More

    ಮೀಸಲಾತಿ ಎಂಬುದು ಭಿಕ್ಷೆಯೂ ಅಲ್ಲ: ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್

    ಶಿವಮೊಗ್ಗ: ರಾಷ್ಟ್ರದಲ್ಲಿ ಜನಗಣತಿ ಮತ್ತು ಜಾತಿಗಣತಿ ಆಗಲೇಬೇಕು. ಮೀಸಲಾತಿ ಎಂಬುದು ಭಿಕ್ಷೆಯೂ ಅಲ್ಲ, ಆರ್ಥಿಕ ಕಾರ್ಯಕ್ರಮವೂ ಅಲ್ಲ. ಅದು ಸಂವಿಧಾನದ ಅಡಿಯಲ್ಲಿ ಬರುವ ಸಾಮಾಜಿಕ ನ್ಯಾಯದ ಹಂಚಿಕೆಯಾಗಿದೆ. ಅದನ್ನು ದುರ್ಬಲ ವರ್ಗದವರಿಗೆ ನೀಡುವುದು ಅಗತ್ಯವಿದೆ. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾಂತರಾಜ್ ವರದಿ ಜಾರಿಗೊಳಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಒತ್ತಾಯಿಸಿದರು.

    ಹಿಂದುಳಿದ, ದಲಿತ, ಆದಿವಾಸಿ ಸಮುದಾಯಗಳಿಗೆ ಸಂವಿಧಾನದ ಆಶಯದಂತೆ ಸಮಬಾಳು, ಸಮಪಾಲು ಹಂಚಿಕೆ ಆಗಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದೆ. ಆದರೆ ಅಲ್ಲಿ ಎಲ್ಲ ಜಾತಿ ನಾಯಕರಿದ್ದಾರೆ. ಬಲಾಢ್ಯ ಜಾತಿಗಳು ಕಾಂತರಾಜ್ ವರದಿಯನ್ನು ವಿರೋಧಿಸುವುದು ಸಹಜ. ಸರ್ಕಾರದಲ್ಲಿ ದುರ್ಬಲ ಹಾಗೂ ಪ್ರಬಲ ಜಾತಿಗಳ ಶಾಸಕರು, ಸಚಿವರು ಇರುವುದರಿಂದ ವರದಿಯಲ್ಲಿನ ಸಾಧಕ-ಬಾಧಕಗಳನ್ನು ನೋಡಿಕೊಂಡು ಜಾರಿಗೊಳಿಸಬೇಕಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಈಗಾಗಲೇ ಸಿದ್ಧವಾಗಿರುವ ಜಾತಿಗಣತಿಯ ಕಾಂತರಾಜ್ ವರದಿ ಜಾರಿ ಆಗಬೇಕಿದೆ. ಅದಕ್ಕಾಗಿ ಸರ್ಕಾರದ ಮೇಲೆ ಸಾರ್ವಜನಿಕವಾಗಿ ಒತ್ತಡ ಹೇರುವ ಸಲುವಾಗಿ ಸರ್ಕಾರೇತರ ಸಂಘ, ಸಂಸ್ಥೆಗಳ ಮೂಲಕ ಜನರಲ್ಲಿ ಜಾತಿಗಣತಿ ಆಧಾರಿತ ಮೀಸಲಾತಿ ಬಗ್ಗೆ ಅರಿವು ಮೂಡಿಸಲು ರಾಜ್ಯಾದ್ಯಂತ ಆಂದೋಲನ ನಡೆಸಲಾಗುತ್ತಿದೆ ಎಂದು ಹೇಳಿದರು.
    ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಆರ್.ಮೋಹನ್, ಹಿಂದುಳಿದ ವರ್ಗಗಳ ಹಿತರಕ್ಷಣಾ ವೇದಿಕೆ ಅಧ್ಯಕ್ಷ ತೀ.ನ.ಶ್ರೀನಿವಾಸ್, ಕೆಪಿಸಿಸಿ ಪದಾಧಿಕಾರಿ ಪಿ.ಒ.ಶಿವಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವಾನಂದ, ಎಸ್.ಪಿ.ಜಗನ್ನಾಥ್, ಜಿ.ಪದ್ಮನಾಭ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts