More

    ಪ್ರತಿದಿನ 1 ಲಕ್ಷ ರೋಗಿಗಳಿಗೆ ಉಚಿತವಾಗಿ ಪ್ರಾಣವಾಯು ಒದಗಿಸುತ್ತಿರುವ ರಿಲಯನ್ಸ್ ಇಂಡಸ್ಟ್ರೀಸ್

    ಮುಂಬೈ : ಕರೊನಾ ಎರಡನೇ ಅಲೆಯ ಹೊಡೆತಕ್ಕೆ ತತ್ತರಿಸಿರುವ ಭಾರತದಲ್ಲಿ ಕರೊನಾ ರೋಗಿಗಳ ಚಿಕಿತ್ಸೆಗಾಗಿ ಮೆಡಿಕಲ್ ಆಕ್ಸಿಜನ್​​ನ ಕೊರತೆ ತಲೆದೋರಿದೆ. ಈ ಸಮಯದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಪ್ರತಿದಿನ 1 ಲಕ್ಷ ಜನ ರೋಗಿಗಳ ಅಗತ್ಯ ಪೂರೈಸಬಲ್ಲ 1000 ಮೆಗಾಟನ್ ದ್ರವರೂಪದ ಆಕ್ಸಿಜನ್ ಉತ್ಪಾದಿಸಿ, ದೇಶದ ವಿವಿಧ ಭಾಗಗಳಿಗೆ ಉಚಿತವಾಗಿ ವಿತರಿಸುತ್ತಿದೆ. ತನ್ಮೂಲಕ ದೇಶವಾಸಿಗಳ ಪ್ರಾಣರಕ್ಷಣೆಯಲ್ಲಿ ತೊಡಗಿದೆ.

    ಕರೊನಾ ಸಾಂಕ್ರಾಮಿಕ ಆರಂಭವಾದ ಹಿನ್ನೆಲೆಯಲ್ಲಿ ಮೆಡಿಕಲ್ ಗ್ರೇಡ್ ಲಿಖ್ವಿಡ್​ ಆಕ್ಸಿಜನ್ ಉತ್ಪಾದನೆಯ ಹೊಸ ಕ್ಷೇತ್ರಕ್ಕೆ ಕಾಲಿಟ್ಟ ರಿಲಯನ್ಸ್ ಇಂಡಸ್ಟ್ರೀಸ್, ಒಂದೇ ಸ್ಥಳದಿಂದ ದೇಶದಲ್ಲೇ ಅತಿಹೆಚ್ಚು ಉತ್ಪಾದನೆ ಮಾಡುತ್ತಿರುವ ಕಂಪೆನಿಯಾಗಿ ಬೆಳೆದಿದೆ. ಭಾರತದ ಒಟ್ಟು ದ್ರವರೂಪದ ಮೆಡಿಕಲ್ ಆಕ್ಸಿಜನ್ ಉತ್ಪಾದನೆಯಲ್ಲಿ ಶೇ. 11 ರಷ್ಟನ್ನು ರಿಲಯನ್ಸ್ ಕಂಪೆನಿ ಪೂರೈಸುತ್ತಿದೆ. ತನ್ಮೂಲಕ 10 ರೋಗಿಗಳಲ್ಲಿ ಒಬ್ಬ ರೋಗಿಗೆ ತನ್ನ ಸೇವೆ ಒದಗಿಸುತ್ತಿದೆ ಎಂದು ರಿಲೈಯನ್ಸ್ ಕಂಪೆನಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

    ಇದನ್ನೂ ಓದಿ: ಮಾಜಿ ಸೇನಾಧಿಕಾರಿ, ನಟ ಬಿಕ್ರಮ್​ಜೀತ್​ ಕನ್ವರ್​​ಪಾಲ್ ಕರೊನಾಗೆ ಬಲಿ

    ಗುಜರಾತಿನ ಜಾಮ್​ನಗರದಲ್ಲಿರುವ ರಿಫೈನರಿ-ಕಮ್-ಪೆಟ್ರೊಕೆಮಿಕಲ್ ಕಾಂಪ್ಲೆಕ್ಸ್​ನಲ್ಲಿರುವ ಘಟಕಗಳಲ್ಲಿ ಈ ಉತ್ಪಾದನೆ ನಡೆಯುತ್ತಿದೆ. 2021 ರ ಏಪ್ರಿಲ್​ ತಿಂಗಳಲ್ಲಿ 15,000 ಎಂಟಿ ಮೆಡಿಕಲ್ ಗ್ರೇಡ್​ ಲಿಖ್ವಿಡ್ ಆಕ್ಸಿಜನ್​ಅನ್ನು ಉಚಿತವಾಗಿ ಸರಬರಾಜು ಮಾಡಿದ್ದು, ಇದರಿಂದ ಸುಮಾರು 15 ಲಕ್ಷ ರೋಗಿಗಳಿಗೆ ಸಹಾಯವಾಗಿದೆ. ಇತ್ತೀಚೆಗೆ ಹೆಚ್ಚುವರಿಯಾಗಿ 500 ಎಂಟಿ ಸಾಗಣೆಯ ಸಾಮರ್ಥ್ಯವನ್ನು ಒದಗಿಸಲು 24 ಐಎಸ್​ಒ ಕಂಟೈನರ್​​ಗಳನ್ನು ವಿವಿಧ ದೇಶಗಳಿಂದ ರಿಲೈಯನ್ಸ್ ಭಾರತಕ್ಕಾಗಿ ಖರೀದಿಸಿದೆ. ಇನ್ನೂ ಹೆಚ್ಚಿನ ಕಂಟೇನರ್​ಗಳನ್ನು ಬರುವ ದಿನಗಳಲ್ಲಿ ಜೋಡಿಸಲಿದೆ ಎಂದು ಕಂಪೆನಿ ತಿಳಿಸಿದೆ.

    ಪ್ರತಿದಿನ 1 ಲಕ್ಷ ರೋಗಿಗಳಿಗೆ ಉಚಿತವಾಗಿ ಪ್ರಾಣವಾಯು ಒದಗಿಸುತ್ತಿರುವ ರಿಲಯನ್ಸ್ ಇಂಡಸ್ಟ್ರೀಸ್

    ದೇಶದಲ್ಲಿರುವ ವಿಪರೀತ ಪರಿಸ್ಥಿತಿಯಲ್ಲಿ ಅತ್ಯಗತ್ಯವಾದ ಮೆಡಿಕಲ್ ಆಕ್ಸಿಜನ್​ಅನ್ನು ಪೂರೈಸಲು ನಮ್ಮ ಕಾರ್ಮಿಕರು, ಇಂಜಿನಿಯರ್​ಗಳು ಅಹೋರಾತ್ರಿ ಶ್ರಮಿಸುತ್ತಿದ್ದಾರೆ ಎಂದು ರಿಲಯನ್ಸ್​ ಇಂಡಸ್ಟ್ರೀಸ್​​ನ ಚೇರ್​ಮನ್ ಮುಖೇಶ್ ಅಂಬಾನಿ ಹೇಳಿದ್ದಾರೆ. ಅಂಬಾನಿ ಅವರು ಜಾಮನಗರ ಘಟಕದಲ್ಲಿ ಆಕ್ಸಿಜನ್ ಉತ್ಪಾದನೆಯು ಸಮರ್ಪಕವಾಗಿ ಮತ್ತು ಹೆಚ್ಚಾಗಿ ನೆರವೇರಿ, ಸಕಾಲಿಕವಾಗಿ ಸಾಗಣೆಯಾಗಲು ಖುದ್ದು ಉಸ್ತುವಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಪ್ರಾಣವಾಯು ನೀಡಿದ ಸೌದಿ ಅರೇಬಿಯಾ !

    “ದೇಶದ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ನಮ್ಮ ಜಾಮ್​ನಗರದ ರಿಫೈನರಿಯನ್ನು ಆಕ್ಸಿಜನ್​ ತಯಾರಿಸಲು ಬಳಸುತ್ತಿದ್ದೇವೆ. ಕರೊನಾದ ಈ ವಿಷಮ ಪರಿಸ್ಥಿತಿಯ ವಿರುದ್ಧ ನಾವೆಲ್ಲಾ ಒಟ್ಟಾಗಿ ಹೋರಾಡೋಣ” ಎಂದು ರಿಲಯನ್ಸ್​ ಫೌಂಡೇಷನ್​ನ ಮುಖ್ಯಸ್ಥೆಯಾದ ನೀತಾ ಅಂಬಾನಿ ಹೇಳಿದ್ದಾರೆ.

    ಮದುವೆ ಮಂಟಪ ದಾಳಿ : ಎರ್ರಾಬಿರ್ರಿ ವರ್ತಿಸಿದ ಡಿಎಂ ಸಸ್ಪೆಂಡ್

    ರಸ್ತೆ ಬದಿ ಅನಾಥವಾಗಿ ಸಿಕ್ಕಿತು ಕರೊನಾ ಲಸಿಕೆ ತುಂಬಿದ ಟ್ರಕ್​ !

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts