More

    ಪ್ರಾಥಮಿಕ ಶಿಕ್ಷಣ ಮಕ್ಕಳಿಗೆ ಬುನಾದಿ

    ಹುಲಸೂರು: ಮನುಷ್ಯ ಉನ್ನತ ಸ್ಥಾನಕ್ಕೆ ಹೋಗಬೇಕಾದರೆ ಬಸವ ತತ್ವ ಮಾರ್ಗ ಅವಶ್ಯಕವಾಗಿದೆ. ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ಹೋಗಿರುವುದಕ್ಕೆ ಸಂತಸ ತಂದಿದೆ ಎಂದು ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿದರು.

    ಪಟ್ಟಣದ ಗುರು ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ೧೯೯೯ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಬಳಗದಿಂದ ಗುರುವಂದನಾ ಕಾರ್ಯಕ್ರಮ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಪ್ರಾಥಮಿಕ ಹಂತದಲ್ಲಿ ಪಡೆದ ಉತ್ತಮ ಶಿಕ್ಷಣ ಹಾಗೂ ಒಳ್ಳೆಯ ಸಂಸ್ಕಾರ, ಜೀವನದ ಬುನಾದಿ ಆಗಲಿದ್ದು, ತಾವೆಲ್ಲರೂ ಉತ್ತಮ ಸಂಸ್ಕಾರ ಹಾಗೂ ಅಕ್ಷರದ ಮಹತ್ವ ತಿಳಿದುಕೊಂಡಿದ್ದರಿಂದ ಇಂದು ವಿವಿಧ ಇಲಾಖೆಗಳಲ್ಲಿ ಉನ್ನತ ಸ್ಥಾನದಲ್ಲಿ ತಾವು ಜನರ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

    ಹಳೆಯವಿದ್ಯಾರ್ಥಿ ಕಲಬುರಗಿಯ ಸಿಪಿಐ ಬಳಿರಾಮ ಚವ್ಹಾಣ್ ಮಾತನಾಡಿ, ಗುರುಗಳಿಗೆ ಯಾವುದೇ ಆಸೆ ಆಕಾಂಕ್ಷೆವಿರುವುದಿಲ್ಲ. ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ. ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲಿ ಕಷ್ಟಪಟ್ಟು ಓದಿದ್ದರೆ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯ ಎಂದರು.

    ಸಾಯಿಗಾಂವದ ಶ್ರೀ ಶಿವಾನಂದ ಸ್ವಾಮೀಜಿ, ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಭೀಮಾಶಂಕರ ಆದೆಪ್ಪ , ರಾಜಕುಮಾರ ಮೇಹಕರ, ಮನೋಜ ಡಾಂಗೆ , ಶಿವರುದ್ರಯ್ಯ, ಗದಗಯ್ಯ ಮಠಪತಿ, ಜಗದೇವಿ ವಿಭೂತಿ , ಶ್ವೇತಾ ಸುನೀಲ ಮಾತನಾಡಿದರು.

    ಪ್ರಮುಖರಾದ ಕಲ್ಯಾಣರಾವ ಬೆಲ್ದಾಳೆ, ಚಂದ್ರಕಾಂತ ಕೊರಾಳೆ, ವೀರಣ್ಣ ಪತ್ರಿ, ಸಂಗಪ್ಪ ಹಾರಕೂಡೆ, ಮಲ್ಲಿಕಾರ್ಜುನ ನಂದಗೆ, ಮನೋಹರ ಜಾನಬಾ, ವಿಲಾಸರಾವ ಕುಲಕರ್ಣಿ, ಗುರುಣ್ಣ ಮಡಿವಾಳ, ಮಲ್ಲಮ್ಮ ಜಮಾದಾರ, ಗಂಗಮ್ಮ, ಸುನೀತಾ ಪಾಟೀಲ್, ವಿಜಯಕುಮಾರ ನರಶೆಟ್ಟಿ, ಅಶೋಕ ಕಮಠಾಣೆ, ಗಂಗಾಧರ ಪೂಜಾರಿ, ಚಂದ್ರಕಾAತ ಪಾರಶೆಟ್ಟಿ, ಜಗನ್ನಾಥ ನಂದಿಗೆ, ಓಂಕಾರ ವಾಂಚರಖೇಡೆ, ಈರಣ್ಣ ಮಾಲೋದೆ, ಈರಮ್ಮ ಅಂಬುಲಗೆ ಇತರರಿದ್ದರು.
    ರಾಮಲಿಂಗ ಸಾಗಾವೆ ಸ್ವಾಗತಿಸಿದರು. ಬಸಮ್ಮ ಪಾಟೀಲ್ ನಿರೂಪಣೆ ಮಾಡಿದರು.

    ಚೈತನ್ಯ ಆದೆಪ್ಪ, ಸೃಷ್ಟಿ ಭೋಪಳೆ, ಭಾಗ್ಯಶ್ರೀ ಸಂಗಡಿಗರ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಗಮನ ಸೆಳೆದವು. ಹಳೆ ವಿದ್ಯಾರ್ಥಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

    ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ನಿರುದ್ಯೋಗಿ ಆಗದೆ ವಿವಿಧ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ತಾವೆಲ್ಲರೂ ನಿಸ್ವಾರ್ಥ ಮನೋಭಾವನೆಯಿಂದ ಸೇವೆ ಸಲ್ಲಿಸಿ ಶಾಲೆಗೆ ಮತ್ತು ಗ್ರಾಮಕ್ಕೆ ಕೀರ್ತಿ ತರಬೇಕು.
    | ಶ್ರೀ ಡಾ.ಶಿವಾನಂದ ಸ್ವಾಮೀಜಿ, ಶ್ರೀ ಗುರುಬಸವೇಶ್ವರ ಸಂಸ್ಥಾನ ಮಠ ಹುಲಸೂರು

    ಬಾಲ್ಯದಲ್ಲಿ ಕಲಿತ ಅಕ್ಷರ ಎಂದಿಗೂ ನೆನಪು ಹೋಗುವುದಿಲ್ಲ. ಪ್ರಾಥಮಿಕ ಹಂತದಲ್ಲಿ ಪಡೆದ ಉತ್ತಮ ಸಂಸ್ಕಾರ ಜೀವನಕ್ಕೆ ಉಪಯುಕ್ತವಾಗುತ್ತದೆ. ನಮ್ಮ ಜೀವನದಲ್ಲಿ ಬರುವ ಆಗು ಹೋಗುಗಳನ್ನು ಸಮನಾಗಿ ಸ್ವೀಕರಿಸಿದಾಗ ಮಾತ್ರ ಉತ್ತಮ ಪ್ರಜೆ ಆಗಲು ಸಾಧ್ಯ.
    | ಶ್ರೀ ಶಿವಾನಂದ ಸ್ವಾಮೀಜಿ ಹಳೆಯ ವಿದ್ಯಾರ್ಥಿ ಸಾಯಿಗಾಂವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts