More

    video/ ಈ ಊರಿಗೆ ನೀವು ಕಾಲಿಟ್ರೆ 10 ಸಾವಿರ ರೂ. ದಂಡ ಫಿಕ್ಸ್!

    ಚಾಮರಾಜನಗರ: ‘ಬೆಂಗಳೂರು ಮತ್ತು ಮೈಸೂರಿನವ್ರು ಯಾರೂ ನಮ್ಮೂರಿಗೆ ಬರಂಗಿಲ್ಲ. ಅಪ್ಪಿತಪ್ಪಿ ಬಂದ್ರೆ 10 ಸಾವಿರ ರೂ. ದಂಡ ಕಟ್ಟಬೇಕು… ಬೇರೆ ಊರಿಂದ ನಮ್ಮೂರಿಗೆ ಬಂದಿರೋರನ್ನು ಹುಡುಕಿ ಕೊಟ್ಟವ್ರಿಗೆ 2 ಸಾವಿರ ರೂಪಾಯಿ ಬಹುಮಾನ ಕಣ್ರಪ್ಪೋ…’

    ಹೀಗೆಂದು ಕೊಳ್ಳೇಗಾಲ ತಾಲೂಕು ಕುಂತೂರಿನಲ್ಲಿ ಡಂಗೂರ ಸಾರಲಾಗಿದೆ. ಇದು ಕರೊನಾ ಸೋಂಕು ಹರಡುವಿಕೆ ತಡೆಯಲು ಗ್ರಾಮಸ್ಥರೇ ಮಾಡಿಕೊಂಡ ಸ್ವಯಂ ನಿರ್ಧಾರ. ಇನ್ನು ಚಾಮರಾಜನಗರ ತಾಲೂಕಿನ ಪುಣಜನೂರಿನ ಮೂಕನಪಾಳ್ಯದಲ್ಲೂ ಕೋವಿಡ್​ ಸೋಂಕು ಹರಡುವಿಕೆ ನಿಯಂತ್ರಿಸಲು ಸ್ಥಳೀಯ ಗ್ರಾಮಸ್ಥರು ಕಟ್ಟುನಿಟ್ಟಿನ ನಿರ್ಧಾರ ಕೈಗೊಂಡಿದ್ದು, ಆ ಬಗ್ಗೆ ಡಂಗೂರ ಸಾರಿಸಿದ್ದಾರೆ. ಇದನ್ನೂ ಓದಿರಿ ಬೆಂಗಳೂರಲ್ಲಿ 1928ರಲ್ಲೇ ಕಾಣಿಸಿಕೊಂಡಿತ್ತೊಂದು ರೋಗ… ಆಗಿನ ಕೌನ್ಸಿಲ್ ಆಡಳಿತ ಹೊರಡಿಸಿದ್ದ ಆದೇಶ ಪ್ರತಿ ಈಗ ವೈರಲ್

    ‘ಮೂಕನಪಾಳ್ಯದಲ್ಲಿ ಕರೊನಾ ಹರಡದಂತೆ ಕಟ್ಟುನಿಟ್ಟಿನ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಗಿದೆ. ನಾಳೆ ಬೆಳಗ್ಗೆ ಮನೆಗೊಂದಾಳು ದೇವಸ್ಥಾನದ್ ಮುಂದೆ ಬನ್ರಪ್ಪೋ… ಬೆಂಗಳೂರು, ಮೈಸೂರು, ಕೇರಳ ಮತ್ತು ತಮಿಳುನಾಡಿನಿಂದ ಬಂದವರ ಬಗ್ಗೆ ಮಾಹಿತಿ ಪಡೆಯಲು ಮತ್ತು ಅವರನ್ನ ಪರೀಕ್ಷೆ ಮಾಡಲು ಮನೆಮನೆಗೆ ಕರೊನಾ ವಾರಿಯರ್ಸ್‌ ಬರ್ತಾರೆ. ಆಗ ಕರೊನಾ ವಾರಿಯರ್ಸ್‌ ಮೇಲೇನಾದ್ರೂ ಹಲ್ಲೆ ಮಾಡಿದ್ರೆ ಜೈಲು ಕಟ್ಟಿಟ್ಟಬುತ್ತಿ… ನಾಳೆ ಬೆಳಗ್ಗೆ ದೇವಸ್ಥಾನದ್​ ಮುಂದೆ ಬನ್ರಪ್ಪೋ.’ ಎಂದು ಮೂಕನಪಾಳ್ಯದಲ್ಲೂ ಡಂಗೂರ ಸಾರಲಾಗಿದೆ.

    ಎರಡು ದಿನದ ಹಿಂದಷ್ಟೇ ಮಂಡ್ಯ ಜಿಲ್ಲೆಯ ಬಂಟೂರು ಗ್ರಾಮದಲ್ಲೂ ‘ಮೈಸೂರು ಮತ್ತು ಬೆಂಗಳೂರಿಂದ ಯಾರೂ ಬಂಟೂರಗೆ ಬರಂಗಿಲ್ಲ. ಬಂದ್ರೆ 5 ಸಾವಿರ ದಂಡ ಕಟ್ಟಬೇಕು’ ಎಂದು ಗ್ರಾಮಸ್ಥರು ಡಂಗೂರ ಸಾರಿಸಿದ್ದರು. ಇದರ ಬೆನ್ನಲ್ಲೇ ಚಾಮರಾಜನಗರ ಜಿಲ್ಲೆಯ ಎರಡು ಗ್ರಾಮಗಳಲ್ಲೂ ಸ್ಥಳೀಯರು ಇಂತಹದ್ದೇ ರೂಲ್ಸ್​ ಮಾಡಿಕೊಂಡಿದ್ದಾರೆ.

    ಕರೊನಾ ಸೋಂಕು ಎಲ್ಲೆಡೆ ಅಟ್ಟಹಾಸ ಮೆರೆಯುತ್ತಿದ್ದು, ಹಳ್ಳಿಯಲ್ಲೂ ಆತಂಕ ಶುರುವಾಗಿದೆ. ಕೆಲ ಗ್ರಾಮಸ್ಥರು ಮುನ್ನೆಚ್ಚರಿಕೆ ಕ್ರಮವಾಗಿ ತಮ್ಮೂರಿಗೆ ಅಕ್ಕಪಕ್ಕದ ಜಿಲ್ಲೆಗಳ ಜನರು ಬರದಂತೆ ನಿಷೇಧ ಹೇರುತ್ತಿದ್ದಾರೆ. ಈ ಡಂಗೂರ ಸಾರಿದ ವಿಡಿಯೋಗಳು ವೈರಲ್​ ಆಗಿವೆ.

    ಇವರನ್ನು ಹುಡುಕಿಕೊಟ್ರೆ ಬಹುಮಾನ ಸಿಗುತ್ತೆ..!

    ಇವರನ್ನು ಹುಡುಕಿಕೊಟ್ರೆ ಬಹುಮಾನ ಸಿಗುತ್ತೆ..!ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕುಂಟೂರಿನ ಗ್ರಾಮಸ್ಥರೇ ಸಾರಿಸಿದ ಡಂಗೂರ ಇದು. ಈ ಗ್ರಾಮಕ್ಕೆ ಬೆಂಗಳೂರು ಮತ್ತು ಮೈಸೂರಿಂದ ಬರುವ ಜನರಿಗೆ ಪ್ರವೇಶ ನಿಷಿದ್ಧ. ಅಪ್ಪಿತಪ್ಪಿ ಅಲ್ಲಿಂದ ಯಾರಾದರೂ ಬಂದಿರುವ ಬಗ್ಗೆ ಪತ್ತೆ ಹಚ್ಚಿಕೊಟ್ಟವರಿಗೆ 2 ಸಾವಿರ ರೂ. ಬಹುಮಾನ ಕೊಡ್ತಾರಂತೆ. ಕರೊನಾ ಸೋಂಕು ಹರಡುವಿಕೆ ತಡೆಯಲು ಗ್ರಾಮಸ್ಥರೇ ಮಾಡಿಕೊಂಡ ಸ್ವಯಂ ನಿರ್ಧಾರ ಇದು. #Dangura #Kollegala #Corona

    Posted by Vijayavani on Tuesday, July 7, 2020

    ಮನೆಗೊಂದಾಳು ದೇವಸ್ಥಾನದ್ ಮುಂದೆ ಬನ್ರಪ್ಪೋ…

    ಮನೆಗೊಂದಾಳು ದೇವಸ್ಥಾನದ್ ಮುಂದೆ ಬನ್ರಪ್ಪೋ…ಚಾಮರಾಜನಗರ ತಾಲೂಕಿನ ಪುಣಜನೂರಿನ ಮೂಕನಪಾಳ್ಯದಲ್ಲಿ ಕೋವಿಡ್​ ಸೋಂಕು ಹರಡುವಿಕೆ ನಿಯಂತ್ರಿಸಲು ಸ್ಥಳೀಯರು ಕೈಕೊಂಡ ನಿರ್ಧಾರ ಏನೆಂದು ಈ ಡಂಗೂರ ಹೇಳುತ್ತೆ ಕೇಳಿ. ರಾತ್ರಿ ವೇಳೆ ಸಾರಿದ ಡಂಗೂರ.. #Dangura #Kollegala #Corona

    Posted by Vijayavani on Tuesday, July 7, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts