More

    ಶೈಕ್ಷಣಿಕ ವ್ಯವಸ್ಥೆಯಲ್ಲಿ ಧಾರ್ಮಿಕ ಭಾವನೆ ಮಧ್ಯೆ ಪ್ರವೇಶಿಸ ಬಾರದು

    ಚಿತ್ರದುರ್ಗ: ಶೈಕ್ಷಣಿಕ ವ್ಯವಸ್ಥೆಯಲ್ಲಿ ಧಾರ್ಮಿಕ ಭಾವನೆ ಮಧ್ಯೆ ಪ್ರವೇಶಿಸ ಬಾರದು ಎಂದು ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಹೇಳಿದರು.ನಗರದ ಸರ್ಕಾರಿ ವಿಜ್ಞಾನ ಪದವಿ ಕಾಲೇಜಿನಲ್ಲಿ ಗುರುವಾರ ವೇದಾಂತ ಫೌಂಡೇಷನ್ ಸಿಎಸ್‌ಆರ್ ನಿಧಿಯಡಿ ನಿರ್ಮಿಸಿರುವ ಕಾಪೌಂ ಡ್ ಹಾಗೂ ನೈರ್ಮಲ್ಯ ಸಂಕೀರ್ಣ ಉದ್ಘಾಟಿಸಿ,ಸುದ್ದಿಗಾರರೊಂದಿಗೆ ಮಾತನಾಡಿದರು.

    ಆರ್ಥಿಕ ಪರಿಸ್ಥಿತಿ ಮಕ್ಕಳಲ್ಲಿ ಮೇಲು-ಕೀಳು ಭಾವನೆಗೆ ಕಾರಣವಾಗಬಾರದು. ಖಾಸಗಿಕರಣದಿಂದಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಕಂದಕ ನಿರ್ಮಾಣವಾಗಿದೆ. ಇದು ಸಮಾಜದ ಸ್ವಾಸ್ಥ್ಯಕ್ಕೆ ಒಳ್ಳೆಯದಲ್ಲ. ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಸಂಹಿತೆ ಪಾಲನೆಯಾಗಬೇಕು. ಜಾತಿ,ಧರ್ಮವನ್ನೂ ಮೀರಿ ಉತ್ತಮ ಶೈಕ್ಷಣಿಕ ವಾತಾವರಣ ರೂಪಗೊಳ್ಳ ಬೇಕೆಂದು,ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಪ್ರತ್ಯೇಕ ಕಾಲೇಜು ಸ್ಥಾಪಿಸುವ ರಾಜ್ಯದ ವಕ್ಫ್‌ಬೋರ್ಡ್ ನಿಲುವಿಗೆ ಪ್ರತಿಕ್ರಿಯಿಸಿದರು.

    ಚಿತ್ರದುರ್ಗದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಯಾಗಲಿದೆ. ಇದಕ್ಕಾಗಿ ಮಂಜೂರಾಗಿರುವ 10 ಎಕರೆ ಜಮೀನಲ್ಲಿ ಇರುವ 66 ಕೆ.ವಿ.ವಿದ್ಯುತ್ ಮಾರ್ಗದ ಸ್ಥಳಾಂತರಕ್ಕೆ ಕ್ಲುಪ್ತ ಅವಧಿಗೆ ಟೆಂಡರ್ ಕರೆಯಲಾಗುತ್ತಿದೆ. ಸದ್ಯಕ್ಕೆ ವಿಜ್ಞಾನ ಕಾಲೇಜಿನಲ್ಲಿ ವಿದ್ಯಾಲಯ ಕಾರ‌್ಯಾ ರಂಭ ಮಾಡಲಿದೆ.
    ವೇದಾಂತ ಮೈನ್ಸ್,6 ಕೊಠಡಿ ಹಾಗೂ ಅಗತ್ಯ ಶೌಚಗೃಹಗಳನ್ನು ನಿರ್ಮಿಸಿ,ವಿದ್ಯುತ್ ಸಂಪರ್ಕ ಹಾಗೂ ಕಾಪೌಂಡ್ ನಿರ್ಮಿಸಿದ್ದಾರೆ. ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಭೂ ಸ್ವಾಧೀನಕ್ಕಾಗಿ ರೈಲ್ವೆ ಇಲಾಖೆ 150 ಕೋಟಿ ರೂ. ನೀಡಿದೆ. ಫೆಬ್ರ ವರಿಗೆ ಈ ಮಾರ್ಗಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.

    ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು,ಉಪವಿಭಾಗಧಿಕಾರಿ ಆರ್.ಚಂದ್ರಯ್ಯ,ಪ್ರಾಚಾರ‌್ಯ ಹನುಮಂತರಾಯ,ತಹಸೀಲ್ದಾರ್ ಸತ್ಯನಾ ರಾಯಣ,ವೇದಾಂತ ಫೌಂಡೇಷನ್ ಶ್ರೀಶೈಲಗೌಡ,ಪಿ.ನಾರಾಯಣ,ರಾಮನ್‌ರಂಜನ್‌ದಾಸ್,ರವಿನಾಯಕ್,ಯತಿರಾಜು, ಸಂತೋಷ್ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts