More

    ಮಕ್ಕಳಿಗೆ ನೈತಿಕ, ಸಂಸ್ಕಾರಯುತ ಶಿಕ್ಷಣ ಕಲಿಸಿ

    ಎನ್.ಆರ್.ಪುರ: ಪ್ರತಿ ಮಕ್ಕಳಿಗೂ ಶಾಲಾ ಶಿಕ್ಷಣದ ಜತೆಗೆ ನೈತಿಕ ಶಿಕ್ಷಣ ಹಾಗೂ ಸಂಸ್ಕಾರಯುತ ಶಿಕ್ಷಣ ಅಗತ್ಯ ಎಂದು ಉಪನ್ಯಾಸಕಿ ಮಧುರ ಮಂಜುನಾಥ್ ಹೇಳಿದರು.
    ಭಾನುವಾರ ಮಲ್ಲಂದೂರಿನ ಶಾಲಾ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುದುರೆಗುಂಡಿ ವಲಯ ಹೊಡಿಯಾಲ ಕಾರ್ಯ ಕ್ಷೇತ್ರದ ಆಶ್ರಯದಲ್ಲಿ ನೂತನವಾಗಿ ಪ್ರಾರಂಭವಾದ ಹೊನ್ನಮ್ಮೇಶ್ವರಿ ಮಹಿಳಾ ಜ್ಞಾನ ವಿಕಾಸ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
    ಪ್ರತಿಯೊಬ್ಬ ಮೂಲಭೂತ ಅಗತ್ಯಗಳಲ್ಲಿ ಶಿಕ್ಷಣವೂ ಸೇರಿದೆ. ಪ್ರತಿ ಮನೆಗಳಲ್ಲಿರುವ ವಾತಾವರಣ ಮಗುವಿನ ಮೇಲೆ ಪರಿಣಾಮ ಬೀರಲಿದೆ. ಮಕ್ಕಳಿಗೆ ಮೊದಲ ಗುರು ತಂದೆ, ತಾಯಿಗಳಾಗಿದ್ದಾರೆ. ಶಿಕ್ಷಣ ಎಂಬುದು ಕೇವಲ ಅಕ್ಷರಜ್ಞಾನಕ್ಕೆ, ಉದ್ಯೋಗಕ್ಕೆ ಮಾತ್ರ ಸೀಮಿತವಾಗಿರದೆ ಮುಂದಿನ ಸಂಸ್ಕಾರಯುತ ಉತ್ತಮ ಜೀವನ ನಡೆಸಲು ಸಹಕಾರಿಯಾಗಬೇಕಾಗಿದೆ. ಪ್ರತಿ ಮಹಿಳೆ ಹಣೆಗೆ ಧರಿಸುವಂತಹ ಕುಂಕುಮ, ಮಾಂಗಲ್ಯ ಕೇವಲ ಸೌಂದರ್ಯಕ್ಕೆ ಮಾತ್ರವಾಗಿರದೇ ಅದಕ್ಕೆ ವೈಜ್ಞಾನಿಕ ಕಾರಣಗಳು ಇದೆ ಎಂದು ವಿವರಿಸಿದರು.
    ಕೊಪ್ಪ, ಎನ್.ಆರ್.ಪುರ ತಾಲೂಕುಗಳ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ರಂಜಿತಾ ಮಾತನಾಡಿ, ಮಹಿಳಾ ಜ್ಞಾನ ವಿಕಾಸ ಕೇಂದ್ರ 1992 ರಲ್ಲಿ ಪ್ರಾರಂಭವಾಗಿದೆ. ಮಲ್ಲಂದೂರಿನಲ್ಲಿ 6 ಸಂಘ ಸೇರಿಸಿ ಹೊನ್ನಮ್ಮೇಶ್ವರಿ ಮಹಿಳಾ ಜ್ಞಾನ ವಿಕಾಸ ಕೇಂದ್ರ ಎಂದು ನಾಮಕರಣ ಮಾಡಿದ್ದೇವೆ ಪ್ರತಿ ತಿಂಗಳು ಜ್ಞಾನವಿಕಾಸ ಕೇಂದ್ರದ ಸಭೆಗೆ ಎಲ್ಲ ಸದಸ್ಯರು ಆಗಮಿಸಬೇಕು ಎಂದರು. ಒಕ್ಕೂಟದ ಅಧ್ಯಕ್ಷ ಅಶೋಕ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ಜ್ಞಾನ ವಿಕಾಸ ಕೇಂದ್ರದ ದಾಖಲಾತಿ ಹಸ್ತಾಂತರಿಸಿದರು. ಸೇವಾ ಪ್ರತಿನಿಧಿ ಸಂದೇಶ್, ಕೃಷ್ಣಮೂರ್ತಿ, ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ಸುನೀತಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts