More

    ಖ್ಯಾತ ಜ್ಯೋತಿಷಿ ಎಸ್.ಕೆ.ಜೈನ್ ವಿಧಿವಶ

    ಬೆಂಗಳೂರು: ನಾಡಿನ ಹಿರಿಯ ಜ್ಯೋತಿಷಿ ಎಸ್.ಕೆ.ಜೈನ್ (67) ಶುಕ್ರವಾರ ವಿಧಿವಶರಾದರು. ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಶ್ವಾಸಕೋಶ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಲಕಾರಿಯಾಗದೆ ಇಹಲೋಕ ತ್ಯಜಿಸಬೇಕಾಯಿತು.

    ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಮೂಲತ: ದಕ್ಷಿಣಕನ್ನಡ ಜಿಲ್ಲೆಯವರಾದ ಸುರೇಂದ್ರಕುಮಾರ್ ಜೈನ್ (ಎಸ್.ಕೆ.ಜೈನ್) ಅವರು ಬೆಂಗಳೂರಿನಲ್ಲಿ ವಾಸವಾಗಿದ್ದರು. ತಮ್ಮ ತಂದೆ ಶಶಿಕಾಂತ್ ಜೈನ್ ಅವರಿಂದ ಜ್ಯೋತಿಷ್ಯವನ್ನು ಸಿದ್ಧಿಸಿಕೊಂಡಿದ್ದ ಅವರು ಸಾರ್ವಜನಿಕರಿಗೆ ಮನಮುಟ್ಟುವ ರೀತಿ ಭವಿಷ್ಯವನ್ನು ಹೇಳುತ್ತಿದ್ದರು. ಇದರಿಂದಾಗಿಯೇ ಅವರಿಗೆ ಕರ್ನಾಟಕ ಸೇರಿ ದೇಶದೆಲ್ಲೆಡೆ ಅಸಂಖ್ಯ ಅಭಿಮಾನಿಗಳನ್ನು ಹೊಂದಿದ್ದರು. ಉತ್ತಮ ವಾಗ್ಮಿಯೂ ಆಗಿದ್ದ ಎಸ್.ಕೆ.ಜೈನ್ ಅವರು ಭಗವದ್ಗೀತೆ ಪ್ರಚಾರದಲ್ಲೂ ತೊಡಗಿಸಿಕೊಂಡಿದ್ದರು.

    ಟಿವಿ ಜ್ಯೋತಿಷಿ ಎಂದೇ ಪ್ರಸಿದ್ಧಿ:

    ಎಸ್.ಕೆ.ಜೈನ್ ಅವರು ಸುಮಾರು 40 ವರ್ಷಗಳಿಂದ ಜ್ಯೋತಿಷ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಇವರು 20 ವರ್ಷಗಳ ಹಿಂದೆಯೇ ಕನ್ನಡದ ವಾಹಿನಿಯಲ್ಲಿ ಮೊದಲ ಬಾರಿಗೆ ಜ್ಯೋತಿಷ್ಯ ಕುರಿತು ಕಾರ್ಯಕ್ರಮ ಪ್ರಸಾರಗೊಂಡು ಗಮನ ಸೆಳೆದಿದ್ದರು. ಉದಯ ಟಿವಿಯ ‘ಕಾಲಚಕ್ರ’ ಕಾರ್ಯಕ್ರಮದ ಮೂಲಕ ಕನ್ನಡಿಗರ ಮನೆಮಾತಾಗಿದ್ದರು. ಹಬ್ಬ-ಹರಿದಿನ, ಗ್ರಹಣ ಹಾಗೂ ವಿಶೇಷ ದಿನಗಳ ಕುರಿತು ವಿವರವಾಗಿ ಮಾಹಿತಿ ನೀಡುತ್ತಿದ್ದರು. ವಾರದ ರಾಶಿಲ ಬಗ್ಗೆ ತಿಳಿದುಕೊಳ್ಳಲು ಜನರು ಟಿವಿ ಮುಂದೆ ಕಾಯುತ್ತಿದ್ದದ್ದು ಉಂಟು. ಹಲವು ಹಿರಿಯ ರಾಜಕಾರಣಿಗಳು ಹಾಗೂ ಗಣ್ಯರು ಎಸ್.ಕೆ.ಜೈನ್ ಬಳಿ ತಮ್ಮ ಭವಿಷ್ಯವಾಣಿ ಕುರಿತು ಚರ್ಚೆ ನಡೆಸಿದ್ದರು.
    ಎಸ್.ಕೆ.ಜೈನ್ ಅವರಿಗೆ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts