More

  ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್​ ಕೋವಿಂದ್​, ಸಿಎಂ ಬಿಎಸ್​ವೈ ಸೇರಿದಂತೆ ಅನೇಕ ಗಣ್ಯರಿಂದ ಗಣರಾಜ್ಯೋತ್ಸವ ಶುಭಾಶಯ

  ನವದೆಹಲಿ: ದೇಶಾದ್ಯಂತ 71ನೇ ಗಣರಾಜ್ಯೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್​ ಕೋವಿಂದ್, ರಾಹುಲ್​ ಗಾಂಧಿ ಹಾಗೂ ಸಿಎಂ ಬಿ.ಎಸ್​.ಯಡಿಯೂರಪ್ಪ​ ಸೇರಿದಂತೆ ಅನೇಕ ಗಣ್ಯರು ರಾಷ್ಟ್ರದ ಜನತೆಗೆ ಶುಭಕೋರಿದ್ದಾರೆ.

  ಟ್ವೀಟ್​ ಮೂಲಕ ಶುಭ ಹಾರೈಸಿರುವ ಪ್ರಧಾನಿ ಮೋದಿ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು ಎಂದು ಹೇಳಿದ್ದಾರೆ. ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಕೂಡ ಎಲ್ಲರಿಗೂ ಶುಭಕೋರಿದ್ದಾರೆ. ಈ ನಮ್ಮ ಗಣರಾಜ್ಯೋತ್ಸವದಂದು ಪ್ರತಿಯೊಬ್ಬ ಭಾರತೀಯನಿಗೂ ಶುಭಾಶಯಗಳು ಎಂದು ರಾಹುಲ್​ ಗಾಂಧಿ ಟ್ವೀಟ್​ ಮಾಡಿದ್ದಾರೆ.

  ಸಿಎಂ ಬಿಎಸ್​ವೈ ನಾಡಿನ ಸಮಸ್ತ ಜನರಿಗೆ 71ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದಿದ್ದಾರೆ. ಇಷ್ಟೇ ಅಲ್ಲದೆ ಇನ್ನು ಅನೇಕ ಗಣ್ಯರು ರಾಷ್ಟ್ರದ ಜನತೆಗೆ ಶುಭ ಸಂದರ್ಭದ ಶುಭಕೋರಿದ್ದಾರೆ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts