More

    ಭಾರತದ ಆರ್ಥಿಕತೆ ಸದೃಢ ಮಾಡಲು ಧನಸಹಾಯ ಮಾಡ್ತಾರಂತೆ ಪಾಕ್​ ಪ್ರಧಾನಿ!

    ಕರಾಚಿ: ಕರೊನಾ ಮಹಾಮಾರಿಯನ್ನು ನಿಯಂತ್ರಿಸಲು ಆಗದೇ, ತನ್ನ ದೇಶದಲ್ಲಿ ಕುಸಿಯುತ್ತಿರುವ ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸಲು ಕಂಡಕಂಡವರ ಬಳಿ ಹಣಕ್ಕಾಗಿ ಅಂಗಲಾಚುತ್ತಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​, ಇದೀಗ ತಾವು ಭಾರತಕ್ಕೆ ಸಹಾಯ ಮಾಡುವುದಾಗಿ ಟ್ವೀಟ್​ ಮಾಡಿದ್ದಾರೆ!

    ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಮೇ 12 ರಂದು ಪ್ರಕಟಿಸಿರುವ ವರದಿಯನ್ನು ಈಗ ಉಲ್ಲೇಖಿಸಿರುವ ಇಮ್ರಾನ್​ ಖಾನ್​, ಶೇ,84ರಷ್ಟು ಭಾರತೀಯ ಕುಟುಂದವರ ಮಾಸಿಕ ಆದಾಯ ಲಾಕ್​ಡೌನ್​ನಿಂದ ಇಳಿಕೆಯಾಗುತ್ತಿದೆ. ಶೇ.34ರಷ್ಟು ಕುಟುಂಬಗಳ ನಗದು ಸಹಾಯವಿಲ್ಲದೆ ಒಂದು ವಾರ ಬದುಕುಳಿಯುವುದಿಲ್ಲ. ಇಂಥ ಸಂದರ್ಭದಲ್ಲಿ ಭಾರತೀಯ ಆರ್ಥಿಕತೆಗೆ ಉತ್ತೇಜನ ನೀಡಲು ತಾವು ಹಣಕಾಸಿನ ನೆರವು ನೀಡುವುದಾಗಿ ಹೇಳಿದ್ದಾರೆ. (ಪ್ರಧಾನಿ ನರೇಂದ್ರ ಮೋದಿ ಅವರು, 20 ಲಕ್ಷ ಕೋಟಿ ರೂಪಾಯಿಗಳ ‘ಆತ್ಮನಿರ್ಭಾರ ಭಾರತ್’ ಪ್ಯಾಕೇಜ್ ಘೋಷಿಸುವ ಒಂದು ದಿನ ಮೊದಲು ಸಿಎಂಐಇ ಈ ವರದಿ ಪ್ರಕಟಿಸಿತ್ತು ಎನ್ನುವುದು ಉಲ್ಲೇಖಾರ್ಹ!)

    ಇದನ್ನೂ ಓದಿ: ಪಾಕಿಸ್ತಾನ್​ ಜಿಂದಾಬಾದ್’​ ಎಂದ ಅಮೂಲ್ಯಾಗೆ ಜಾಮೀನು ನಿರಾಕರಿಸಿದ ಕೋರ್ಟ್​ ಹೇಳಿದ್ದೇನು?

    ಪಾಕಿಸ್ತಾನದಲ್ಲಿ ಜಾರಿ ಮಾಡಲಾಗಿರುವ ನೇರ ನಗದು ವರ್ಗಾವಣೆ ಕಾರ್ಯಕ್ರಮವನ್ನು ಶ್ಲಾಘಿಸಿಕೊಂಡಿರುವ ಪ್ರಧಾನಿ, ಇದೇ ಯೋಜನೆ ಅಡಿ ತಾವು ಭಾರತಕ್ಕೆ ಸಹಾಯ ಮಾಡುವುದಾಗಿ ಹೇಳಿದ್ದಾರೆ.

    ಪಾಕಿಸ್ತಾನದ ಸೇನಾ ಜನರಲ್​ ಸರ್ಕಾರದ ಮೇಲೆ ಹಿಡಿದ ಸಾಧಿಸಲು ತಯಾರಿ ನಡೆಸಿರುವ ಕಾರಣದಿಂದ ಖುರ್ಚಿಯನ್ನು ಭದ್ರಪಡಿಸಿಕೊಳ್ಳಲು ಒದ್ದಾಡುತ್ತಿರುವ ಇಮ್ರಾನ್​ ಖಾನ್​, ಕರೊನಾ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂದು ಭಾರತಕ್ಕೆ ಸಲಹೆ ಕೊಡುತ್ತಿದ್ದು, ಇದೀಗ ಭಾರಿ ಅಪಹಾಸ್ಯಕ್ಕೆ ಒಳಗಾಗಿದ್ದಾರೆ.

    ಕೋವಿಡ್​-19 ಬಿಕ್ಕಟ್ಟನ್ನು ಎದುರಿಸಲು ಭಾರತವು ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) ಹಣ ಕೋರಿಲ್ಲ. ಬದಲಿಗೆ ಇಮ್ರಾನ್​ ಖಾನ್​ ಸಾಲದ ಮೊರೆ ಹೋಗಿದ್ದಾರೆ. ಕರೊನಾ ವೈರಸ್​ ನಿಯಂತ್ರಿಸಲು ಸಾಧ್ಯವಾಗಲೇ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನಕ್ಕಾಗಿ ಐಎಂಎಫ್​ ಮೊರೆ ಹೋಗುವ ಮೂಲಕ ಹಣಕ್ಕಾಗಿ ಅಂಗಲಾಚಿರುವ ಅವರು, ಈಗ ನೇರ ಹಣ ವರ್ಗಾವಣೆಯನ್ನು ಭಾರತಕ್ಕೆ ಮಾಡುವುದಾಗಿ ಆಶ್ವಾಸನೆ ಕೊಟ್ಟಿದ್ದಾರೆ!

    ಇದನ್ನೂ ಓದಿ: ಸೆರೆ ಸಿಕ್ಕ ಪಾಕ್​ ಉಗ್ರರು: ಭಯಾನಕ ಜಾಲ ಭೇದಿಸಿದ ಭಾರತೀಯ ಯೋಧರು

    ಇದಾಗಲೇ  ರ್ಯಾಪಿಡ್​ ಫೈನಾನ್ಸಿಂಗ್ ಇನ್ಸ್ಟ್ರುಮೆಂಟ್ ಅಡಿಯಲ್ಲಿ ಪಾಕಿಸ್ತಾನಕ್ಕೆ 38 1.386 ಬಿಲಿಯನ್ ಡಾಲರ್​ ಹಣವನ್ನು ನೀಡಲು ಕಳೆದ ಏಪ್ರಿಲ್​ನಲ್ಲಿ ಐಎಂಎಫ್ ಅನುಮೋದನೆ ನೀಡಿದೆ. ಸಾಲದು ಎಂಬುದಕ್ಕೆ, ವಿಶ್ವ ಬ್ಯಾಂಕ್ ನೀಡಿರುವ ವರದಿಯ ಪ್ರಕಾರ, ಈ ಹಣಕಾಸು ವರ್ಷದಲ್ಲಿ ಪಾಕಿಸ್ತಾನದ ಆರ್ಥಿಕತೆಯು ರೆಡ್​ ಝೋನ್​ಗೆ ಹೋಗುವ ಸಾಧ್ಯತೆಯಿದೆ, ಮುಂದಿನ ವರ್ಷವೂ ಇದು ಚೇತರಿಕೆಯಾಗುವ ಯಾವುದೇ ಲಕ್ಷಣಗಳು ಇಲ್ಲ. (ಏಜೆನ್ಸೀಸ್​)

    ಹೆಣ್ಣುಮಗುವೆಂದು ಆರು ಭ್ರೂಣ ಕೊಂದ ಅಪ್ಪ! ಏಳನೇ ಗರ್ಭದಲ್ಲಿ ನಡೆಯಿತೊಂದು ಪವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts