More

    ಸೆರೆ ಸಿಕ್ಕ ಪಾಕ್​ ಉಗ್ರರು: ಭಯಾನಕ ಜಾಲ ಭೇದಿಸಿದ ಭಾರತೀಯ ಯೋಧರು

    ಜಮ್ಮು: ಪಾಕಿಸ್ತಾನ ಪ್ರಾಯೋಜಿಸಿದ ಬೃಹತ್ ಮಾದಕವಸ್ತು- ಭಯೋತ್ಪಾದಕ ಘಟಕವನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗುರುವಾರ (ಜೂನ್ 11) ಭೇದಿಸಿದ್ದಾರೆ. ಕುಪ್ವಾರಾ ಜಿಲ್ಲೆಯ ಹಂದ್ವಾರ ಪಟ್ಟಣದಲ್ಲಿ ಮೂವರು ಲಷ್ಕರ್-ಎ-ತಯಬಾದ ಸಹಚರರನ್ನು ಬಂಧಿಸಿರುವ ಭಾರತೀಯ ಯೋಧರು, ಅವರಿಂದ 21 ಕೆಜಿ ಹೆರಾಯಿನ್ ಮತ್ತು 1.34 ಕೋಟಿ ರೂಪಾಯಿಗಳ ಭಾರತೀಯ ಕರೆನ್ಸಿಯನ್ನು ವಶಪಡಿಸಿಕೊಂಡಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದಲ್ಲಿ ಲಷ್ಕರ್ ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳಿಗೆ ಹಣ ಒದಗಿಸಲು ಈ ಗುಂಪು ಮಾದಕವಸ್ತು ಕಳ್ಳಸಾಗಣೆ ಮಾಡುತ್ತಿರುವ ಬಗ್ಗೆ ಖಚಿತ ಸುಳಿವು ಸಿಕ್ಕ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಗಿತ್ತು.

    ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್‌ನಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸಲು ಮಾದಕ ವಸ್ತುಗಳನ್ನು ಮಾರಾಟ ಮಾಡುವ ಜಾಲ ಇದಾಗಿದೆ. ಗಡಿ ನಿಯಂತ್ರಣ ರೇಖೆಯಿಂದ ಇವುಗಳನ್ನು ಸಂಗ್ರಹಿಸಲಾಗಿದೆ ಎಂದು ಹಂದ್ವಾರ ಪೊಲೀಸ್ ವರಿಷ್ಠಾಧಿಕಾರಿ ಡಾ.ಜಿ.ವಿ.ಸಂದೀಪ್ ಚಕ್ರವರ್ತಿ ಹೇಳಿದ್ದಾರೆ. ಹೆಚ್ಚಿನ ಮಾದಕ ವಸ್ತುಗಳು ಪಂಜಾಬ್​ಗೆ ರವಾನೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

    ಇದನ್ನೂ ಓದಿ: ಡ್ಯಾಂಗಳಲ್ಲಿ ನೀರಿಗಿಳಿಯೋ ಮುನ್ನ ಈ ವಿಡಿಯೋ ನೋಡಿ: ಈಜುತ್ತಿದ್ದವನನ್ನು ಎಳೆದೊಯ್ದ ಮೊಸಳೆ, ಬದುಕಿದ್ದೆ ಅಚ್ಚರಿ!

    “ಬಂಧಿತರಾದ ಮೂವರು, ಜಮ್ಮು ಮತ್ತು ಕಾಶ್ಮೀರದ ಲಷ್ಕರ್-ಎ-ತಯಬಾದ ಭಯೋತ್ಪಾದಕರಿಗೆ ಆರ್ಥಿಕವಾಗಿ ಸಹಾಯ ಮಾಡಲು ಮಾದಕ ವಸ್ತುಗಳನ್ನು ಮಾರಾಟ ಇದು ಬಹಳ ದೊಡ್ಡ ಹವಾಲಾ ದಂಧೆಯಾಗಿದೆ. ಭಾರತೀಯ ನೋಟುಗಳನ್ನು ಕಳ್ಳ ವ್ಯವಹಾರದ ಮೂಲಕ ಪಡೆದು ಈ ಜಾಲವನ್ನು ಇನ್ನಷ್ಟು ವಿಸ್ತರಿಸುವಲ್ಲಿ ಈ ಗುಂಪು ಕಾರ್ಯನಿರತವಾಗಿದೆ ಎಂದು ಮಾಹಿತಿಯನ್ನು ಚಕ್ರವರ್ತಿ ನೀಡಿದ್ದಾರೆ.

    ಮುಖ್ಯ ಆರೋಪಿ ಇಫ್ತಿಖರ್ ಇಂದ್ರಬಿ ಎಂದು ಗುರುತಿಸಲ್ಪಟ್ಟಿದ್ದು, ಕುಖ್ಯಾತ ಮಾದಕವಸ್ತು ಕಳ್ಳಸಾಗಣೆದಾರನೀತ. , ಆತನ ವಿರುದ್ಧ ಹಲವಾರು ಎಫ್‌ಐಆರ್ ದಾಖಲಿಸಲಾಗಿದೆ. ಇದರ ಜತೆಗೆ, ಮೊಮಿನ್ ಪೀರ್ ಮತ್ತು ಇಕ್ಬಾಲ್-ಉಲ್-ಇಸ್ಲಾಂನನ್ನು ಬಂಧಿಸಲಾಗಿದೆ.

    ಇದನ್ನೂ ಓದಿ: ಹೆಣ್ಣುಮಗುವೆಂದು ಆರು ಭ್ರೂಣ ಕೊಂದ ಅಪ್ಪ! ಏಳನೇ ಗರ್ಭದಲ್ಲಿ ನಡೆಯಿತೊಂದು ಪವಾಡ

    ಬಂಧಿತ ಭಯೋತ್ಪಾದಕ ಸಹಚರರನ್ನು ವಿಚಾರಣೆ ನಡೆಸಿದ ನಂತರ ಪೊಲೀಸರು ಕಾಶ್ಮೀರದಾದ್ಯಂತ ದಾಳಿ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

    ಆಡ್ತಾ ಆಡ್ತಾ ಗಿನ್ನೆಸ್​ ದಾಖಲೆ ಬರೆದ 90ರ ಅಜ್ಜಿ: ಈಕೆ ಆಡಿದ್ದಾದರೂ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts