ಆಚರಣೆಯಿಂದ ಆಗಬೇಕಿದೆ ವೀರಶೈವ, ಜಂಗಮ: ಆಯನೂರು ಮಂಜುನಾಥ

blank

ಶಿವಮೊಗ್ಗ: ಶಿವಯೋಗಿ ಶಿವಾಚಾರ್ಯರ ಸಿದ್ಧಾಂತ ಶಿಖಾಮಣಿ ಓದದಿದ್ದರೆ ಅವರು ವೀರಶೈವರೇ ಅಲ್ಲ. ಹುಟ್ಟಿನಿಂದ ವೀರಶೈವ, ಜಂಗಮ ಆಗಬಾರದು. ಆಚರಣೆಯಿಂದ ಆಗಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾ ಜಂಗಮ ಹಾಗೂ ಬೇಡ ಜಂಗಮ ಸಮಾಜದ ಆಶ್ರಯದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಅಗ್ರಶ್ರೇಣಿಯ ಆಚಾರ್ಯ ಶ್ರೇಷ್ಠರಾಗಿದ್ದಾರೆ. ಅಂತಹವರ ಜಯಂತಿಯನ್ನು ಸರ್ಕಾರ ಆಚರಿಸುತ್ತಿದೆ. ಧರ್ಮ ಸಂಸ್ಥಾಪಕರ ಜಯಂತಿಯನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸಬೇಕಿದೆ. ಅದಕ್ಕಾಗಿ ಸಿದ್ಧಾಂತ ಶಿಖಾಮಣಿ ಓದಬೇಕು. ಜಂಗಮತನಕ್ಕೆ ಮೌಲ್ಯ ಬರಲು ಧಾರ್ಮಿಕ ಗ್ರಂಥವನ್ನು ಅಧ್ಯಯನ ಮಾಡಬೇಕಿದೆ ಎಂದರು.
ಅರ್ಚಕರಿಗೆ ದೇವರು ಒಲಿಯಲಿಲ್ಲ. ಭಕ್ತನಿಗೆ ದೇವರು ಒಲಿದಿದ್ದಾನೆ. ಇದಕ್ಕೆ ಶ್ರದ್ಧೆಯಿಂದ ಪೂಜೆ ಮಾಡಬೇಕಿದೆ. ದಾನವನ್ನು ಸ್ವೀಕರಿಸುವುದಲ್ಲ. ಹಾಗೆ ಸ್ವೀಕಾರ ಮಾಡಿದರೆ ದಾನ ನೀಡುವವನ ಸಂಕಷ್ಟ, ನೋವು ಕಷ್ಟವನ್ನು ಸ್ವೀಕರಿಸಿದಂತೆ. ದಾನ ಸ್ವೀಕಾರ ಮಾಡಿದರೆ ಅದನ್ನು ಅರಗಿಸಿಕೊಳ್ಳುವ ಶಕ್ತಿ ಬೇಕಾಗುತ್ತದೆ ಎಂದು ಹೇಳಿದರು.
ನಾವು ಎಂಬುದನ್ನು ಬಿಟ್ಟು ಸ್ವಾಭಿಮಾನವನ್ನು ಕಳೆದುಕೊಳ್ಳುತ್ತಿದ್ದೇವೆ. ಇದಕ್ಕಾಗಿ ಶಾಸ್ತ್ರಗಳನ್ನು ಅಧ್ಯಯನ ಮಾಡಬೇಕಿದೆ. ಅಧ್ಯಯನ ಮಾಡಿದ್ದನ್ನು ಅರಗಿಸಿಕೊಳ್ಳಬೇಕು. ಅರಗಿಸಿಕೊಂಡಿದ್ದನ್ನು ನೆನಪಿನಲ್ಲಿಟ್ಟುಕೊಂಡು ಪಾಲಿಸಬೇಕು. ದಾಸೋಹ ಅಂದರೆ ನಾವು ಬೇರೆಯವರಿಗೆ ಊಟ ಹಾಕುವುದು. ಆದರೆ ಇಂದು ಇನ್ನೊಬ್ಬರ ಮನೆಯಲ್ಲಿ ಊಟ ಮಾಡಿ ಬರುವುದೇ ದಾಸೋಹ ಎನ್ನುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಗರದ ನಿವೃತ್ತ ಪ್ರಾಚಾರ್ಯ ಪ್ರೊ.ಎಚ್.ಬಿ.ಪಂಚಾಕ್ಷರಯ್ಯ ವಿಶೇಷ ಉಪನ್ಯಾಸ ನೀಡಿದರು. ಮುಖಂಡರಾದ ಶಂಭುಲಿಂಗಯ್ಯು ಹಿರೇಮಠ, ಪರಶುರಾಮ್, ವೈ.ಎಚ್.ನಾಗರಾಜ್, ಎನ್.ಜೆ.ರಾಜಶೇಖರ್, ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಮತ್ತಿತರರಿದ್ದರು

Share This Article

ಉಪ್ಪಿನಕಾಯಿ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಈ ವರ್ಷ ಗೂಗಲ್​ನಲ್ಲಿ ಅತಿ ಹೆಚ್ಚು ಹುಡುಕಿದ ಪಾಕವಿಧಾನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಇದರಲ್ಲಿ ಉಪ್ಪಿನಕಾಯಿ ಭಾರತದಲ್ಲಿ…

ಟಾಯ್ಲೆಟ್​​ನ ಕೊಳಕು ವಾಸನೆ, ಹಳದಿ ಕಲೆ ತೆಗೆದುಹಾಕುವುದೇಗೆ?; ಇಲ್ಲಿದೆ ಸಿಂಪಲ್​ ವಿಧಾನ | Tips

ಮನೆಯನ್ನು ಸ್ವಚ್ಛಗೊಳಿಸಲು ಮತ್ತು ಅಲಂಕರಿಸಲು ಜನರು ಶ್ರಮಿಸುತ್ತಾರೆ. ಹೊರಗಿನಿಂದ ಅವರ ಮನೆಯು ಸಾಕಷ್ಟು ಐಷಾರಾಮಿಯಾಗಿ ಕಾಣುತ್ತದೆ.…

ಚಳಿಗಾಲದಲ್ಲಿ ಬಿಸಿ ಚಹಾ ಮತ್ತು ಕಾಫಿ ಸೇವಿಸುತ್ತಿದ್ದೀರಾ; ಅಪಾಯ ತಪ್ಪಿದಲ್ಲ.. ಎಚ್ಚರದಿಂದಿರಿ | Health Tips

ಚಳಿಗಾಲ ಬಂದ ಕೂಡಲೆ ಟೀ, ಕಾಫಿ ಸೇವನೆ ಹೆಚ್ಚುತ್ತದೆ. ಈ ಬಿಸಿ ಪಾನೀಯವು ದೇಹಕ್ಕೆ ಶಾಖವನ್ನು…