More

    ಕ್ಷಯ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳಲಿ

    ಕಂಪ್ಲಿ: ತಾಲೂಕಿನ ಎಮ್ಮಿಗನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷಯ ರೋಗಿಗಳಿಗೆ ಆಹಾರ ಕಿಟ್, ಪ್ರೋಟೀನ್ ಪೌಡರ್ ವಿತರಣೆ ಕಾರ್ಯಕ್ರಮ ಮಂಗಳವಾರ ನಡೆಯಿತು.

    ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಹಮ್ಮದ್ ಫಾರೂಕ್ ಮಾತನಾಡಿ, 2025ರೊಳಗೆ ಕ್ಷಯ ಮುಕ್ತ ಭಾರತವನ್ನಾಗಿ ರೂಪಿಸಬೇಕಿದೆ. ಈ ದಿಸೆಯಲ್ಲಿ ಎರಡು ವಾರಕ್ಕೂ ಹೆಚ್ಚು ಕೆಮ್ಮುವವರು, ಸಂಜೆ ವೇಳೆ ಜ್ವರ ಬರುವುದು, ತೂಕ ಕಡಿಮೆಯಾಗುವುದು, ಹಸಿವೆಯಾಗದಿರುವುದು, ಎದೆನೋವು, ಕೆಮ್ಮಿದಾಗ ಕಫದಲ್ಲಿ ರಕ್ತ ಬೀಳುವುದು ಇವು ಕ್ಷಯದ ಲಕ್ಷಣಗಳಾಗಿವೆ.

    ಇದನ್ನು ಓದಿ: ಕ್ಷಯರೋಗಕ್ಕೆ ಬಡವರೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿ : ಕೇಂದ್ರ ಭಗವಂತ ಖೂಬಾ ಕಳವಳ

    ಈ ಲಕ್ಷಣ ಕಂಡುಬಂದಲ್ಲಿ ಕಫ ಪರೀಕ್ಷೆ ಮಾಡಿಸಿಕೊಂಡು ಉಚಿತ ಚಿಕಿತ್ಸೆ ಪಡೆದುಕೊಳ್ಳಬೇಕು. ಆರು ತಿಂಗಳ ನಂತರ ನ್ಯೂಟ್ರಿಷಿಯನ್ ಆಹಾರಕ್ಕಾಗಿ ಪ್ರತಿ ತಿಂಗಳು 500 ರೂ. ಪಾವತಿಸಲಾಗುವುದು. ಗುಟ್ಕಾ, ಮದ್ಯಸೇವನೆ, ಧೂಮಪಾನ, ಎಲೆ ಅಡಿಕೆ ತಂಬಾಕು ಸೇವಿಸಬಾರದು. ಕ್ಷಯ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುವಲ್ಲಿ ಮುಂದಾಗಬೇಕು ಎಂದರು.


    ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಬಸವರಾಜ ಮಾತನಾಡಿ, ತಾಲೂಕಿನಲ್ಲಿ 89ಕ್ಷಯ ರೋಗಿಗಳಿದ್ದಾರೆ. ಕ್ಷಯದಿಂದ ಮುಕ್ತಗೊಳಿಸಲು ನಾನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಪಿಎಚ್‌ಸಿಒಗಳಾದ ನಂದಾ, ಪೂಜಾ, ಗೀತಾ, ವಿಜಯಲಕ್ಷ್ಮೀ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts