More

    ಮದ್ಯದಂಗಡಿ ತೆರೆಯದಿರಲು ಮನವಿ

    ಎಚ್.ಡಿ.ಕೋಟೆ: ಜನವಸತಿ ಪ್ರದೇಶದಲ್ಲಿ ಮದ್ಯದ ಅಂಗಡಿಗೆ ಅನುಮತಿ ನೀಡಬಾರದು, ನೀಡಿದ್ದೆ ಆದಲ್ಲಿ, ಮದ್ಯದ ಅಂಗಡಿ ಎದುರು ಪ್ರತಿಭಟನೆ ಹೂಡುವುದಾಗಿ ಮಹಿಳೆಯರು ಎಚ್ಚರಿಸಿದರು.

    ಸರಗೂರು ಪಟ್ಟಣದ ಸಂತೆಮಾಳ ನಿವಾಸಿಗಳು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು.

    ಸರಗೂರು ಪಟ್ಟಣದ ಸಂತೆಮಾಳ ಮಾಸ್ತಮ್ಮ ದೇವಸ್ಥಾನದ ಮುಂಭಾಗದಲ್ಲಿ ನಾಗರಾಜು ಎಂಬುವರ ಜಮೀನಿನಲ್ಲಿ ಮಳಿಗೆ ಮತ್ತು ಕ್ಲಿನಿಕ್ ಮಡುವುದಾಗಿ ಕಟ್ಟಡ ನಿರ್ಮಿಸಿ ಈಗ ಮದ್ಯದಂಗಡಿ ಪ್ರಾರಂಭಿಸುವುದಾಗಿ ಹೇಳುತ್ತಿದ್ದಾರೆ. ಇದರಿಂದ ಸ್ಥಳೀಯರ ಬದುಕಿನ ಮೇಲೆ ಪರಿಣಾಮ ಬೀರಲಿದೆ. ಸಂಬಂಧಪಟ್ಟವರು ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಬೇಕು. ಇಲ್ಲದಿದ್ದಲ್ಲಿ ಅಬಕಾರಿ ಇಲಾಖೆ ಎದುರು ಪ್ರತಿಭಟನೆ ಹೂಡುವುದಾಗಿ ಮಹಿಳೆಯರು ಹೇಳಿದರು.

    ಸರಗೂರು ಪಟ್ಟಣ ನಿವಾಸಿ ಪದ್ಮ ಮಾತನಾಡಿ, ಮದ್ಯದಂಗಡಿ ತೆರೆಯುವುದರಿಂದ ಬಡಾವಣೆಯ ವಾತಾವರಣ ಕೆಡುತ್ತದೆ. ಅಲ್ಲದೆ ಸುತ್ತಮುತ್ತಲ ಆಸ್ಪತ್ರೆ, ದೇವಸ್ಥಾನ, ಶಾಲೆ, ಅಂಗನವಾಡಿ ಕೇಂದ್ರ ಇದ್ದು, ಇದರಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಹೇಳಿದರು.

    ಸ್ಥಳೀಯರಾದ ಲಕ್ಷ್ಮೀ, ಶ್ವೇತಾ, ಪಾರ್ವತಿ, ಗಿರಿಜಾ, ಜಯಲಕ್ಷ್ಮೀ, ಪ್ರೀಯಾ, ಸುನೀತಾ, ನಾಗರತ್ನ, ಜ್ಯೋತಿ, ಮೀನಾ, ಜಯಲಕ್ಷ್ಮೀ, ರತ್ನಮ್ಮ, ಕಾರ್ತಿಕ್, ಸುರೇಶ್, ಯೋಗೇಶ್, ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts