇ ಕಾರಣಕ್ಕೆ ಮಾಜಿ ಎಂಎಲ್​ಸಿ ವಿಚಲಿತಗೊಂಡಿದ್ದಾರೆ ಎನ್ನಲಾಗಿದೆ.

ಮದುವೆಯೊಂದರ ವಿಚಾರದಲ್ಲಿ ಶ್ರೀಕಾಂತ ಜಾತಿನಿಂದನೆ ಮಾಡಿದ್ದಾರೆ. ಪೊಲೀಸ್ ಠಾಣೆಯಲ್ಲೇ ಜಾತಿ ಹೆಸರಲ್ಲಿ ನಿಂದಿಸಿದ್ದರು ಎಂಬುದಾಗಿ ವಿನೋಧ ಮಹಾದೇವ ತೇಗನಳ್ಳಿ ಅವರು 2019ರಲ್ಲಿ ಶ್ರೀಕಾಂತರ ವಿರುದ್ಧ ದೂರು ದಾಖಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net