More

    ವಿಶ್ವಕ್ಕೆ ಶಾಂತಿ ಸಾರಿದ ರೇಣುಕಾಚಾರ್ಯರು

    ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
    ಜಾತಿಗಳ ಮಧ್ಯೆ ವೈಷಮ್ಯ ಬೇಡ, ಮಾನವ ಕುಲ ಒಂದೇ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದವರು ಶ್ರೀ ಜಗದ್ಗುರು ರೇಣುಕಾಚಾರ್ಯರು ಎಂದು ಬೆಂಗಳೂರಿನ ವಿಭೂತಿಪುರ ವೀರಸಿಂಹಾಸನ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
    ಸೋಂಪುರ ಹೋಬಳಿ ಶಿವಗಂಗೆಯ ಶ್ರೀ ಮೇಲಣಗವಿ ವೀರಸಿಂಹಾಸನ ಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಮತ್ತು ಶಿವಗಂಗಾಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ವರಿಗೂ ಹಿತ ಬಯಸುವುದು ವೀರಶೈವ ಧರ್ಮ ಎಂದರು.
    ಮೇಲಣಗವಿ ಮಠದ ಡಾ.ಶ್ರೀ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜನಸೇವೆಗೆ ಶ್ರಮಿಸಿದ ಸಮಾಜ ಸುಧಾರಕರನ್ನು ಆಯ್ಕೆ ಮಾಡಿ ಶಿವಗಂಗಾ ಶ್ರೀ ಪ್ರಶಸ್ತಿ ನೀಡಲಾಗುವುದು ಎಂದ ಅವರು, ಜಗದ್ಗುರು ರೇಣುಕಾಚಾರ್ಯರು ಶಿಷ್ಯರಾದ ರುದ್ರಮುನಿ ಶಿವಾಚಾರ್ಯರಿಗೆ ಈ ಮಠವನ್ನು ಸ್ಥಾಪಿಸಿಕೊಟ್ಟರು. ಆಚಾರ್ಯರಲಿದ್ದ ದಿವ್ಯ ಶಕ್ತಿಯು ಅದ್ಭುತವಾದದ್ದು. ಗುರುಗಳು ದೂರ ದೃಷ್ಟಿಯ ಪ್ರತೀಕವಾಗಿದ್ದರು. ಇವರು ಯುಗಯುಗಕ್ಕೂ ಸಲ್ಲುವುದರಿಂದ ಅವರ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದರು.
    ಶ್ರೀರಂಗಪಟ್ಟಣದ ತ್ರಿನೇತ್ರ ಮಹಂತ ಶಿವಯೋಗಿಶ್ವರ ಸ್ವಾಮೀಜಿ, ನೆಲಮಗಲದ ಬಸವಣ್ಣದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶನಿವಾರ ಸಂತೆಯ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಗೊಲ್ಲಹಳ್ಳಿ ಸಿದ್ದರಾಮೇಶ್ವರ ಮಠದ ವಿಭವ ವಿದ್ಯಾಶಂಕರ ಸ್ವಾಮೀಜಿ, ಬೆಂಗಳೂರಿನ ಚಂದ್ರಶೇಖರಯ್ಯ, ಶಿವಗಂಗೆ ಗ್ರಾಪಂ ಅಧ್ಯಕ್ಷ ಕೆ.ಬಿ.ಪ್ರಭುದೇವ, ಸದಸ್ಯ ಎಸ್.ಪಿ.ಮನುಪ್ರಸಾದ್, ನೆಲಮಂಗಲ ಯೋಜನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಲ್ಲಯ್ಯ, ಅಖಿಲ ಭಾರತೀಯ ವೀರಶೈವ ಮಹಾಸಭಾ ಉಪಾಧ್ಯಕ್ಷ ಬಿ.ಎಸ್.ಸಚ್ಚಿದಾನಂದ ಮೂರ್ತಿ, ಗ್ರಾಪಂ ಮಾಜಿ ಟಿ.ಎಂ.ಉಮಾಶಂಕರ್, ಮುಖಂಡರಾದ ಆರ್.ಶಿವಕುಮಾರ, ಎಸ್.ಸಿ.ಹೊನ್ನಗಂಗಶೆಟ್ಟಿ, ಮುಪ್ಪಿನಸ್ವಾಮಿ, ಹೊಸಹಳ್ಳಿ ಭಾಬು, ನಾಗೇಂದ್ರ ಪ್ರಸನ್ನ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts