More

    ರಿಯಲ್ ಚಾರ್ಲಿ-777: ಶ್ವಾನದೊಂದಿಗೆ ಬೈಕ್​ನಲ್ಲಿ ಲಡಾಕ್​ಗೆ ಹೊರಟ ಸು’ಧೀರ’

    ಚಿಕ್ಕಬಳ್ಳಾಪುರ: ಕಿರಣ್​ ರಾಜ್​ ನಿರ್ದೇಶನ, ರಕ್ಷಿತ್ ಶೆಟ್ಟಿ ನಿರ್ಮಾಣ ಮತ್ತು ಅಭಿನಯದಲ್ಲಿ ಮೂಡಿಬಂದ ‘ಚಾರ್ಲಿ 777’ ಚಿತ್ರದಲ್ಲಿ ಶ್ವಾನದ ಕಥೆ ಇರುವುದು ಬಹುತೇಕ ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ ಇದೀಗ ಅದೇ ಕಥೆಯನ್ನು ಹೋಲುವಂಥ ರಿಯಲ್​ ಸ್ಟೋರಿಯೊಂದು ಇಲ್ಲಿದೆ.

    ಅರ್ಥಾತ್, ಇಲ್ಲೊಬ್ಬ ಯುವಕ ತನ್ನ ನೆಚ್ಚಿನ ನಾಯಿಯನ್ನು ಕರೆದುಕೊಂಡು ಬೈಕ್​ನಲ್ಲಿ ಲಡಾಕ್​ ಪ್ರವಾಸ ಹೊರಟಿದ್ದಾನೆ. ಅಂದಹಾಗೆ ಈತನ ಹೆಸರು ಸುಧೀರ್. ಕೇರಳದ ಈತ ಅಲ್ಲಿಂದಲೇ ಲಡಾಕ್​ಗೆ ಹೊರಟಿದ್ದು, ಸದ್ಯ ಕರ್ನಾಟಕದಲ್ಲಿದ್ದಾನೆ.

    ಮಾರ್ಗಮಧ್ಯೆ ಚಿಕ್ಕಬಳ್ಳಾಪುರದಲ್ಲಿ ಈತ ಸಾರ್ವಜನಿಕರ ಗಮನ ಸೆಳೆದಿದ್ದಾನೆ. ಸ್ಪ್ಲೆಂಡರ್ ಬೈಕ್​ನಲ್ಲಿ ಹಿಂಬದಿಯಲ್ಲಿ ಶ್ವಾನಕ್ಕೆ ಕುಳಿತುಕೊಳ್ಳಲೆಂದೇ ಒಂದು ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡು ಲಡಾಕ್​ಗೆ ಹೊರಟಿದ್ದಾನೆ. ಹೀಗೆ ಬೈಕ್​ನಲ್ಲಿ ಒಟ್ಟು 8 ಸಾವಿರ ಕಿಲೋಮೀಟರ್ ಪ್ರಯಾಣ ಮಾಡಲಿರುವುದಾಗಿ ಆತ ಹೇಳಿಕೊಂಡಿದ್ದಾನೆ.

    ತೋಟಕ್ಕೆ ಕೆಲಸಕ್ಕೆಂದು ಹೋಗಿದ್ದ ರೈತ, ಕಾಲು ಜಾರಿ ಬಾವಿಗೇ ಬಿದ್ದು ಸಾವು!

    ಚೀನಾದ ನೈಟ್​ ಕ್ಲಬ್​ಗಳಲ್ಲಿ ಉಚಿತ ಊಟ-ಮದ್ಯ; ಜಪಾನ್ ಮಾಜಿ ಪ್ರಧಾನಿ ಸಾವಿಗೆ ಈ ರೀತಿ ಸಂಭ್ರಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts