More

    ಗುಡಿಸಲುವಾಸಿಗಳಿಗೆ ದಿನಸಿ ಸಾಮಗ್ರಿ ವಿತರಣೆ

    ರೋಣ: ಪಟ್ಟಣದ ಗುಡಿಸಲುವಾಸಿಗಳಿಗೆ ದಾನಿಗಳಿಂದ ದಿನಸಿ ಸಾಮಗ್ರಿ ಹರಿದು ಬರುತ್ತಿವೆ. ದಿನ ನಿತ್ಯದ ಕೂಲಿ ನೆಚ್ಚಿಕೊಂಡಿದ್ದ ಪಟ್ಟಣದ ಗುಡಿಸಲುವಾಸಿಗಳು ಅನುಭವಿಸುತ್ತಿರುವ ಯಾತನೆ ಕುರಿತು ವಿಜಯವಾಣಿ ಮಾ. 29ರಂದು ‘ಸಾಲ ಮರುಪಾವತಿಸಲು ಒತ್ತಡ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.

    ವರದಿಗೆ ಸ್ಪಂದಿಸಿದ ಪಟ್ಟಣದ ಚಿತ್ರಗಾರ ಕುಟುಂಬದವರು ಗುಡಿಸಲುವಾಸಿಗಳಿಗೆ ಅಕ್ಕಿ, ಎಣ್ಣೆ, ಸಕ್ಕರೆ ಇತರೆ, ದಿನಸಿ ವಸ್ತುಗಳನ್ನು ವಿತರಿಸಿದರೆ ಕೆಲ ದಾನಿಗಳು ಅಲ್ಲಿನ ಮಕ್ಕಳಿಗೆ ಹಣ್ಣು-ಹಾಲು ಬಿಸ್ಕೆಟ್ ಪ್ಯಾಕೇಟ್​ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

    ದಿನ ನಿತ್ಯ ದುಡಿದು ತಿನ್ನುವ ರೋಣ ಪಟ್ಟಣದ ಅನೇಕ ಗುಡಿಸಲುವಾಸಿಗಳು ಲಾಕ್​ಡೌನ್​ನಿಂದಾಗಿ ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಪುರಸಭೆಯವರು ಅವರ ಸಹಾಯಕ್ಕೆ ಮುಂದೆ ಬರಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ರಾಜಣ್ಣ ಸುಂಕದ ಮನವಿ ಮಾಡಿದರು.

    ದಿನ ನಿತ್ಯ ಕೂಲಿಮಾಡಿ ದುಡಿದು ತಿನ್ನುತ್ತಿದ್ದ ಕೂಲಿಕಾರರಿಗೆ ಮೈಕ್ರೋ ಫೈನಾನ್ಸ್, ಸ್ಥಳೀಯ ಬಡ್ಡಿ ವ್ಯವಹಾರ ಮಾಡುವವರು ನೀಡಿದ ಹಣದ ಬಡ್ಡಿ ಅಥವಾ ಅಸಲಿಗಾಗಿ ಮೂರು ತಿಂಗಳವರೆಗೆ ಯಾವುದೇ ರೀತಿಯ ಕಿರುಕುಳ ನೀಡಿದರೆ ಅವರ ಮೇಲೆ ಮುಲಾಜಿಲ್ಲದೇ ಕಾನೂನು ಕ್ರಮ ಜರುಗಿಸಲಾಗುವುದು.

    | ಪರಮೇಶ್ವರ ಕವಟಗಿ, ಪಿಎಸ್​ಐ

    ಯಪ್ಪಾ ಎರಡು ದಿನಾ ಆಯ್ತು ಒಲಿ ಹಚ್ಚಿರಲಿಲ್ಲ. ಯಾರೋ ಪುಣ್ಯಾತ್ಮರು ಅಕ್ಕಿ, ಎಣ್ಣಿ, ಸಕ್ಕರಿ, ಹಾಲು ತಂದು ಕೊಟ್ಟಾರ. ಅವರಿಗೆ ಪುಣ್ಯಾ ಬರ್ಲೀ.

    | ಬಾಳವ್ವ ಗೊನ್ನಾಗರ ಗುಡಿಸಲುವಾಸಿ, ರೋಣ ಪಟ್ಟಣ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts