More

    ಪ್ರಿಯಾಂಕಾ ಜತೆ ನಟಿಸಬೇಡ ಅಂತ ಗಂಡನಿಗೆ ಹೇಳಿದ್ರಾ ಐಶ್ವರ್ಯ? … ‘ಸ್ಕೈ ಈಸ್ ಪಿಂಕ್’ ಚಿತ್ರದ ಹಿಂದಿನ ರೋಚಕ ಕಹಾನಿ

    ಕಳೆದ ವರ್ಷ ಫರ್ಹಾನ್ ಅಖ್ತರ್ ಮತ್ತು ಪ್ರಿಯಾಂಕಾ ಚೋಪ್ರಾ ಅಭಿನಯದ ‘ಸ್ಕೈ ಈಸ್ ಪಿಂಕ್’ ಎಂಬ ಚಿತ್ರ ಬಿಡುಗಡೆಯಾಗಿದ್ದು ನೆನಪಿದೆ ತಾನೆ? ಚಿತ್ರ ಬಿಡುಗಡೆಯಾದರೂ ಹೆಚ್ಚೇನೂ ಸದ್ದು ಮಾಡಲಿಲ್ಲ. ಈಗ ಆ ಚಿತ್ರದ ಹಿಂದಿನ ರೋಚಕವಾದ ಕಥೆಯೊಂದು ಸದ್ದು ಮಾಡುವ ಮೂಲಕ ಚಿತ್ರ ಮುನ್ನೆಲೆಗೆ ಬಂದಿದೆ.

    ವಿಷಯ ಏನೆಂದರೆ, ‘ಸ್ಕೈ ಈಸ್ ಪಿಂಕ್’ ಚಿತ್ರದಲ್ಲಿ ಮೊದಲು ಅಭಿಷೇಕ್ ಬಚ್ಚನ್ ನಟಿಸಬೇಕಿತ್ತಂತೆ. ಅಭಿ ನೋ ಎಂದ ಮೇಲಷ್ಟೇ, ಫರ್ಹಾನ್ ಅಖ್ತರ್‌ಗೆ ಆರ್ ಹೋಗಿದೆ. ಇಷ್ಟಕ್ಕೂ ಅಭಿಷೇಕ್ ಯಾಕೆ ಈ ಚಿತ್ರದಲ್ಲಿ ನಟಿಸಲಿಲ್ಲ ಗೊತ್ತಾ? ಅದಕ್ಕೆ ಕಾರಣ ಐಶ್ವರ್ಯ ರೈ ಎಂದು ಇದೀಗ ಹೇಳಲಾಗುತ್ತಿದೆ. ಪ್ರಿಯಂಕಾ ಮತ್ತು ಅಭಿಷೇಕ್ ಗೆಳೆತನಕ್ಕೆ ಹೆದರಿ ಐಶ್ವರ್ಯ ತನ್ನ ಗಂಡನನ್ನು ಪ್ರಿಯಾಂಕಾ ಜತೆಗೆ ನಟಿಸುವುದರಿಂದ ದೂರವಿಟ್ಟರಾ ಎಂಬ ಪ್ರಶ್ನೆ ಬರಬಹುದು.

    ಹಾಗೇನಿಲ್ಲ. ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಅಷ್ಟೇನೂ ಮಹತ್ವವಿಲ್ಲ ಎಂಬ ಕಾರಣಕ್ಕೆ ಅಭಿಷೇಕ್ ಚಿತ್ರದಿಂದ ಹೊರಬಂದರು ಎಂದು ಹೇಳಲಾಗುತ್ತಿದೆ. ಆದರೆ, ಸತ್ಯ ಬೇರೆಯದೇ ಇದೆಯಂತೆ. ಏನೆಂದರೆ, ಮೊದಲು ಈ ಚಿತ್ರದಲ್ಲಿ ಅಭಿ ಮತ್ತು ಐಶ್ವರ್ಯ ಜತೆಯಾಗಿ ನಟಿಸಬೇಕಿತ್ತಂತೆ. ಬಹಳ ವರ್ಷಗಳ ನಂತರ ಒಟ್ಟಿಗೆ ನಟಿಸುತ್ತಿರುವ ಬಗ್ಗೆ ಖುಷಿಯಾಗಿ, ಇಬ್ಬರೂ ಗ್ರೀನ್ ಸಿಗ್ನಲ್ ಕೊಟ್ಟಿದ್ದರಂತೆ. ಆದರೆ, ಒಂದು ಹಂತದಲ್ಲಿ ನಾಯಕಿ ಪಾತ್ರವನ್ನು ಐಶ್ವರ್ಯ ರೈ ಮಾಡುವುದಕ್ಕಿಂತ ಪ್ರಿಯಾಂಕಾ ಚೋಪ್ರಾ ಮಾಡಿದರೆ ಚೆನ್ನ ಎಂದು ಚಿತ್ರತಂಡಕ್ಕೆ ಅನಿಸಿದೆ. ಅದೇ ಕಾರಣಕ್ಕೆ, ಐಶ್ವರ್ಯವನ್ನು ಬಿಟ್ಟು ಪ್ರಿಯಾಂಕಾ ಹತ್ತಿರ ಓಡಿದೆ ಚಿತ್ರತಂಡ. ಹೆಂಡತಿಯನ್ನು ಬಿಟ್ಟಿದ್ದಿಕ್ಕೆ ಬೇಸರಗೊಂಡ ಅಭಿಷೇಕ್, ತಾನು ಸಹ ಚಿತ್ರದಲ್ಲಿ ನಟಿಸಲೊಲ್ಲೆ ಎಂದು ಹೊರಬಂದರಂತೆ.

    ಹಾಗಾಗಿ ‘ಸ್ಕೈ ಈಸ್ ಪಿಂಕ್’ ಚಿತ್ರವು ಪ್ರಿಯಾಂಕಾ ಮತ್ತು ಫರ್ಹಾನ್‌ಗೆ ಹೋಗಿದೆ. ಒಂದು ಪಕ್ಷ ಈ ಚಿತ್ರದಲ್ಲಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ನಟಿಸಿದ್ದರೆ, ಚಿತ್ರ ಹಿಟ್ ಆಗುತಿತ್ತಾ? ಗೊತ್ತಿಲ್ಲ. ಒಂದೊಳ್ಳೆಯ ಓಪನಿಂಗ್ ಆದರೂ ತೆಗೆದುಕೊಳ್ಳುತಿತ್ತೇನೋ?

    ನಯನತಾರಾಗೂ ಹಲವರ ಜತೆ ಸಂಬಂಧ ಇದೆ … ಕಾಲೆಳೆದವರ ಬಾಯ್ಮುಚ್ಚಿಸಿದ ಶ್ರೀರೆಡ್ಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts