More

    ಕಲಿಕೆ ಸರಿದೂಗಿಸಲು 111 ಅತಿಥಿ ಶಿಕ್ಷಕರ ನೇಮಕ

    ಲಕ್ಷ್ಮೇಶ್ವರ: ಶಿಕ್ಷಕ ವೃತ್ತಿಗೆ ಸಮಾಜದಲ್ಲಿ ಸದಾ ಗೌರವವಿದೆ. ಶಾಲೆಯಲ್ಲಿ ಶಿಕ್ಷಕ ಕ್ರಿಯಾಶೀಲನಾಗಿರಬೇಕು, ಶಾಲೆಯ ಕೋಣೆಯಲ್ಲಿ ಶಿಕ್ಷಕರು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಅತಿಥಿ ಶಿಕ್ಷಕರ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದು ಶಿರಹಟ್ಟಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ಮುಂದಿನಮನಿ ಹೇಳಿದರು.

    ತಾಲ್ಲೂಕಿನ ಛಬ್ಬಿ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕ, ಶಿಕ್ಷಕಿಯರ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

    ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಈ ಕೊರತೆ ನೀಗಿಸಲು 111 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ನೇಮಕವಾಗಿರುವ ಅತಿಥಿ ಶಿಕ್ಷಕರು. ಒಸಿಎಚ್. ಡಿ.ಇಡಿ, ಬಿ.ಇಡಿ ತರಬೇತಿ ಪಡೆದಿದ್ದು, ಬಹಳ ವರ್ಷಗಳಿಂದ ಬೋಧನೆ, ತರಗತಿಗಳಿಂದ ದೂರ ಇರುತ್ತಾರೆ. ಸದರಿ ಶಿಕ್ಷಕರಿಗಾಗಿಯೇ ಈ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ. 1ರಿಂದ 3ನೇ ತರಗತಿ ನಲಿಕಲಿ ವಿಭಾಗಕ್ಕೂ ಹಾಗೂ 4 ರಿಂದ 7, 8 ಮತ್ತು 8ರಿಂದ 10ನೇ ತರಗತಿಗೆ ಬೋಧಿಸುವ ಶಿಕ್ಷಕ, ಶಿಕ್ಷಕಿಯರನ್ನು ತಂಡಗಳಾಗಿ ರಚಿಸಿ ವಿಷಯವಾರು ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು. ಎರಡು ವರ್ಷಗಳಲ್ಲಿ ಶಾಲಾ ಪ್ರಕ್ರಿಯೆ ಕ್ರಮವಾಗಿ ನಡೆಯದ ಕಾರಣ ಮಕ್ಕಳಲ್ಲಿ ಕಲಿಕೆಯಲ್ಲಿ ಉಂಟಾಗಿರುವ ಹಿನ್ನಡೆ ಸರಿದೂಗಿಸಲಾಗುವುದು ಎಂದರು.

    ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬಿಆರ್‌ಪಿಗಳಾದ ಐ.ಎಸ್. ಮೆಡ್ಲೇರಿ, ಎಂ. ಎನ್. ಭರಮಗೌಡರ, ಬಿ.ಎಂ. ಯರಗುಪ್ಪಿ, ವಿ.ಎಚ್. ದೀಪಾಳಿ ಮತ್ತು ಸಿಆರ್‌ಪಿಗಳಾದ ಆರ್. ಮಹಾಂತೇಶ, ಎನ್. ಎನ್. ಸಾವಿರಕುರಿ, ಗೀತಾ ಸರ್ವಿ, ಕೆ.ಪಿ ಕಂಬಳಿ, ಗಾಯತ್ರಿ ಹಳ್ಳದ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ವೈ.ಬಿ. ಪಾಟೀಲ, ಮುಖ್ಯೋಪಾಧ್ಯಾಯನಿ ವಿ. ಎ. ನರಗುಂದ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts