More

    ಡಬ್ಬಿ ತಳಿಯ ಒಣಮೆಣಸಿನಕಾಯಿಗೆ ದಾಖಲೆ ದರ

    ಬ್ಯಾಡಗಿ: ಸ್ಥಳೀಯ ಮಾರುಕಟ್ಟೆಯಲ್ಲಿ ಗುರುವಾರದ ಟೆಂಡರ್​ನಲ್ಲಿ ಡಬ್ಬಿ ತಳಿಯ ಮೆಣಸಿನಕಾಯಿ ಕ್ವಿಂಟಾಲ್​ಗೆ 36,999 ರೂಪಾಯಿಗೆ ಮಾರಾಟವಾಗಿ ದರದಲ್ಲಿ ದಾಖಲೆ ಸೃಷ್ಟಿಸಿದೆ.

    ಕರೊನಾ ವೈರಸ್ ಹಾವಳಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಗದ್ದಲ, ಅತಿವೃಷ್ಟಿ ಮುಂತಾದ ಸಮಸ್ಯೆಗಳಿದ್ದರೂ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಯಾವುದೇ ಅಡ್ಡಿ-ಆತಂಕವಿಲ್ಲದೆ ಆವಕ ಏರಿಕೆಯಿಂದ ರೈತರಿಗೆ ಬಂಪರ್ ದರ ಸಿಗುತ್ತಿದೆ. ಅಲ್ಲದೆ, ಕಳೆದ ವಾರ ಮೆಣಸಿನಕಾಯಿಗೆ 35,555 ರೂ. ದರದಲ್ಲಿ ಮಾರಾಟವಾಗಿತ್ತು. ಗುರುವಾರ ಇಲ್ಲಿನ ವಿ.ಎ. ಬಾಗೋಜಿ ದಲಾಲಿ ಅಂಗಡಿಯಲ್ಲಿ ಟೆಂಡರ್​ಗೆ ಇಟ್ಟಿದ್ದ ಅನಂತಪುರ ಜಿಲ್ಲಾ ಅವಲಗಟ್ಟ ಗ್ರಾಮದ ಹನುಮರೆಡ್ಡಿ ಎಂಬ ರೈತರ 28 ಚೀಲ ಸುಮಾರು 9 ಕ್ವಿಂಟಾಲ್​ನ ಮೆಣಸಿನಕಾಯಿ ಒಂದೇ ಲಾಟ್ ಅನ್ನು ಕಿಶೋರ ಆಂಡ್ ಕಂಪನಿಯು ಕ್ವಿಂಟಾಲ್​ಗೆ 36.999 ರೂ. ನಂತೆ ಅತಿ ಹೆಚ್ಚಿನ ದರದಲ್ಲಿ ಖರೀದಿಸಿದ್ದು, ಹಿಂದಿನ ದಾಖಲೆ ಮುರಿದಿದೆ.

    ಇಂದಿನ ದರ: ಕಡ್ಡಿ 1,909ರಿಂದ 32,009 ಸರಾಸರಿ 13,899 ರೂ., ಡಬ್ಬಿ ತಳಿ 3089 ರಿಂದ 36,999 ಸರಾಸರಿ 18,509 ರೂ., ಗುಂಟೂರು 760ರಿಂದ 14,810 ಸರಾಸರಿ 6,229 ರೂ. ದರದಲ್ಲಿ ಮಾರಾಟವಾಗಿವೆ.

    ಒಟ್ಟು 239 ದಲಾಲರ ಅಂಗಡಿಯಲ್ಲಿ 11,606 ಲಾಟ್​ಗಳನ್ನು ಹಾಕಲಾಗಿತ್ತು. ಈ ಪೈಕಿ 245 ಲಾಟ್​ಗಳು ತಿರಸ್ಕೃತವಾಗಿವೆ. 323 ಖರೀದಿದಾರರು ಪಾಲ್ಗೊಂಡಿದ್ದರು. ಗುರುವಾರ ಮಾರುಕಟ್ಟೆಗೆ ಒಟ್ಟು 60,957 ಚೀಲಗಳ ಆವಕವಾಗಿವೆ ಎಂದು ಲೆಕ್ಕಪರಿಶೋಧಕ ಪ್ರಭಣ್ಣ ದೊಡ್ಡಮನಿ ತಿಳಿಸಿದ್ದಾರೆ.

    ಗುಣಮಟ್ಟದ ಒಣಮೆಣಸಿನಕಾಯಿಗೆ ಮಾರುಕಟ್ಟೆಯಲ್ಲಿ ಹೆಚ್ಚು ದರ ಸಿಗಲಿದೆ. ರೈತರು ನೀರು ಸಿಂಪಡಿಸದೆ, ಸ್ವಚ್ಛ ಹಾಗೂ ಒಣಕಾಯಿಗಳನ್ನು ಟೆಂಡರ್​ಗೆ ಹಾಕಿದಲ್ಲಿ ಖರೀದಿದಾರರು ಉತ್ತಮ ದರ ನೀಡುತ್ತಾರೆ. ಗುರುವಾರ ಡಬ್ಬಿ ತಳಿ 36,999 ರೂ. ನಂತೆ ಖರೀದಿಯಾಗಿರುವುದು ರೈತರಿಗೆ ಖುಷಿ ತಂದಿದೆ. ಮಾರುಕಟ್ಟೆಯಲ್ಲಿ ದರ ದಾಖಲೆಯಾಗಿದೆ.
    | ಎಸ್.ಬಿ. ನ್ಯಾಮಗೌಡ್ರ, ಎಪಿಎಂಸಿ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts