More

    ಉಗ್ರ ಸಂಘಟನೆಗೆ ಸೇರಿಸಲು ಕಾಶ್ಮೀರದ ಯುವಕರಿಗೆ ಸ್ಕಾಲರ್​ಷಿಪ್​ ಆಮಿಷ ಒಡ್ಡಿದೆ ಪಾಕ್​!

    ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಯುವಕರು ಭಾರತದತ್ತ ಒಲವು ತೋರಿಸಲು ಶುರು ಮಾಡಿರುವುದು ಪಾಕಿಸ್ತಾನಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿಬಿಟ್ಟಿದೆ. ಇನ್ನೆಲ್ಲಿ ಈ ಯುವಕರು ತಮ್ಮ ಕೈಬಿಟ್ಟು ಹೋಗುತ್ತಾರೆಯೋ ಎನ್ನುವ ಭೀತಿ ಕಾಡುತ್ತಿದೆ.

    ಇದೇ ಕಾರಣಕ್ಕೆ ಯುವ ಸಮುದಾಯವನ್ನು ಸೆಳೆಯಲು ಇನ್ನಿಲ್ಲದ ಕುತಂತ್ರ ಬುದ್ಧಿಯನ್ನು ಪಾಕ್​ ತೋರಿಸುತ್ತಿದೆ. ಇದೀಗ ಪಾಕಿಸ್ತಾನದಲ್ಲಿ ಓದಲು ಕಾಶ್ಮೀರಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಘೋಷಣೆ ಮಾಡಿದ್ದಾರೆ.

    ಈ ವರ್ಷದ ಆರಂಭದಲ್ಲಿಯೇ ಇಂಥದ್ದೊಂದು ಯೋಜನೆಯನ್ನು ಪಾಕಿಸ್ತಾನ ಸರ್ಕಾರ ತಂದಿದ್ದು, ಅದನ್ನೀಗ ಪುನಃ ಪ್ರಸ್ತಾಪಿಸಿದೆ.

    ಇದನ್ನೂ ಓದಿ: ಭಾರತದ ಆರ್ಥಿಕತೆ ಸದೃಢ ಮಾಡಲು ಧನಸಹಾಯ ಮಾಡ್ತಾರಂತೆ ಪಾಕ್​ ಪ್ರಧಾನಿ!

    1600 ಕಾಶ್ಮೀರಿ ಯುವಕರಿಗೆ ವೇತನ ನೀಡುವುದಾಗಿ ಅದು ಹೇಳಿದೆ. ಒಂದೆಡೆ ಕಾಶ್ಮೀರಿ ಯುವಕರನ್ನು ತನ್ನತ್ತ ಸೆಳೆದುಕೊಂಡು ಅವರನ್ನು ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ಪಾಕಿಸ್ತಾನ, ಇದೀಗ, ಶಿಕ್ಷಣದ ಆಮಿಷ ಒಡ್ಡುತ್ತಿರುವುದು ಭಾರತದ ಆಕ್ರೋಶಕ್ಕೆ ಕಾರಣವಾಗಿದೆ.

    “ಕಾಶ್ಮೀರದ ಯುವಕರನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಪಾಕಿಸ್ತಾನ ಆಡುತ್ತಿರುವ ನಾಟಕವಿದು. ಸ್ಕಾಲರ್‌ಷಿಪ್‌ ಹೆಸರಿನಲ್ಲಿ ಇದಾಗಲೇ ಅನೇಕ ಯುವಕರನ್ನು ತನ್ನ ಗಡಿಯೊಳಗೆ ನುಸುಳುವಂತೆ ಮಾಡಿರುವ ಪಾಕ್​ ನಂತರ ಉಗ್ರ ಸಂಘಟನೆಗಳಿಗೆ ಅವರನ್ನು ಸೇರಿಸುತ್ತಾ ಬಂದಿದೆ. ಇದಾಗಲೇ ಅನೇಕ ಯುವಕರು ವಾಘಾ- ಅಟ್ಟಾರಿ ಗಡಿ ಮೂಲಕ ಹೋಗಿ, ಉಗ್ರವಾದಿಗಳಾಗಿ ಎಲ್‌ಒಸಿ ಮೂಲಕ ಮರಳಿ ಬಂದಿದ್ದಾರೆ. ಇದು ದೊಡ್ಡ ಆಘಾತಕಾರಿ ವಿಷಯ ಎಂದು ಜಮ್ಮು ಮತ್ತು ಕಾಶ್ಮೀರದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಇದನ್ನೂ ಓದಿ: ಗಾಂಧಿ ಆಯ್ತು, ಈಗ ಕೊಲಂಬಸ್​ ಪ್ರತಿಮೆಯ ಶಿರಚ್ಛೇದನ ಮಾಡಿದ ಕಿಡಿಗೇಡಿಗಳು

    ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಈ ಕುರಿತು ಆತಂಕ ವ್ಯಕ್ತಪಡಿಸಿದ್ದು, ವಿದ್ಯಾರ್ಥಿ ವೀಸಾದಡಿ ಪಾಕಿಸ್ತಾನಕ್ಕೆ ವ್ಯಾಸಂಗಕ್ಕೆಂದು ಹೋಗುವ ಹೆಚ್ಚಿನವರು ಮಾಜಿ ಉಗ್ರರ ಸಂಬಂಧಿಕರಾಗಿರುತ್ತಾರೆ. ಇಲ್ಲವೇ ದೇಶವಿರೋಧಿ ಚಟುವಟಿಕೆ ನಡೆಸಿ, ಪಾಕಿಸ್ತಾನಕ್ಕೆ ಹೋದವರ ಬಂಧುಗಳಾಗಿರುತ್ತಾರೆ’ ಎಂದಿದೆ. (ಏಜೆನ್ಸೀಸ್​)


    ಸೆರೆ ಸಿಕ್ಕ ಪಾಕ್​ ಉಗ್ರರು: ಭಯಾನಕ ಜಾಲ ಭೇದಿಸಿದ ಭಾರತೀಯ ಯೋಧರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts