More

    ಬಾಡಿಗೆ ಕೊಡಿ ಇಲ್ಲಾ ಮನೆ ಖಾಲಿ ಮಾಡಿ ಎಂದ ಕಟ್ಟಡ ಮಾಲೀಕರ ವಿರುದ್ಧ ಎಫ್​ಐಆರ್: ದಾಖಲಾಯಿತು 5 ಪ್ರತ್ಯೇಕ ಕಿರುಕುಳ ಪ್ರಕರಣ

    ಬೆಂಗಳೂರು: ಕರೊನಾ ಸಂದರ್ಭದಲ್ಲಿ ಬಲವಂತವಾಗಿ ಬಾಡಿಗೆ ಕೇಳಬಾರದು ಎಂದು ಸರ್ಕಾರ ಸೂಚಿಸಿದ್ದರೂ, ಬಾಡಿಗೆ ಕೊಡುವಂತೆ ಪೇಯಿಂಗ್ ಗೆಸ್ಟ್ ನಡೆಸುತ್ತಿದ್ದವರಿಗೆ ಕಿರುಕುಳ ಕೊಡುತ್ತಿದ್ದ ಮೂವರು ಕಟ್ಟಡ ಮಾಲೀಕರ ವಿರುದ್ಧ ಮಾರತ್​ಹಳ್ಳಿ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ.

    ಮುನೆಕೋಳಾಲುವಿನ ನಿವಾಸಿ ಶ್ರೀವತ್ಸರೆಡ್ಡಿ ವಿರುದ್ಧ ಪ್ರತ್ಯೇಕ ಮೂರು ಎಫ್​ಐಆರ್ ದಾಖಲಾದರೆ, ಮಾರತ್​ಹಳ್ಳಿ ಮಾರ್ಕೆಟ್ ಬಳಿಯ ನಿವಾಸಿ ವೇಣುಗೋಪಾಲ್ ಹಾಗೂ ತುಳಸಿ ಚಿತ್ರಮಂದಿರ ರಸ್ತೆ ಬಳಿಯ ನಿವಾಸಿ ಗಜೇಂದ್ರ ಎಂಬುವರ ವಿರುದ್ಧ ತಲಾ ಒಂದು ಎಫ್​ಐಆರ್ ದಾಖಲಾಗಿದೆ.

    ಶ್ರೀವತ್ಸ ಅವರಿಗೆ ಸೇರಿದ ಮಾರತ್​ಹಳ್ಳಿಯಲ್ಲಿದ್ದ ಮೂರು ಪ್ರತ್ಯೇಕ ಬಿಲ್ಡಿಂಗ್​ನಲ್ಲಿ ದೇಬಶಿಶ್ ಸಾಹೋ, ಬಾಲಾಜಿ ಚಂದೂಲಾಲ್ ಹಾಗೂ ಅನಂತ್ ಕುಮಾರ್ ಎಂಬುವರು ಪಿಜಿ ನಡೆಸುತ್ತಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಲಾಕ್​ಡೌನ್ ಆಗುವ ಮೊದಲು ಪಿಜಿಯಲ್ಲಿದ್ದ ಬಹುತೇಕ ಮಂದಿ ಬಾಡಿಗೆ ಕೊಡದೇ ಪಿಜಿ ಖಾಲಿ ಮಾಡಿಕೊಂಡು ಹೋಗಿದ್ದರು. ಇನ್ನುಳಿದ ಜನರಿಗೆ ಪಿಜಿ ನಡೆಸುತ್ತಿದ್ದವರು ಊಟ, ವಸತಿ ವ್ಯವಸ್ಥೆ ಮಾಡಿದ್ದರು. ಕಟ್ಟಡ ಮಾಲೀಕ ಶ್ರೀವತ್ಸ ತಿಂಗಳ ಬಾಡಿಗೆಗಾಗಿ ಒತ್ತಾಯಿಸುತ್ತಿದ್ದರು.

    ವೇಣುಗೋಪಾಲ್ ಹಾಗೂ ಗಜೇಂದ್ರ ಮಾರತ್​ಹಳ್ಳಿಯಲ್ಲಿ ಹೊಂದಿದ್ದ ಪ್ರತ್ಯೇಕ ಎರಡು ಕಟ್ಟಡದಲ್ಲಿ ಬಿ. ಶ್ರೀಚರಣ್, ತರುಣ್ ಪಾಟೀಲ್ ಪಿ.ಜಿ. ನಡೆಸುತ್ತಿದ್ದರು. ಇಲ್ಲೂ ಬಾಡಿಗೆ ಕೊಡುವಂತೆ ಮಾಲೀಕರು ಕಿರುಕುಳ ಕೊಡುತ್ತಿದ್ದರು. ಈ ಬಗ್ಗೆ ಮಾರತ್​ಹಳ್ಳಿ ಪೊಲೀಸರು ಪ್ರತ್ಯೇಕ ಐದು ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ.

    ಸೂಪರ್ ಲವ್ ಸ್ಟೋರಿ!: ಸಿನಿಮಾವನ್ನೂ ಮೀರಿದ ಕಥೆ ಈಕೆಯದ್ದು..

    ದಿನಸಿ ಸಾಮಗ್ರಿ ಹಂಚುತ್ತಿದ್ದಾಗ ಹಲ್ಲೆ: ದಾಸರಹಳ್ಳಿ ಕೊಳೆಗೇರಿಯಲ್ಲಿ 6 ಮಂದಿಯಿಂದ ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts