More

    ಬದುಕು ರೂಪಿಸುವ ಜಾತ್ರೆಗಳು

    ಹುಲಸೂರು: ಗ್ರಾಮೀಣ ಭಾಗದ ಜಾತ್ರೆಗಳು ಜಾತಿ, ಮತ, ಪಂಥದ ಭೇದವಿಲ್ಲದೆ ನಾವೆಲ್ಲರೂ ಒಂದೇ ಎಂಬ ಸಂದೇಶ ಜತೆಗೆ ಬದುಕು ರೂಪಿಸುತ್ತವೆ ಎಂದು ಶಾಸಕ ಶರಣು ಸಲಗರ ಹೇಳಿದರು.

    ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಜಾತ್ರೋತ್ಸವ ನಿಮಿತ್ತ ಬುಧವಾರ ರಾತ್ರಿ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿದ ಅವರು, ಬಡತನದಲ್ಲಿ ಬೆಳೆದವರು ತಮ್ಮ ಜೀವನದ ಕಹಿ ಘಟನೆಗಳನ್ನು ನೆನೆಯುತ್ತ ಓದಿಗೆ ಹೆಚ್ಚು ಮಹತ್ವ ನೀಡಿ ಉತ್ತಮ ಫಲಿತಾಂಶ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

    ಐಪಿಎಲ್ ಬೆಟ್ಟಿಂಗ್, ಮೊಬೈಲ್​ನಲ್ಲಿ ಜೂಜು ಆಡುವುದರಿಂದ ಯುವಕರು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು. ಪಾಲಕರು ಮಕ್ಕಳ ಚಲನವಲನದ ಮೇಲೆ ನಿಗಾ ವಹಿಸಿ ಅವರ ಅಕೌಂಟ್ ನಿಯಮಿತ ಚೆಕ್ ಮಾಡಬೇಕು ಎಂದು ಸಲಹೆ ನೀಡಿದರು.

    ಶ್ರೀ ಡಾ.ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಹುಲಸೂರಿನಲ್ಲಿ ಜಾತಿ, ಮತ, ಪಂಥ ಎನ್ನದೆ ಎಲ್ಲ ಧರ್ಮೀಯರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.

    ಜಿಪಂ ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ ಮಾತನಾಡಿದರು. ಸಾಯಗಾಂವ ಶ್ರೀ ಶಿವಾನಂದ ಸ್ವಾಮೀಜಿ, ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಕಾಶೀನಾಥ ಪಾರಶೆಟ್ಟಿ, ಉಪಾಧ್ಯಕ್ಷ ಚಂದ್ರಕಾಂತ ದೇಟ್ನೆ, ಕಾರ್ಯದರ್ಶಿ ಬಂಡುರಾವ ಪಾಟೀಲ್, ಗ್ರಾಪಂ ಉಪಾಧ್ಯಕ್ಷೆ ಸರಸ್ವತಿ ಬಾಲಕುಂದೆ, ಡಿಸಿಸಿ ಬ್ಯಾಂಕ್ ನಿರ್ದೇಶಕ ಓಂಕಾರ ಪಟ್ನೆ, ಪ್ರಮುಖರಾದ ಸುಧಿರ ಕಾಡಾದಿ, ಅಶೋಕ ವಕಾರೆ, ಸೂರ್ಯಕಾಂತ ಚಿಲ್ಲಾಬಟ್ಟೆ, ಮಹೇಶ ಫಡನಿಸ್, ಶ್ರೀದೇವಿ ನಿಡೋದೆ, ಬಸಯ್ಯ ಶಾಸ್ಟ್ರೀ, ಪ್ರಭುಕುಮಾರ ಮದ್ರಿ, ಲಕ್ಷಣ್ಮ ಹೇರೂರ ಇದ್ದರು.ಪರಶುರಾಮ ರಾಠೋಡ್ ಸ್ವಾಗತಿಸಿ ನಿರೂಪಣೆ ಮಾಡಿದರು. ಅಂಗನವಾಡಿ ಕೇಂದ್ರ ಹಾಗೂ ವೀರಭದ್ರೇಶ್ವರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

    ಹುಲಸೂರು ತನ್ನದೇ ಆದ ಇತಿಹಾಸ ಹೊಂದಿದೆ. ಶರಣ ಲದ್ದಿ ಸೋಮಣ್ಣ ಕಾಯಕ ಭೂಮಿ ಇದಾಗಿದ್ದು, ಸಾಹಿತ್ಯ ರಚಿಸುವ ಅಗತ್ಯವಿದೆ. ಇದರ ಖರ್ಚು-ವೆಚ್ಚ ಶಾಸಕರು ಭರಿಸಬೇಕು. ಶ್ರೀ ಡಾ.ಶಿವಾನಂದ ಸ್ವಾಮೀಜಿ ೨೨ ಸಾವಿರ ಕಿಲೋಮೀಟರ್ ಪಾದಯಾತ್ರೆ ಮೂಲಕ ಬಸವತತ್ವ ಪ್ರಚಾರ ಪ್ರಸಾರ ಮಾಡಿ ಇತಿಹಾಸ ನಿರ್ಮಿಸಿದ್ದಾರೆ.
    | ಮಲ್ಲಪ್ಪ ಧಬಾಲೆ ಜಿಪಂ ಮಾಜಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts