More

    ‘ಸಜ್ಜನರ’ ಕೆಲಸ ಎಂದರೆ ಇದು.. ಬಾಂಗ್ಲಾ ಟು ಹೈದರಾಬಾದ್​, ಆ ರಾತ್ರಿ ಏನಾಯ್ತು?

    ಬೆಂಗಳೂರು: ‘ಸಜ್ಜನರು ಮಾಡಬೇಕಾದ್ದು ಇಷ್ಟೇ.. ಸಮಯೋಚಿತ ಸಹಾಯ’. ಇಂಥದ್ದೊಂದು ಸಹಾಯವನ್ನು ಪೊಲೀಸ್​ ಕಮಿಷನರ್​ವೊಬ್ಬರು ಮಾಡಿದ್ದು ಅಕ್ಷರಶಃ ಸಜ್ಜನರೆನಿಸಿಕೊಂಡಿದ್ದಾರೆ.

    ಹೀಗೆ ಸಜ್ಜನರೆನಿಸಿಕೊಂಡವರ ಹೆಸರೂ ಸಜ್ಜನರ್ ಎಂತಲೇ. ಹೌದು.. ಸೈಬರಾಬಾದ್​ನ ಪೊಲೀಸ್ ಕಮಿಷನರ್ ವಿ.ಸಿ.ಸಜ್ಜನರ್​ ಅವರ ಈ ಕೆಲಸ ಇದೀಗ ಮೆಚ್ಚುಗೆಗೆ ಪಾತ್ರವಾಗಿದೆ. ಸೆ. 16ರ ರಾತ್ರಿ ನಡೆದ ಘಟನೆಯೊಂದನ್ನು ಉಲ್ಲೇಖಿಸಿರುವ ಸಾಮಾಜಿಕ ಕಾರ್ಯಕರ್ತೆ ಸುನೀತಾ ಕೃಷ್ಣನ್ ಎಂಬುವವರು ಈ ಬಗ್ಗೆ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

    What a night! Received a SOS call from Bangladesh at 9.30pm about a minor Bangladeshi girl trafficked to Hyderabad….

    Posted by Sunitha Krishnan on Wednesday, September 16, 2020

    “ರಾತ್ರಿ ಬಾಂಗ್ಲಾದ ಹುಡುಗಿಯೊಬ್ಬಳನ್ನು ಹೈದರಾಬಾದ್​ಗೆ ಮಾನವ ಕಳ್ಳಸಾಗಣೆ ಮಾಡುತ್ತಿರುವ ಬಗ್ಗೆ ಎಸ್​ಒಎಸ್​ ಕಾಲ್​ ಬಂದಿತ್ತು. ಬಾಂಗ್ಲಾದಿಂದ ರಾತ್ರಿ 9.30ಕ್ಕೆ ಸರಿಯಾಗಿ ಕರೆ ಬಂದಿದ್ದು, ತಕ್ಷಣ ಸೈಬರಾಬಾದ್​ನ ಪೊಲೀಸ್ ಕಮಿಷನರ್ ಸಜ್ಜನರ್ ಅವರನ್ನು ಸಂಪರ್ಕಿಸಿ, ವಿಷಯ ತಿಳಿಸಿದೆ. ಅಲ್ಲಿಂದ ಮುಂದಿನ ಮುಕ್ಕಾಲು ಗಂಟೆ ಸಮಯ ನಿಜಕ್ಕೂ ರೋಚಕವಾಗಿತ್ತು. ಕಾರ್ ಚೇಸ್​, ಆಡಿಯೋ ಮೆಸೇಜ್​ಗಳು, ಲೊಕೇಷನ್​ ಟ್ರ್ಯಾಕಿಂಗ್ ಇತ್ಯಾದಿ ಎಲ್ಲವೂ ಆ ಸಮಯದಲ್ಲಿ ನಡೆದು ಹೋಗಿದ್ದವು. ಅವೆಲ್ಲದರ ಪ್ರತಿಫಲವಾಗಿ 10.25ಕ್ಕೆ ಆ ಹುಡುಗಿ ರಕ್ಷಿಸಲ್ಪಟ್ಟಿದ್ದಳು. ಇದು ಸಜ್ಜನರ್ ಅವರ ತಂಡದ ತಕ್ಷಣದ ಸ್ಪಂದನೆ ಹಾಗೂ ತುರ್ತು ಕಾರ್ಯಾಚರಣೆ ಇಲ್ಲದಿದ್ದರೆ ಸಾಧ್ಯವಾಗಿರುತ್ತಿರಲಿಲ್ಲ” ಎಂದಿರುವ ಸುನೀತಾ ಕೃಷ್ಣನ್​ ಅವರು, ಸಜ್ಜನರ್​ ಮತ್ತವರ ತಂಡಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts