More

    ಪರಿಹಾರ ಪ್ಯಾಕೇಜ್ ಘೋಷಿಸಲು ಅತಿಥಿ ಶಿಕ್ಷಕ, ಉಪನ್ಯಾಸರ ಆಗ್ರಹ

    ಲಿಂಗಸುಗೂರು / ಮಾನ್ವಿ / ಮಸ್ಕಿ: ಕೂಡಲೇ ಅತಿಥಿ ಶಿಕ್ಷಕ, ಉಪನ್ಯಾಸಕರ ಬಾಕಿ ವೇತನ ಕೂಡಲೇ ಪಾವತಿಸಬೇಕು. ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು. ಉದ್ಯೋಗ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿ ನಾನಾ ಸಂಘಟನೆಗಳಿಂದ ಲಿಂಗಸೂಗೂರು, ಮಾನ್ವಿ ಮತ್ತು ಮಸ್ಕಿಯಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

    ಲಿಂಗಸುಗೂರಿನಲ್ಲಿ ಎಐಡಿಐಒ ಸಂಘಟನೆ ನೇತೃತ್ವದಲ್ಲಿ ಅತಿಥಿ ಶಿಕ್ಷಕರು ಎಸಿ ಕಚೇರಿ ತಹಸೀಲ್ದಾರ್ ಶಮ್ ಶಾಲಂಗೆ ಮನವಿ ಸಲ್ಲಿಸಿದರು. ಲಾಕ್‌ಡೌನ್ ಜಾರಿಯಿಂದ ಅತಿಥಿ ಶಿಕ್ಷಕರ ಸಮಸ್ಯೆ ಉಲ್ಬಣಗೊಂಡಿದೆ. ಸೇವಾ ಭದ್ರತೆ ಒದಗಿಸಿ ನೇಮಕಾತಿಯಲ್ಲಿ ಪ್ರಥಮ ಆದ್ಯತೆ ನೀಡಬೇಕು. ಪರಿಹಾರ ಪ್ಯಾಕೇಜ್ ಘೋಷಿಸಬೇಕು. ಸೇವೆ ಸಲ್ಲಿಸಿದವರನ್ನು ಕಾಯಂ ಮಾಡಬೇಕು ಎಂದು ಒತ್ತಾಯಿಸಿದರು.

    ಪರಿಹಾರ ಪ್ಯಾಕೇಜ್ ಘೋಷಿಸಲು ಅತಿಥಿ ಶಿಕ್ಷಕ, ಉಪನ್ಯಾಸರ ಆಗ್ರಹ
    ಲಿಂಗಸುಗೂರು ಎಸಿ ಕಚೇರಿ ತಹಸೀಲ್ದಾರ್ ಶಮ್ ಶಾಲಂಗೆ ಎಐಡಿವೈಒ ಸಂಘಟನೆ ನೇತೃತ್ವದಲ್ಲಿ ಅತಿಥಿ ಶಿಕ್ಷಕರು ಮನವಿ ಸಲ್ಲಿಸಿದರು.

    ಸಂಘದ ರಾಜ್ಯ ಉಪಾಧ್ಯಕ್ಷ ಶರಣಪ್ಪ ಉದ್ಭಾಳ್, ಜಿಲ್ಲಾ ಉಪಾಧ್ಯಕ್ಷ ತಿರುಪತಿ ಗೋನವಾರ, ಅತಿಥಿ ಉಪನ್ಯಾಸಕರಾದ ಮಹಾದೇವ ನಾಗರಹಾಳ, ಅಮರೇಶ ವೆಂಕಟಾಪುರ, ಬಸವರಾಜ ಬಿರಾದಾರ, ಮಾನಪ್ಪ, ಗಂಗಾಧರ, ಶರಣಪ್ಪ ಪವಾರ್, ಬಾಲಾಜಿ, ಶಂಕ್ರಪ್ಪ, ಸುರೇಶ ಇತರರಿದ್ದರು.

    ಮಾನ್ವಿಯಲ್ಲಿ ಎಐಡಿವೈಓ ಜಿಲ್ಲಾ ಸಮಿತಿ ಸದಸ್ಯರು ಗುರುವಾರ ಕಂದಾಯ ನಿರೀಕ್ಷಕಿ ವಾಸವಿಗೆ ಮನವಿ ಸಲ್ಲಿಸಿದರು. ಆರ್ಥಿಕ ಸಂಕಷ್ಟದಿಂದ ಕುಟುಂಬ ನಿರ್ವಹಣೆ ತೊಂದರೆಯಾಗಿದೆ ಎಂದರು ಆಗ್ರಹಿಸಿದರು. ತಾಲೂಕು ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತ ಯಡಿವಾಳ, ಉಪನ್ಯಾಸಕರ ಸಂಘದ ಅಧ್ಯಕ್ಷ ಎನ್.ವಿರುಪನಗೌಡ, ಜಿಲ್ಲಾ ಸಮಿತಿ ಸದಸ್ಯ ಪಂಪನಗೌಡ, ಮೋದಿನ್‌ಸಾಬ್, ಮಂಜುನಾಥ, ಗಾಳೆಪ್ಪ ಅಮರಾವತಿ, ಹನುಮಂತ, ಉರುಕುಂದಪ್ಪ, ಅಮರೇಶ, ಅಶ್ವಿನಿ, ಮಲ್ಲಮ್ಮ, ನಾಗರಾಜ, ಯಲ್ಲಪ್ಪ, ಮಹೇಶ, ಮಹಾಲಕ್ಷ್ಮೀ, ಬಿ.ವಿಜಯಲಕ್ಷ್ಮೀ, ಸಿದ್ದಲಿಂಗಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts