More

    ಕಾನೂನಿಗೆ ಗೌರವ ಕೊಡಿ

    ಶೃಂಗೇರಿ: ಭಾರತೀಯರು ಕಾನೂನುಗಳಿಗೆ ಗೌರವ ನೀಡಿ ಸಂವಿಧಾನದ ಉನ್ನತ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

    ಮೆಣಸೆ ಗ್ರಾಪಂ ವ್ಯಾಪ್ತಿಗೆ ಶನಿವಾರ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ಸ್ವಾಗತಿಸಿ, ಡಾ. ಬಿ.ಆರ್.ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.ಧಾರ್ಮಿಕ, ಸಾಮಾಜಿಕ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಸ್ವಾತಂತ್ರ್ಯವನ್ನು ಸಂವಿಧಾನ ನಮಗೆ ನೀಡಿದೆ. ಭಾರತದ ಸಮಗ್ರತೆ, ಭಾವೈಕ್ಯತೆ, ಏಕತೆ ಕಾಪಾಡುವುದು ಸರ್ವರ ಗುರಿಯಾಗಬೇಕು ಎಂದರು.ಉಪನ್ಯಾಸಕ ಎಚ್.ಎ.ಪ್ರಕಾಶ್ ಮಾತನಾಡಿ, ದೇಶದ ಸಂವಿಧಾನದ ನೀತಿ, ನಿಯಮಗಳು ಶ್ರೇಷ್ಠವಾಗಿವೆ. ಡಾ. ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚಿತಗೊಂಡ ಸಂವಿಧಾನದ ಆಶಯಗಳನ್ನು ನಾವು ಆಚರಣೆಗೆ ತರಬೇಕು. ಸಮಾಜದಲ್ಲಿ ಅಸಮಾನತೆ ಎದ್ದು ಕಾಣುತ್ತಿದೆ. ಜನರಿಗೆ ಅವಶ್ಯಕವಾದ ಸೌಕರ್ಯಗಳನ್ನು ನೀಡಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.ಜಾಥಾ ಕೂತುಗೋಡು, ನೆಮ್ಮಾರ್ ಗ್ರಾಪಂ ವ್ಯಾಪ್ತಿಯಲ್ಲಿ ಸಂಚರಿಸಿತು. ಮೆಣಸೆ ಗ್ರಾಪಂ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ ನಾಯ್ಕ, ಹಾಲಂದೂರು ಪಿಎಸಿಎಸ್ ಅಧ್ಯಕ್ಷ ಎ.ಎಸ್.ರಾಜೇಶ್, ಸಂಜೀವಿನಿ ಸಂಘದ ಅಧ್ಯಕ್ಷರು, ತಾಪಂ ನರೇಗಾ ಯೋಜನೆ ಪ್ರಭಾರ ಸಹಾಯಕ ನಿರ್ದೇಶಕ ಸುದೀಪ್, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗೀರಥಿ, ಕ್ಷೇತ್ರಸಮನ್ವಯ ಅಧಿಕಾರಿ ಎನ್.ಜಿ.ರಾಘವೇಂದ್ರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಟರಾಜ್ ಮತ್ತು ಜನಪ್ರತಿನಿಧಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts