More

    ದಿನಸಿ ಸಾಮಗ್ರಿ ಹಂಚುತ್ತಿದ್ದಾಗ ಹಲ್ಲೆ: ದಾಸರಹಳ್ಳಿ ಕೊಳೆಗೇರಿಯಲ್ಲಿ 6 ಮಂದಿಯಿಂದ ಕೃತ್ಯ

    ಬೆಂಗಳೂರು: ದಾಸರಹಳ್ಳಿಯಲ್ಲಿ ಕೊಳೆಗೇರಿ ನಿವಾಸಿಗಳಿಗೆ ದಿನಸಿ ಸಾಮಗ್ರಿ ಹಂಚುತ್ತಿದ್ದ ಸ್ವರಾಜ್ ಅಭಿಯಾನ್ ಸಂಘಟನೆ ಕಾರ್ಯಕರ್ತರ ಮೇಲೆ ದುಷ್ಕರ್ವಿುಗಳ ಗುಂಪು ಹಲ್ಲೆ ನಡೆಸಿದೆ. ಸಯ್ಯದ್ ತಬ್ರೇಜ್, ಜಮಿನಾ ತಾಜ್ ಹಾಗೂ ಇತರರು ಹಲ್ಲೆಗೆ ಒಳಗಾಗಿದ್ದು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಗದೀಶ್, ಕಾರ್ತಿಕ್ ಮತ್ತು ರಘು ಎಂಬುವರನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನೂ ಮೂವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಈಶಾನ್ಯ ಡಿಸಿಪಿ ಡಾ. ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.

    6 ಮಂದಿಯಿಂದ ಹಲ್ಲೆ: ಲಾಕ್​ಡೌನ್ ಹಿನ್ನೆಲೆಯಲ್ಲಿ ಸ್ವರಾಜ್ ಅಭಿಯಾನ್ ಸಂಘಟನೆ ಕಾರ್ಯಕರ್ತರು ನಗರದ ವಿವಿಧೆಡೆ ನೆಲೆಸಿರುವ ಬಡ ಹಾಗೂ ಕೂಲಿ ಕಾರ್ವಿುಕರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ. ಅದರಂತೆ, ಭಾನುವಾರ (ಏ.5) ಸಂಜೆ 6.30ರಲ್ಲಿ ತಬ್ರೇಜ್, ಉದಯ್ ಕಿರಣ್, ಕಿರಣ್ ಹಾಗೂ ಸಂತೋಷ್ ಎಂಬುವರು ದಾಸರಹಳ್ಳಿ ಸಮೀಪ ಕೊಳೆಗೇರಿಯಲ್ಲಿ ನೆಲೆಸಿದ್ದ ಕೂಲಿಕಾರ್ವಿುಕರಿಗೆ ದಿನಸಿ ಹಂಚಲು ತೆರಳಿದ್ದರು. ಈ ವೇಳೆ ದ್ವಿಚಕ್ರ ವಾಹನಗಳಲ್ಲಿ ಸ್ಥಳಕ್ಕೆ ಬಂದ 6 ಮಂದಿ, ದಿನಸಿ ಹಂಚದಂತೆ ತಾಕೀತು ಮಾಡಿದ್ದಾರೆ. ಈ ಬಗ್ಗೆ ಕಾರ್ಯಕರ್ತರು ಪ್ರಶ್ನೆ ಮಾಡಿದ್ದರು. ಆಗ ಮಾತಿಗೆ ಮಾತು ಬೆಳೆದಿದ್ದು ತಬ್ರೇಜ್ ಹಾಗೂ ಇತರ ಮೇಲೆ ಕ್ರಿಕೆಟ್ ಬ್ಯಾಟ್​ನಿಂದ ಆರೋಪಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಅಪಪ್ರಚಾರ: ದಿನಸಿ ಹಂಚುತ್ತಿರುವುದರಿಂದಲೇ ನಗರದಲ್ಲಿ ಕರೊನಾ ಸೋಂಕು ಹರಡುತ್ತಿದೆ ಎಂದು ಯುವಕರು ಅಪಪ್ರಚಾರ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಆಶಾ ಕಾರ್ಯಕರ್ತೆಯರ ಕರ್ತವ್ಯಕ್ಕೆ ಮತ್ತೆ ಅಡ್ಡಿ ಜಾಲತಾಣದಲ್ಲಿ ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts