ರಸ್ತೆ ಬದಿ ಅನಾಥವಾಗಿ ಸಿಕ್ಕಿತು ಕರೊನಾ ಲಸಿಕೆ ತುಂಬಿದ ಟ್ರಕ್​ !

ಭೋಪಾಲ್ : ಸಾಕಷ್ಟು ಲಸಿಕೆಗಳ ಪೂರೈಕೆಯಾಗಿಲ್ಲ ಎಂದು ಮಧ್ಯಪ್ರದೇಶ ಸರ್ಕಾರ ಇಂದು ಆರಂಭವಾಗಬೇಕಿದ್ದ 18 ವರ್ಷ ಮೇಲ್ಪಟ್ಟವರ ಕರೊನಾ ಲಸಿಕಾ ಅಭಿಯಾನವನ್ನು ಮುಂದೂಡಿದೆ. ಆದರೆ, ಸುಮಾರು ಎರಡೂವರೆ ಲಕ್ಷ ಡೋಸ್​ ಕೋವಾಕ್ಸಿನ್ ಲಸಿಕೆಯನ್ನು ಸಾಗಿಸುತ್ತಿದ್ದ ಟ್ರಕ್​ ಒಂದು ರಾಜ್ಯದ ಪಟ್ಟಣವೊಂದರಲ್ಲಿ ರಸ್ತೆ ಬದಿಯಲ್ಲಿ ಅನಾಥವಾಗಿ ಸಿಕ್ಕಿರುವುದು ವರದಿಯಾಗಿದೆ. ಮಧ್ಯಪ್ರದೇಶದ ನರಸಿಂಗಪುರ ಜಿಲ್ಲೆಯ ಕರೇಲಿ ಬಸ್​ ನಿಲ್ದಾಣದ ಬಳಿ ಬಹಳಷ್ಟು ಸಮಯದಿಂದ ರಸ್ತೆಯ ಬದಿಯಲ್ಲಿ ಯಾರೋ ಟ್ರಕ್​ ಒಂದನ್ನು ಬಿಟ್ಟು ಹೋಗಿದ್ದಾರೆ. ಅದರ ಚಾಲಕ ಅಥವಾ ಕ್ಲೀನರ್​ ಸ್ಥಳದಲ್ಲಿ … Continue reading ರಸ್ತೆ ಬದಿ ಅನಾಥವಾಗಿ ಸಿಕ್ಕಿತು ಕರೊನಾ ಲಸಿಕೆ ತುಂಬಿದ ಟ್ರಕ್​ !