More

    ನೇಣಿಗೇರುವ ಮುನ್ನ ಇಡೀ ರಾತ್ರಿ ನಾಲ್ವರು ಅಪರಾಧಿಗಳ ವರ್ತನೆ ಹೇಗಿತ್ತು? ಅಧಿಕಾರಿಗಳು ಹೇಳಿದ್ದೇನು?

    ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಏಳು ವರ್ಷ ತಡವಾದರೂ ಕೊನೆಗೂ ನ್ಯಾಯ ದೊರೆತಿದೆ. ಇಂದು ಬೆಳಗ್ಗೆ 5.30ಕ್ಕೆ ನಾಲ್ವರು ಅಪರಾಧಿಗಳನ್ನು ನೇಣುಗಂಬಕ್ಕೆ ಏರಿಸಲಾಗಿದೆ. 3 ಗಂಟೆ ಸುಮಾರಿಗೆ ಅಪರಾಧಿಗಳು ಸಲ್ಲಿಸಿದ್ದ ಅಂತಿಮ ಅರ್ಜಿಯನ್ನು ಸುಪ್ರೀಂಕೋರ್ಟ್​ ವಜಾಗೊಳಿಸಿದ ಎರಡೂವರೆ ಗಂಟೆಯ ಬಳಿಕ ಅಪರಾಧಿಗಳನ್ನು ಹ್ಯಾಂಗ್​ಮನ್​ ಪವನ್​ ಜಲ್ಲಾ ತಿಹಾರ್​ ಜೈಲಿನಲ್ಲಿ ನೇಣಿಗೇರಿಸಿದರು.

    ನೇಣುಗಂಬಕ್ಕೇರುವ ಕೆಲ ಸಮಯಗಳ ಮುಂಚೆಯೇ ಅಪರಾಧಿಗಳ ಪರ ವಕೀಲ ಗಲ್ಲುಶಿಕ್ಷೆಗೆ ತಡೆಕೋರಿ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ. ಕರೊನಾ ವೈರಸ್ ಕಾರಣದಿಂದಾಗಿ ದಾಖಲೆಗಳ ಕೊರತೆಯಿಂದಾಗಿ ತುರ್ತು ಮನವಿಯನ್ನು ಸಲ್ಲಿಸಲಾಗಿದೆ ಎಂದು ಅರ್ಜಿಯಲ್ಲಿ ವಕೀಲರು ಉಲ್ಲೇಖಿಸಿದ್ದರು. ಆದರೆ, ಹೈಕೋರ್ಟ್ ಈಗಾಗಲೇ ಮರಣದಂಡನೆ ನಿಲ್ಲಿಸುವ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಮುಗಿದಿದೆ ಎಂದು ಹೇಳುವ ಮೂಲಕ ಅರ್ಜಿಯನ್ನು ತಿರಸ್ಕರಿಸಿತು.​

    ಅಪರಾಧಿಗಳಾದ ಮುಕೇಶ್​ ಕುಮಾರ್​ ಸಿಂಗ್(32)​, ಪವನ್​ ಕುಮಾರ್​ ಗುಪ್ತ(25), ವಿನಯ್​ ಕುಮಾರ್​ ಶರ್ಮ(26) ಮತ್ತು ಅಕ್ಷಯ್​ ಕುಮಾರ್​ ಸಿಂಗ್(31)​ರನ್ನು ಇಂದು ಬೆಳಗ್ಗೆ ತಿಹಾರ್​ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಕೊನೆಯ ಕೆಲ ಸಮಯಗಳನ್ನು ಏಕಾಂಗಿಯಾಗಿ, ಪ್ರತ್ಯೇಕವಾದ ಜೈಲು ಕೊಠಡಿಗಳಲ್ಲಿ ಅಪರಾಧಿಗಳು ಕಳೆದರು. ಈ ವೇಳೆ ಅವರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ, ಕಣ್ಣೆದುರೇ ಸಾವು ಇರುವಾಗ ಊಟ ಮಾಡುವುದಾದರೂ ಹೇಗೆ? ಎಂಬ ಚಿಂತೆಯಲ್ಲಿ ಮುಳುಗಿದ್ದರು. ಇನ್ನು ಭಾರತ ಇತಿಹಾದಲ್ಲಿ ಇದೇ ಮೊದಲ ಬಾರಿಗೆ ನಾಲ್ವರು ಅಪರಾಧಿಗಳನ್ನು ಒಟ್ಟಿಗೆ ಗಲ್ಲಿಗೇರಿಸಲಾಗಿದೆ.

    ಊಟವನ್ನು ತಿರಸ್ಕರಿಸಿದ ಅಪರಾಧಿಗಳು ಇಡೀ ರಾತ್ರಿ ಎಚ್ಚರದಿಂದೇ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೇಣು ಶಿಕ್ಷೆಗೂ ಮುನ್ನ ಇಡೀ ರಾತ್ರಿ ಜೈಲಿಗೆ ಬೀಗಮುದ್ರೆ ಜಡಿಯಲಾಗಿತ್ತು. ಮುಂಜಾನೆ 3.30ಕ್ಕೆ ಎಚ್ಚರಗೊಂಡ ಅಪರಾಧಿಗಳಿಗೆ ನಮಗೆ ಕಾನೂನಿನ ಎಲ್ಲ ದಾರಿಗಳು ಬಂದ್​ ಆಗಿವೆ ಎಂಬುದು ಸ್ಪಷ್ಟವಾಗಿತ್ತು. ತುಂಬಾ ಚಡಪಡಿಸಿದ ಅಪರಾಧಿಗಳು ಗಲ್ಲುಶಿಕ್ಷೆಗೆ ಸಿದ್ಧರಾಗಲು ಒಪ್ಪಲಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

    ಗಲ್ಲುಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕಾನೂನಿ ಎಲ್ಲ ಅವಕಾಶಗಳನ್ನು ಅಪರಾಧಿಗಳು ದುರ್ಬಳಕೆ ಮಾಡಿಕೊಂಡು, ವಿಳಂಬ ತಂತ್ರ ಅನುಸರಿಸಿದರು. ಆದರೆ, ನ್ಯಾಯಾಲಯದಲ್ಲಿ ಅಪರಾಧಿಗಳಿಗೆ ಯಾವುದೇ ವಿನಾಯಿತಿ ಸಿಗಲಿಲ್ಲ. ಬಳಿಕ ರಾಷ್ಟ್ರಪತಿಗಳ ಕ್ಷಮೆಯೂ ಸಿಗಲಿಲ್ಲ. ಕೊನೆಯವರೆಗೂ ಪರದಾಡಿದ ಅಪರಾಧಿಗಳು ಅಪರಾಧಿಗಳನ್ನು ಭಾರತ-ಪಾಕಿಸ್ತಾನ ಗಡಿಗೆ ಕಳುಹಿಸಿ, ಚೀನಾ-ಭಾರತದ ಡೋಕ್ಲಾಮ್​ ಗಡಿಗಗಾದರೂ ಕಳುಹಿಸಿ ಆದರೆ, ನೇಣಿಗೆ ಮಾತ್ರ ಹೇರಿಸಬೇಡಿ ಎಂದು ಅಪರಾಧಿ ಅಕ್ಷಯ್​ ಠಾಕೂರ್​ ಪರ ವಕೀಲ ಮನವಿ ಮಾಡಿಕೊಂಡಿದ್ದರು. ಆದರೆ, ಎಲ್ಲ ಬಾಗಿಲುಗಳು ಮುಚ್ಚಿವೆ ಎಂದು ಕೋರ್ಟ್​ ಖಡಾಖಂಡಿತವಾಗಿ ಹೇಳಿತು.

    ಗಲ್ಲುಶಿಕ್ಷೆ ಎರಡ್ಮೂರು ಬಾರಿ ಮುಂದಕ್ಕೆ ಹೋಗಿದ್ದ ಕಾರಣ ಹ್ಯಾಂಗ್​ಮನ್​ ಪವನ್​ ಜಲ್ಲಾ ಸಾಕಷ್ಟು ಬಾರಿ ನಕಲಿ ಮರಣದಂಡನೆಯ ಅಭ್ಯಾಸವನ್ನು ನಡೆಸಿದ್ದರು. ಅವರ ಅಭ್ಯಾಸ ಇಂದು ಕಾರ್ಯರೂಪಕ್ಕೆ ಬಂದಿತು. ಇತ್ತ ಅಪರಾಧಿಗಳು ಗಲ್ಲಿಗೇರುತ್ತಿದ್ದಂತೆ ನಿರ್ಭಯಾ ಪಾಲಕರಲ್ಲಿ ಸಂತಸ ಭಾವ ಮೂಡಿತು. ಅಲ್ಲದೆ, ಕೊನೆಗೂ ನ್ಯಾಯ ಸಿಕ್ಕಿತು ಎಂಬ ಖಷಿಯನ್ನು ವ್ಯಕ್ತಪಡಿಸಿದರು.

    ಘಟನೆ ಹಿನ್ನೆಲೆ ಏನು
    2012, ಡಿಸೆಂಬರ್​ 16ರ ರಾತ್ರಿಯಂದು 23 ವರ್ಷದ ನಿರ್ಭಯಾ ತನ್ನ ಬಾಯ್​ಫ್ರೆಂಡ್​ನೊಂದಿಗೆ ಸಿನಿಮಾ ವೀಕ್ಷಿಸಿಕೊಂಡು ಮನೆಗೆ ಮರಳಲು ಬಸ್​ಗಾಗಿ ಕಾಯುತ್ತಿದ್ದರು. ಈ ವೇಳೆ ಶಾಲಾ ಬಸ್​ ಒಂದು ಸ್ಥಳಕ್ಕೆ ಬಂದಿತು. ಬಸ್​ನಲ್ಲಿದ್ದ 6 ಮಂದಿ ಡ್ರಾಪ್​ ಕೊಡುವುದಾಗಿ ಇಬ್ಬರನ್ನು ಹತ್ತಿಸಿಕೊಂಡರು. ಸ್ವಲ್ಪ ದೂರ ಹೋದ ಬಳಿಕ ನಿರ್ಭಯಾ ಸ್ನೇಹಿತನ ಮೇಲೆ ಹಲ್ಲೆ ಮಾಡಿ ಪ್ರಜ್ಞೆ ತಪ್ಪಿಸಿ, ಬಸ್​ ಹಿಂಬದಿಯ ಸೀಟ್​ಗೆ ಎಸೆದರು. ಅದಾದ ಬಳಿಕ ನಿರ್ಭಯಾಳನ್ನು ಹಿಂಸಿಸಿ ಅಪರಾಧಿಗಳು ಸಾಮೂಹಿಕವಾಗಿ ಅತ್ಯಾಚಾರ ಎಸಗಿದರು. ಇದಲ್ಲದೆ, ಕಬ್ಬಿಣದ ಸಲಾಕೆ ತೆಗೆದುಕೊಂಡು ನಿರ್ಭಯಾ ಮರ್ಮಾಂಗಕ್ಕೆ ಇರಿಯುವ ಮೂಲಕ ಮೃಗೀಯ ವರ್ತನೆಯನ್ನು ತೋರಿದರು. ಬಳಿಕ ರಕ್ತಸಿಕ್ತವಾಗಿದ್ದ ನಿರ್ಭಯಾಳನ್ನು ಹಾಗೂ ಸ್ನೇಹಿತನನ್ನು ರಸ್ತೆ ಪಕ್ಕದಲ್ಲಿ ಎಸೆದು ಹೋಗಿದ್ದರು. ಕೊನೆಗೆ ನಿರ್ಭಯಾ ಸಿಂಗಾಪೂರ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾದಳು. ಈ ಘಟನೆ ಇಡೀ ದೇಶದಲ್ಲಿ ಆಕ್ರೋಶ ಕಿಚ್ಚನ್ನು ಹಬ್ಬಿಸಿತು. ಸಾಲು ಸಾಲು ಪ್ರತಿಭಟನೆಗಳು ನಡೆದವು.

    ಒಟ್ಟು ಆರು ಅಪರಾಧಿಗಳಲ್ಲಿ ರಾಮ ಸಿಂಗ್​ ತಿಹಾರ್​ ಜೈಲಿನಲ್ಲೇ 2013 ಮಾರ್ಚ್​ನಲ್ಲಿ ಪಾಪಾಪ್ರಜ್ಞೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ. ಮತ್ತೊಬ್ಬ ಬಾಲಾಪಾರಾಧಿಯನ್ನು ಅಪರಾಧ ನಡೆದ ಮೂರು ವರ್ಷಗಳ ಬಳಿಕ ಬಿಡುಗಡೆ ಮಾಡಲಾಗಿತ್ತು. ಉಳಿದ ನಾಲ್ವರು ಅಪರಾಧಿಗಳನ್ನು ಇದೀಗ ಗಲ್ಲಿಗೇರಿಸಲಾಗಿದೆ. (ಏಜೆನ್ಸೀಸ್​)

    ತಿಹಾರ್​ ಜೈಲಿನಲ್ಲಿ ನೇಣುಗಂಬಕ್ಕೆ ಏರಿದ ನಿರ್ಭಯಾ ಅತ್ಯಾಚಾರ ಅಪರಾಧಿಗಳು; ಮಾಡಿದ ಪಾಪಕ್ಕೆ ಕುಣಿಕೆಯಲ್ಲಿ ಹೋಯ್ತು ಜೀವ

    ನಿರ್ಭಯಾ ಕೊಲೆ ಪ್ರಕರಣದ ಅಪರಾಧಿಗಳಿಗೆ ಗಲ್ಲು: ತಾಯಿ ಆಶಾದೇವಿ ಅವರ ಮೊದಲ ಪ್ರತಿಕ್ರಿಯೆ ಇದಾಗಿತ್ತು..

    ಅಪರಾಧಿಗಳನ್ನು ನೇಣಿಗೇರಿಸಿದ ಬೆನ್ನಲ್ಲೇ ನಿರ್ಭಯಾ ತಂದೆ ನೀಡಿದ ಪ್ರತಿಕ್ರಿಯೆ ಇದಾಗಿತ್ತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts