More

    ಹಲವು ದಾಖಲೆ ಬರೆದ ರಿಲಯನ್ಸ್ ಇಂಡಸ್ಟ್ರೀಸ್ ಷೇರು; ರೂ. 19.5 ಲಕ್ಷ ಕೋಟಿ ಸಂಪತ್ತು ಸೃಷ್ಟಿಸಿದ ಮೊದಲ ಕಂಪನಿ; ಟಾರ್ಗೆಟ್​ ಪ್ರೈಸ್​ ಹೆಚ್ಚಿಸಿದ ದಲ್ಲಾಳಿ ಸಂಸ್ಥೆಗಳು…

    ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಷೇರು ಬೆಲೆ ಸೋಮವಾರ ಶೇಕಡಾ 6.80 ರಷ್ಟು ಏರಿಕೆಯಾಯಿತು. ಈ ಮೂಲಕ ಕಳೆದ ಮೂರು ವರ್ಷಗಳಲ್ಲಿ ತನ್ನ ಅತ್ಯುತ್ತಮ ವಹಿವಾಟು ದಿನವನ್ನು ದಾಖಲಿಸಿತು.

    ಇಂಟ್ರಾ ಡೇ ವಹಿವಾಟಿನ ಆರಂಭದಲ್ಲಿ ಈ ಷೇರು ಬೆಲೆ ಶೇ.7.16ರಷ್ಟು ಜಿಗಿದು ಪ್ರತಿ ಷೇರಿಗೆ 2,900 ರೂ.ಗಳ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತ್ತು. ವಹಿವಾಟಿನ ದಿನದ ಅಂತ್ಯಕ್ಕೆ 2,890.10 ರೂಪಾಯಿಗೆ ತಲುಪಿತು. ಈ ಮೂಲಕ ಜನವರಿಯಲ್ಲಿ ಕಂಪನಿಯ ಷೇರು ಬೆಲೆ ಶೇಕಡಾ 11 ಕ್ಕಿಂತ ಹೆಚ್ಚು ಏರಿಕೆ ದಾಖಲಿಸಿತು.

    ಕಂಪನಿಯ ಮಾರುಕಟ್ಟೆ ಬಂಡವಾಳೀಕರಣವು (mcap) ಮಧ್ಯಾಹ್ನದ ವಹಿವಾಟಿನಲ್ಲಿ 19,56,771.59 ಕೋಟಿ ರೂ.ಗೆ ಏರಿತು. ಇಂತಹ ಸಾಧನೆ ಮಾಡಿದ ಮೊದಲ ಕಂಪನಿಯಾದ ದಾಖಲೆ ಬರೆಯಿತು.

    ರಿಲಯನ್ಸ್ ಇಂಡಸ್ಟ್ರೀಸ್‌ನ ದೃಢವಾದ ಕಾರ್ಯಕ್ಷಮತೆ
    ಸೋಮವಾರ ನಿಫ್ಟಿ 50 ಸೂಚ್ಯಂಕವು ಒಟ್ಟು 385 ಅಂಕಗಳ ಏರಿಕೆ ಕಂಡಿತು. ಈ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್​ನ ಷೇರು ಬೆಲೆ ಏರಿಕೆಯಿಂದಲೇ ನಿಫ್ಟಿಯು 142 ಅಂಕಗಳನ್ನು ಗಳಿಸಿರುವುದು ವಿಶೇಷವಾಗಿದೆ. ಕೊಡುಗೆ ನೀಡಿದೆ, ನಿಫ್ಟಿ ಹೆಚ್ಚಳದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್​ ಕೊಡುಗೆ 37% ರಷ್ಟಿದೆ.

    ವಾಲ್ಟ್ ಡಿಸ್ನಿಯ ಭಾರತ ಘಟಕವು ಮುಖೇಶ್ ಅಂಬಾನಿಯವರ ಮಾಧ್ಯಮ ವ್ಯವಹಾರದೊಂದಿಗೆ ವಿಲೀನಗೊಳ್ಳಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಮೌಲ್ಯಮಾಪನದಲ್ಲಿ ದೊಡ್ಡ ಸವೆತವನ್ನು ಎದುರಿಸುತ್ತಿದೆ ಎಂದು ಬ್ಲೂಮ್‌ಬರ್ಗ್ ವರದಿಯ ನಂತರ ರಿಲಯನ್ಸ್ ಷೇರುಗಳಲ್ಲಿ ಏರಿಕೆ ಕಂಡುಬಂದಿದೆ. ಈ ಒಪ್ಪಂದವು ಅಂತಿಮಗೊಂಡರೆ, ರಿಲಯನ್ಸ್ ಈ ಸಂಸ್ಥೆಯಲ್ಲಿ 51 ಪ್ರತಿಶತವ ಪಾಲು ಹೊಂದುತ್ತದೆ. ಕಂಪನಿಗಳ ನಡುವಿನ ಮಾತುಕತೆಗಳ ನಂತರ ಡಿಸ್ನಿಯ ಭಾರತದ ಆಸ್ತಿಯು ಈಗ 4.5 ಶತಕೋಟಿ ಡಾಲರ್​ ಮೌಲ್ಯದ್ದಾಗಿದೆ; ಬ್ಲೂಮ್‌ಬರ್ಗ್ ಪ್ರಕಾರ ಇದು ಹಿಂದೆ 10 ಶತಕೋಟಿ ಡಾಲರ್​ ಆಗಿತ್ತು.

    ರಿಲಯನ್ಸ್ ಇಂಡಸ್ಟ್ರೀಸ್​ ಸಂಸ್ಥೆಯು ಮೂರನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ ಶೇಕಡಾ 11 ರಷ್ಟು ಏರಿಕೆಯನ್ನು ದಾಖಲಿಸಿ 19,641 ಕೋಟಿ ರೂಪಾಯಿಗಳಿಗೆ ತಲುಪಿದೆ. ಇದರ ಒಟ್ಟು ಆದಾಯವು ವರ್ಷಕ್ಕೆ 3.2 ರಷ್ಟು ಏರಿಕೆಯಾಗಿ 2,48,160 ರೂಪಾಯಿ ಮುಟ್ಟಿದೆ.

    2022 ರಲ್ಲಿ, ಈ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಂಬಾನಿ ಅವರು, 2027 ರ ಅಂತ್ಯದ ವೇಳೆಗೆ ರಿಲಯನ್ಸ್ ಮಾರುಕಟ್ಟೆ ಮೌಲ್ಯವು ದ್ವಿಗುಣಗೊಳ್ಳಲಿದೆ ಎಂದು ಷೇರುದಾರರಿಗೆ ತಿಳಿಸಿದ್ದರು. ವಿಶ್ಲೇಷಕರ ಪ್ರಕಾರ, 2024ನೇ ವರ್ಷವು ರಿಲಯನ್ಸ್ ಷೇರುಗಳಿಗೆ ಉತ್ತಮ ವರ್ಷ ಎಂದು ನಿರೀಕ್ಷಿಸಲಾಗಿದೆ.

    ಜೆಫರೀಸ್ ದಲ್ಲಾಳಿ ಸಂಸ್ಥೆಯು ಈ ಷೇರುಗಳ ಟಾರ್ಗೆಟ್​ ಬೆಲೆಯನ್ನು 3,140 ರೂ. ಹಾಗೂ ನೋಮುರಾ ದಲ್ಲಾಳಿ ಸಂಸ್ಥೆಯು 3,165 ರೂ. ಎಂದು ನಿಗದಿಪಡಿಸಿದೆ.

    ಷೇರು ಪೇಟೆಯಲ್ಲಿ ಆರ್ಭಟಿಸಿದ ಗೂಳಿ: ಒಂದೇ ದಿನದಲ್ಲಿ ಹೂಡಿಕೆದಾರರ ಸಂಪತ್ತು ರೂ. 6 ಲಕ್ಷ ಕೋಟಿ ಹೆಚ್ಚಳ

    ಶೇಕಡಾ 51ರಷ್ಟು ಹೆಚ್ಚಳವಾಗಲಿದೆ ಎಂದು ಅಮೆರಿಕದ ದಲ್ಲಾಳಿ ಸಂಸ್ಥೆ ಹೇಳಿದ್ದೇ ತಡ… ಅದಾನಿ ಸಮೂಹದ ಈ ಷೇರಿಗೆ ಭಾರಿ ಬೇಡಿಕೆ, ಒಂದೇ ದಿನದಲ್ಲಿ 5.91% ಹೆಚ್ಚಳ

    3:5 ಬೋನಸ್ ಷೇರುಗಳು.1:10 ಷೇರು ವಿಭಜನೆ: ಹೂಡಿಕೆದಾರರಿಗೆ 438% ಲಾಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts