More

    ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಲು ಸಿದ್ಧ: ಮಗಳ ಮದುವೆಗೆ ಹಣ ಹೊಂದಿಸಲು ದೇವರೇ ಕೊಟ್ಟ ಅವಕಾಶ ಎಂದ ಪವನ್ ಜಲ್ಲಾದ್!

    ಮೇರಠ್: ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಲು ನಾನು ಸಿದ್ಧವಾಗಿದ್ದೇನೆ. ಇದು ನನ್ನ ಮಗಳ ಮದುವೆಗೆ ಹಣ ಹೊಂದಿಸುವುದಕ್ಕಾಗಿ ದೇವರೇ ಕೊಟ್ಟ ಅವಕಾಶ ಎಂದು ಭಾವುಕರಾಗಿ ದೇವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ ಪವನ್ ಜಲ್ಲಾದ್​(57)!

    ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಜನವರಿ 22ರಂದು ಗಲ್ಲಿಗೇರಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದಕ್ಕೆ ಪೂರಕವಾಗಿ ಉತ್ತರ ಪ್ರದೇಶ ಸರ್ಕಾರ ಕೂಡ ಸಿದ್ಧತೆ ನಡೆಸಿದೆ. ಅಪರಾಧಿಗಳನ್ನು ಗಲ್ಲಿಗೇರಿಸುವ ಕೆಲಸವನ್ನು ಪೊಲೀಸ್ ಇಲಾಖೆ ಪವನ್ ಜಲ್ಲಾದ್​ಗೆ ಒಪ್ಪಿಸಿದೆ.

    ನಾನು ಆ ದಿನಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಆದರೆ ಅದಕ್ಕೂ ಮೊದಲೇ ಇವರನ್ನು ಗಲ್ಲಿಗೇರಿಸಬಹುದು. ಅದು ನಾಳೆಯೂ ಆಗಬಹುದು. ನಾಡಿದ್ದೂ ಆಗಬಹುದು. ಮಾಹಿತಿ ಕೊಡುತ್ತೇವೆ ಎಂದಿದ್ದಾರೆ ಪೊಲೀಸರು ಎಂದು ಪವನ್ ಹೇಳಿದ್ದಾರೆ. ಮೇರಠ್​ನ ಭೂಮಿಯಪುಲ್ಲಾ ಪ್ರದೇಶದ ಲಕ್ಷ್ಮಣ ಕುಮಾರ್ ಕುಟುಂಬದ ನಾಲ್ಕನೇ ತಲೆಮಾರಿನ ವ್ಯಕ್ತಿ ಪವನ್​. ಈ ಕುಟುಂಬದವರು ಹ್ಯಾಂಗ್​ಮನ್ ಆಗಿ ಕೆಲಸ ಮಾಡುತ್ತ ಬಂದಿದ್ದಾರೆ.

    ಈ ಕೆಲಸ ಸಿಕ್ಕಿದ್ದಕ್ಕಾಗಿ ಪವನ್ ಖುಷಿಯಿಂದ ಭಾವುಕರಾಗಿದ್ದಾರೆ. ಉತ್ತರ ಪ್ರದೇಶದ ಮೇರಠ್​ನಲ್ಲಿ ಕಾನ್ಶೀರಾಂ ಆವಾಸ್ ಯೋಜನೆ ಅಡಿ ಸಿಕ್ಕ ಚಿಕ್ಕ ಸಿಂಗಲ್ ರೂಮ್ ಮನೆಯಲ್ಲಿ ವಾಸವಾಗಿರುವ ಪವನ್​, ಮಗಳ ಮದುವೆಗೆ ತಯಾರಿ ನಡೆಸಿದ್ದಾರೆ. ಅವರು ಹೇಳುವುದಿಷ್ಟು – ನಾನು ಬಹುತೇಕ ಕುಸಿದು ಹೋಗಿದ್ದೆ. ಮಗಳ ಮದುವೆಗೆ ದುಡ್ಡು ಹೊಂದಿಸುವುದು ಹೇಗೆಂದು ತಿಳಿಯದೇ ಹೋಗಿತ್ತು. ಮಗಳು ಮದುವೆಯ ವಯಸ್ಸಿಗೆ ಬಂದಿದ್ದಾಳೆ. ಅದೇ ರೀತಿ ಹಿರಿಯರು ಕಟ್ಟಿಸಿದ ಮನೆ ಕುಸಿದು ಬೀಳುವ ಹಂತದಲ್ಲಿದೆ. ಅದನ್ನು ದುರಸ್ಥಿ ಮಾಡಲು ದುಡ್ಡಿಲ್ಲ. ಈಗಾಗಲೇ ಸಾಲದಲ್ಲಿದ್ದೇನೆ. ಸಾಲಗಾರರ ಕಾಟ ತಪ್ಪಿದ್ದಲ್ಲ. ಹೀಗಾಗಿ ಹಲವು ತಿಂಗಳುಗಳಿಂದ ದೇವರ ಮೊರೆ ಹೋಗುತ್ತಿದ್ದೆ. ಕೊನೆಗೂ ದೇವರು ನನ್ನ ಕೂಗಿಗೆ ಕರಗಿದ್ದಾನೆ. ತಿಹಾರ್​ ಜೈಲಿನಲ್ಲಿ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವ ಕೆಲಸವನ್ನು ಒಪ್ಪಿಸಿದ್ದಾನೆ. ಇದನ್ನು ನಿರ್ವಹಿಸಿದರೆ ಸರ್ಕಾರ ನನಗೆ ಒಂದು ಲಕ್ಷ ರೂಪಾಯಿ ಕೊಡುತ್ತದೆ. ಅದನ್ನು ನಾನು ಮಗಳ ಮದುವೆಗೆ ಬಳಸುವೆ. ನನಗೆ ಹೊಸ ಬದುಕು ಕೊಡಲಿದೆ ಈ ಕೆಲಸ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts