More

    ನಿರ್ಭಯಾ ಕೊಲೆ ಪ್ರಕರಣದ ಅಪರಾಧಿಗಳಿಗೆ ಗಲ್ಲು: ತಾಯಿ ಆಶಾದೇವಿ ಅವರ ಮೊದಲ ಪ್ರತಿಕ್ರಿಯೆ ಇದಾಗಿತ್ತು..

    ನವದೆಹಲಿ: ದೇಶದಲ್ಲಿ ಸಂಚಲನ ಮೂಡಿಸಿ ಕಾನೂನು ತಿದ್ದುಪಡಿಗೆ ಕಾರಣವಾಗಿದ್ದ 2012ರ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿನ ಬದುಕಿ ಉಳಿದಿದ್ದ ನಾಲ್ವರು ಅಪರಾಧಿಗಳನ್ನು ತಿಹಾರ್ ಜೈಲಿನಲ್ಲಿ ಶುಕ್ರವಾರ ಮುಂಜಾನೆ 5.30ಕ್ಕೆ ನೇಣುಗಂಬಕ್ಕೆ ಏರಿಸಿ ಮರಣದಂಡನೆ ಶಿಕ್ಷೆ ಜಾರಿಗೊಳಿಸಿದ್ದಾರೆ. ಇದರ ಬೆನ್ನಿಗೆ ನಿರ್ಭಯಾ ಅವರ ತಾಯಿ ಆಶಾದೇವಿ ನೀಡಿದ ಮೊದಲ ಪ್ರತಿಕ್ರಿಯೆ ಹೀಗಿತ್ತು-

    ನಮ್ಮ ಮಗಳು ಈಗಿಲ್ಲ ಮತ್ತು ಅವಳು ಮತ್ತೆ ಬರಲಾರಳು. ಆಕೆ ನಮ್ಮನ್ನು ಅಗಲಿದ ದಿನದಿಂದ ನಮ್ಮ ಹೋರಾಟವನ್ನು ಆರಂಭಿಸಿದ್ದೆವು. ಇದು ಅವಳಿಗಾಗಿ ನಡೆಸಿದ ಹೋರಾಟವಾಗಿತ್ತು. ಆದಾಗ್ಯೂ, ನಾವು ಈ ಹೋರಾಟವನ್ನು ಇಲ್ಲಿಗೇ ಕೈ ಬಿಡುವುದಿಲ್ಲ. ನಮ್ಮ ಮಗಳಂದಿರಿಗಾಗಿ ಮುಂದುವರಿಸುತ್ತೇವೆ. ನಾನು ನನ್ನ ಮಗಳ ಫೋಟೊವನ್ನು ಅಪ್ಪಿ ಹಿಡಿದುಕೊಂಡು ಹೇಳಿದೆ- ಮಗಳೇ ಕೊನೆಗೂ ನಿನಗೆ ಸಿಕ್ಕಿತು ನ್ಯಾಯ.

    ಕೊನೆಗೂ ಆ ಅಪರಾಧಿಗಳನ್ನು ನೇಣುಗಂಬಕ್ಕೆ ಏರಿಸಿದರು. ಅದು ಸುದೀರ್ಘವಾದ ಹೋರಾಟವಾಗಿತ್ತು. ಇಂದು ನಮಗೆ ನ್ಯಾಯ ಸಿಕ್ಕಿತು. ಈ ದಿನವನ್ನು ನಮ್ಮ ದೇಶದ ಮಗಳಂದಿರಿಗೆ ಮೀಸಲಿಡಬೇಕಾದ ದಿನ ಎಂದು ನಾವು ನಿರ್ಧರಿಸಿದ್ದೇವೆ. ಸರ್ಕಾರ ಮತ್ತು ನ್ಯಾಯಾಂಗಕ್ಕೆ ನಾವು ಕೃತಜ್ಞತೆಯನ್ನು ಸಮರ್ಪಿಸುತ್ತಿದ್ದೇವೆ. (ಏಜೆನ್ಸೀಸ್)

    ತಿಹಾರ್​ ಜೈಲಿನಲ್ಲಿ ನೇಣುಗಂಬಕ್ಕೆ ಏರಿದ ನಿರ್ಭಯಾ ಅತ್ಯಾಚಾರ ಅಪರಾಧಿಗಳು; ಮಾಡಿದ ಪಾಪಕ್ಕೆ ಕುಣಿಕೆಯಲ್ಲಿ ಹೋಯ್ತು ಜೀವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts