More

    ಕೆರಿಬಿಯನ್​​ ಟಿ20 ಲೀಗ್​ನಲ್ಲಿ ಮಿಂಚಿದ ಹೆಟ್ಮೆಯರ್​, ಕೀಮೊ ಪೌಲ್​

    ಟರೌಬ (ಟ್ರಿನಿಡಾಡ್​): ಯುವ ವೇಗಿ ಕೀಮೊ ಪೌಲ್​ (19ಕ್ಕೆ 4) ಬಿಗಿ ಬೌಲಿಂಗ್​ ನಿರ್ವಹಣೆ ಮತ್ತು ಸ್ಫೋಟಕ ಬ್ಯಾಟ್ಸ್​ಮನ್​ ಶಿಮ್ರೋನ್​ ಹೆಟ್ಮೆಯರ್​ (71 ರನ್​, 44 ಎಸೆತ, 8 ಬೌಂಡರಿ, 3 ಸಿಕ್ಸರ್​) ಬಿರುಸಿನ ಬ್ಯಾಟಿಂಗ್​ ನೆರವಿನಿಂದ ಗಯಾನಾ ಅಮೆಜಾನ್​ ವಾರಿಯರ್ಸ್​ ತಂಡ ಕೆರಿಬಿಯನ್​ ಪ್ರೀಮಿಯರ್​ ಲೀಗ್ (ಸಿಪಿಎಲ್​)​ ಟಿ20 ಟೂರ್ನಿಯಲ್ಲಿ ಸೇಂಟ್​ ಕಿಟ್ಸ್​ ಆಂಡ್​ ನೆವಿಸ್​ ಪ್ಯಾಟ್ರಿಯಾಟ್ಸ್​ ತಂಡದ ವಿರುದ್ಧ 3 ವಿಕೆಟ್​ಗಳಿಂದ ರೋಚಕ ಗೆಲುವು ದಾಖಲಿಸಿದೆ.

    ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಸೇಂಟ್​ ಕಿಟ್ಸ್ ತಂಡ 8 ವಿಕೆಟ್​ಗೆ 127 ರನ್​ ಕೂಡಿಹಾಕಲಷ್ಟೇ ಶಕ್ತವಾಯಿತು. ಕಿಮೋ ಪೌಲ್​ಗೆ ಸ್ಪಿನ್ನರ್​ ಇಮ್ರಾನ್​ ತಾಹಿರ್​ (18ಕ್ಕೆ 2) ಕೂಡ ಸಮರ್ಥ ಸಾಥ್​ ನೀಡಿ ಸೇಂಟ್​ ಕಿಟ್ಸ್​ ತಂಡಕ್ಕೆ ಕಡಿವಾಣ ಹಾಕಲು ನೆರವಾದರು. ಪ್ರತಿಯಾಗಿ ಗಯಾನಾ ತಂಡ ಹೆಟ್ಮೆಯರ್​ ಅವರ ಏಕಾಂಗಿ ಸಾಹಸದಿಂದ 17 ಓವರ್​ಗಳಲ್ಲಿ 7 ವಿಕೆಟ್​ಗೆ 131 ರನ್​ ಗಳಿಸಿ ಟೂರ್ನಿಯ ಮೊದಲ ಗೆಲುವು ದಾಖಲಿಸಿತು. ಗಯಾನಾ ಟೂರ್ನಿಯ ಮೊದಲ ಪಂದ್ಯದಲ್ಲಿ ಟ್ರಿನಿಬಾಗೋ ನೈಟ್​ರೈಡರ್ಸ್​ ವಿರುದ್ಧ ಸೋಲು ಕಂಡಿತ್ತು. ಹೆಟ್ಮೆಯರ್​ ಸತತ 2ನೇ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಸಾಧನೆ ಮಾಡಿದರು. ಅವರು ಈ ಬಾರಿ ಕೇವಲ 31 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು.

    ಸೇಂಟ್​ ಕಿಟ್ಸ್​ ಆಂಡ್​ ನೆವಿಸ್​ ಪ್ಯಾಟ್ರಿಯಾಟ್ಸ್: 8 ವಿಕೆಟ್​ಗೆ 127 (ಕ್ರಿಸ್​ ಲ್ಯಾನ್​ 16, ಲೆವಿಸ್​ 30, ರಾಮ್​ದಿನ್​ 9, ಡಂಕ್​ 29, ಎಮ್ರಿಟ್​ 17, ಸೋಧಿ 4*, ಕೀಮೊ ಪೌಲ್​ 19ಕ್ಕೆ 4, ತಾಹಿರ್​ 18ಕ್ಕೆ 2), ಗಯಾನಾ ಅಮೆಜಾನ್​ ವಾರಿಯರ್ಸ್​: 17 ಓವರ್​ಗಳಲ್ಲಿ 7 ವಿಕೆಟ್​ಗೆ 131 (ಕಿಂಗ್​ 10, ಹೇಮರಾಜ್​ 19, ಹೆಟ್ಮೆಯರ್​ 71, ರಾಸ್​ ಟೇಲರ್​ 9, ಪೂರನ್​ 0, ರುದರ್​ಫೋರ್ಡ್​ 10, ಕೀಮೊ ಪೌಲ್​ 0, ಎಮ್ರಿಟ್​ 31ಕ್ಕೆ 3, ಕಾಟ್ರೆಲ್​ 24ಕ್ಕೆ 1, ಡ್ರೇಕ್ಸ್​ 28ಕ್ಕೆ 1). ಪಂದ್ಯಶ್ರೇಷ್ಠ: ಕೀಮೊ ಪೌಲ್​.

    ಇದನ್ನೂ ಓದಿ: ಧೋನಿ ನಿವೃತ್ತಿಗೆ ಕರೊನಾ ಕೂಡ ಕಾರಣ ಎಂದ ಚಾಹಲ್​!

    ದಿನದ ಮೊದಲ ಪಂದ್ಯದಲ್ಲಿ ಜಮೈಕಾ ತಲ್ಲವಾಹ್ಸ್​ ತಂಡ ಸೇಂಟ್​ ಲೂಸಿಯಾ ಜೌಕ್ಸ್​ ವಿರುದ್ಧ 5 ವಿಕೆಟ್​ಗಳಿಂದ ಗೆಲುವು ದಾಖಲಿಸಿತು. ಉಭಯ ತಂಡಗಳಿಗೂ ಇದು ಟೂರ್ನಿಯ ಮೊದಲ ಪಂದ್ಯವಾಗಿತ್ತು. ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಸೇಂಟ್​ ಲೂಸಿಯಾ ತಂಡ 7 ವಿಕೆಟ್​ಗೆ 158 ರನ್​ ಕೂಡಿಹಾಕಿತು. ಪ್ರತಿಯಾಗಿ ಜಮೈಕಾ ತಲ್ಲವಾಹ್ಸ್​ ತಂಡ 18.5 ಓವರ್​ಗಳಲ್ಲಿ 5 ವಿಕೆಟ್​ಗೆ 160 ರನ್​ ಗಳಿಸಿ ಗೆಲುವು ದಾಖಲಿಸಿತು.

    ಸೇಂಟ್​ ಲೂಸಿಯಾ ಜೌಕ್ಸ್​: 7 ವಿಕೆಟ್​ಗೆ 158 (ಕಾರ್ನ್​ವಾಲ್​ 9, ಫ್ಲೆಚರ್​ 22, ಡೆಯಲ್​ 17, ರೋಸ್ಟನ್​ ಚೇಸ್​ 52, ಜದ್ರಾನ್​ 25, ನಬಿ 13, ಸ್ಯಾಮ್ಮಿ 4, ಪೆರುಮಾಳ್​ 34ಕ್ಕೆ 2, ಮುಜೀಬ್​ 25ಕ್ಕೆ 2, ರಸೆಲ್​ 32ಕ್ಕೆ 1, ಲಮಿಚನೆ 23ಕ್ಕೆ 1), ಜಮೈಕಾ ತಲ್ಲವಾಹ್ಸ್​: 18.5 ಓವರ್​ಗಳಲ್ಲಿ 5 ವಿಕೆಟ್​ಗೆ 160 (ಫಿಲಿಪ್ಸ್​ 44, ಪೊವೆಲ್​ 26, ಆಸಿಫ್​ ಅಲಿ 47, ರಸೆಲ್​ 16, ಬ್ರಾಥ್​ವೇಟ್​ 18*, ಕೆಸ್ರಿಕ್​ ವಿಲಿಯಮ್ಸ್​ 32ಕ್ಕೆ 2, ಕಗೆಲಿನ್​ 42ಕ್ಕೆ 1). ಪಂದ್ಯಶ್ರೇಷ್ಠ: ಆಸಿಫ್​ ಅಲಿ.

    ಗುರುವಾರ ಪಂದ್ಯಗಳು:
    ಬಾರ್ಬಡೋಸ್​ ಟ್ರೈಡೆಂಟ್ಸ್​-ಸೇಂಟ್​ ಲೂಸಿಯಾ ಜೌಕ್ಸ್​
    ಆರಂಭ: ರಾತ್ರಿ 7.30
    ಟ್ರಿನಿಬಾಗೋ ನೈಟ್​ರೈಡರ್ಸ್​-ಜಮೈಕಾ ತಲ್ಲವಾಹ್ಸ್​
    ಆರಂಭ: ಶುಕ್ರವಾರ ಮುಂಜಾನೆ 3.00 (ಭಾರತೀಯ ಕಾಲಮಾನ)
    ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​

    ಲಾಕ್​ಡೌನ್​ನಲ್ಲಿ ಕ್ರಿಕೆಟ್​ ಆಡುವುದೇ ಮರೆತುಹೋಗುತ್ತೆ ಎಂದು ಹೆದರಿದ್ದ ಕೆಎಲ್​ ರಾಹುಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts