ಕರೊನಾ ಸೋಂಕು ತಗುಲಿದ ಹಿನ್ನೆಲೆ ಆಗಸ್ಟ್ 5ರಂದು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್.ಪಿ. ಬಾಲಸುಬ್ರಮಣ್ಯಂ ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಇದೇ ಕುಟುಂಬದಿಂದ ಇನ್ನೊಂದು ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ. ಎಸ್ಪಿಬಿ ಪತ್ನಿ ಸಾವಿತ್ರಿ ಅವರಿಗೂ ಕರೊನಾ ತಗುಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಇದನ್ನೂ ಓದಿ: ಹೆಡ್-ಬುಷ್ ಆಡ್ತಿದ್ದಾರೆ ಧನಂಜಯ್: ಆರು ಭಾಷೆಗಳಲ್ಲಿ ಜಯರಾಜ್ನ ದಾದಾಗಿರಿಯ ದಿನಗಳು
ಈಗಾಗಲೇ ಎಸ್ಪಿಬಿ ಆರೋಗ್ಯ ವಿಚಾರಕ್ಕೆ ಇಡೀ ಕುಟುಂಬ ಆತಂಕದಲ್ಲಿದೆ. ಇದರ ನಡುವೆಯೇ ತಾಯಿಗೂ ಕರೊನಾ ಸೋಂಕು ಇರುವುದು ಇಡೀ ಕುಟುಂಬಕ್ಕೆ ನೋವನ್ನುಂಟು ಮಾಡಿದೆ. ಸದ್ಯ ಈ ಸುದ್ದಿಯನ್ನು ಕುಟುಂಬ ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಆದರೆ, ಅವರಿಗೂ ಕರೊನಾ ತಗುಲಿರುವ ಬಗ್ಗೆ ಮಾತು ಕೇಳಿಬರುತ್ತಿದೆ.
ಇದನ್ನೂ ಓದಿ: ಸಿನಿ ಸ್ವಾತಂತ್ರ್ಯ: ಸೋಷಿಯಲ್ ಮೀಡಿಯಾದಲ್ಲಿ ತಾರೆಯರ ಸಂಭ್ರಮ
ಸದ್ಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿರುವ ಸಾವಿತ್ರಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ತೀವ್ರ ನಿಗಾ ಘಟಕದಲ್ಲಿ ಎಸ್ಪಿಬಿ ಅವರಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಪ್ಲಾಸ್ಮಾ ಥೆರಪಿಯನ್ನೂ ಎಸ್ಪಿಬಿ ಅವರಿಗೆ ಮಾಡಿದ್ದು, ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿದೆಯಾದರೂ, ಚೇತರಿಕೆಗೆ ಇನ್ನೂ ಸಮಯದ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. (ಏಜೆನ್ಸೀಸ್)
ತ್ರಿವಿಕ್ರಮ ಟೀಸರ್ ರಿಲೀಸ್; ಮಾಸ್ ಅವತಾರದಲ್ಲಿ ಜೂ. ರವಿಚಂದ್ರನ್ ಎಂಟ್ರಿ..