More

    ಕಾಂಗ್ರೆಸ್ ಕೊಟ್ಟಿದ್ದ ಭರವಸೆಗಳೇನು? ಅಧಿಕಾರ ವಹಿಸಿಕೊಂಡ ತಕ್ಷಣ ಈಡೇರಿಸಬೇಕಾದ ವಾಗ್ದಾನಗಳೇನು?

    ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹೇಗಾದರೂ ಗೆಲ್ಲಲೇ ಬೇಕು ಎಂದು ಪಣತೊಟ್ಟಿದ್ದ ಕಾಂಗ್ರೆಸ್​ ಚುನಾವಣಾ ಕಣದಲ್ಲಿ ಗೆದ್ದಿದೆ. ಅಧಿಕಾರಕ್ಕೆ ಬಂದರೆ ಮೊದಲ ಸಚಿವ ಸಂಪುಟ ಸಭೆಯಲ್ಲೇ ಹಲವಾರು ಭರವಸೆಗಳನ್ನು ಈಡೇರಿಸುವುದಾಗಿ ಹೇಳಿತ್ತು. ಉಚಿತ ಕೊಡುಗೆಗಳ ಐದು ಗ್ಯಾರಂಟಿಗಳ ಜತೆಗೆ ಮತದಾರರನ್ನು ಸೆಳೆಯಲು ಭರಪೂರ ಆಶ್ವಾಸನೆಗಳನ್ನು ನೀಡಿತ್ತು.

    ಹೀಗೆ ವಾಗ್ದಾನ ಮಾಡಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು, ಆಡಳಿತ ಪಕ್ಷದ ನಿರೀಕ್ಷೆಯನ್ನು ಮೀರಿ ಅಧಿಕಾರದ ಗದ್ದುಗೆ ಏರಲು ಸಹಾಯಕವಾಗಿವೆ ಎನ್ನಬಹುದು. ಚುನಾವಣೆ ಮುನ್ನ ಕಾಂಗ್ರೆಸ್​ ಪಕ್ಷವು ಸರ್ಕಾರಿ ಮತ್ತು ಅನುದಾನಿತ ನೌಕರರಿಗೆ ಹಳೆ ಪಿಂಚಣಿ ಯೋಜನೆ(ಒಪಿಎಸ್) ಮರು ಜಾರಿ, ಎಲ್ಲ 25 ಸಾವಿರ ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸುವುದಾಗಿ ಹೇಳಿತ್ತು.

    ಇದನ್ನೂ ಓದಿ: ಕಲ್ಲು ಮೊಟ್ಟೆ ಗ್ರಾಮದಲ್ಲಿ ಕುಡಿವ ನೀರಿಗೆ ತತ್ವಾರ

    ಜತೆಗೆ ಶೇ 50ರಿಂದ 75ರವರೆಗೆ ಮೀಸಲಾತಿ ಮಿತಿಯನ್ನು ಹೆಚ್ಚಿಸಲು ಸೂಕ್ತ ಕ್ರಮ, ಪೊಲೀಸ್ ಹುದ್ದೆಗಳಲ್ಲಿ ಶೇ 33ರಷ್ಟು ಮಹಿಳಾ ಮೀಸಲಾತಿ, ಹಗಲು ವೇಳೆ ಗ್ರಾಮೀಣ ಪ್ರದೇಶಗಳಿಗೆ 8 ಗಂಟೆ ತ್ರಿ ಫೇಸ್​ ವಿದ್ಯುತ್, ಮೀನುಗಾರಿಕಾ ಕ್ಷೇತ್ರದಲ್ಲಿ 10 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿ ಮತ್ತು ವಿಶ್ವವಿದ್ಯಾಲಯಗಳ ಉನ್ನತೀಕರಣಕ್ಕೆ 12 ಸಾವಿರ ಕೋಟಿ ಆವರ್ತ ನಿಧಿಗಳ ಹಾಗೂ ರೈತರಿಗೆ ಬಡ್ಡಿರಹಿತ ಸಾಲ 3 ಲಕ್ಷದಿಂದ 10 ಲಕ್ಷ ವಿಸ್ತರಣೆ ಬಗ್ಗೆ ಆಶ್ವಾಸನೆ ನೀಡಿತ್ತು.

    ಅಲ್ಲದೇ, ಹಂತಹಂತವಾಗಿ ಐದು ಗ್ಯಾರಂಟಿಗಳನ್ನು ಕೂಡ ಕಾಂಗ್ರೆಸ್‌ ಘೋಷಿಸಿತ್ತು. ಗೃಹ ಜ್ಯೋತಿಯಡಿ ಪ್ರತಿ ತಿಂಗಳು 200 ಯುನಿಟ್ ವಿದ್ಯುತ್‌ ಉಚಿತ ಕೊಡುವುದಾಗಿ, ಗೃಹಲಕ್ಷ್ಮಿಯಡಿ ಪ್ರತಿ ಮನೆಯ ಯಜಮಾನಿಗೆ ಮಾಸಿಕ 2,000ರೂ.ಗಳು, ಅನ್ನಭಾಗ್ಯದಡಿ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ ಉಚಿತ, ಪ್ರತಿ ತಿಂಗಳು ಡಿಪ್ಲೊಮಾದವರಿಗೆ 1500 ಮತ್ತು ಪದವೀಧರರಿಗೆ 3,000 ರೂ. ಮತ್ತು ಸರ್ಕಾರಿ ಬಸ್‌ಗಳಲ್ಲಿ ಎಲ್ಲ ಮಹಿಳೆಯರಿಗೆ ಉಚಿತ ಪ್ರಯಾಣದ ಬಗ್ಗೆ ಗ್ಯಾರಂಟಿಯನ್ನು ನೀಡಿತ್ತು. ಅಲ್ಲದೇ, ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಬಿಜೆಪಿ ಸರ್ಕಾರದ ಎಲ್ಲ ಜನವಿರೋಧಿ ಕಾನೂನು ರದ್ದು ಮಾಡುವುದು. ಕೈಬಿಟ್ಟ ಪಠ್ಯಗಳ ಮರು ಸೇರ್ಪಡೆ ಮಾಡುವುದಾಗಿ ಹೇಳಿತ್ತು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts