More

    ಅಪರಾಧಿಗಳನ್ನು ನೇಣಿಗೇರಿಸಿದ ಬೆನ್ನಲ್ಲೇ ನಿರ್ಭಯಾ ತಂದೆ ನೀಡಿದ ಪ್ರತಿಕ್ರಿಯೆ ಇದಾಗಿತ್ತು…

    ನವದೆಹಲಿ: ಕರಾಳ ಘಟನೆ ನಡೆದ ಏಳು ವರ್ಷದ ನಂತರ ತಡವಾದರೂ ನಿರ್ಭಯಾ ಪ್ರಕರಣಕ್ಕೆ ನ್ಯಾಯ ದೊರೆತಿದೆ. ಇಂದು ಬೆಳ್ಳಂಬೆಳಗ್ಗೆ ನಿರ್ಭಯಾ ಅಪರಾಧಿಗಳನ್ನು ನೇಣಿಗೆ ಏರಿಸಲಾಗಿದ್ದು, ಅತ್ಯಾಚಾರಿಗಳಿಗೆ ಇದೊಂದು ಪಾಠವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

    ಈ ಬಗ್ಗೆ ಮಾತನಾಡಿರುವ ನಿರ್ಭಯಾ ತಂದೆ, ಅಪರಾಧಿಗಳ ಗಲ್ಲು ಶಿಕ್ಷೆಯ ಕ್ಷಣವನ್ನು ಭಾರತದ ಎಲ್ಲ ನಗರಗಳ, ಪಟ್ಟಣಗಳ ಮತ್ತು ಗ್ರಾಮಗಳ ಜನರು ಆಚರಿಸುತ್ತಿದ್ದಾರೆ. ದೀರ್ಘಕಾಲದ ಹೋರಾಟವೇ ನಡೆಯಿತು. ನ್ಯಾಯ ವಿಳಂಬವಾಗಲು ಅಪರಾಧಿಗಳ ಹಲವಾರು ತಂತ್ರಗಳೇ ಕಾರಣ ಎಂದರು.

    ಅಪರಾಧಿಗಳಾದ ಮುಕೇಶ್​ ಕುಮಾರ್​ ಸಿಂಗ್​, ಪವನ್​ ಕುಮಾರ್​ ಗುಪ್ತ, ವಿನಯ್​ ಕುಮಾರ್​ ಶರ್ಮ ಮತ್ತು ಅಕ್ಷಯ್​ ಕುಮಾರ್​ ಸಿಂಗ್​ರನ್ನು ಇಂದು ಬೆಳಗ್ಗೆ 5.30ರ ಸಮಯದಲ್ಲಿ ತಿಹಾರ್​ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.

    23 ವರ್ಷದ ಪ್ಯಾರಾಮೆಡಿಕಲ್​ ವಿದ್ಯಾರ್ಥಿನಿಯನ್ನು ಡಿಸೆಂಬರ್​ 16, 2012ರಂದು ಬಾಲಾಪಾರಾಧಿ ಸೇರಿದಂತೆ ಒಟ್ಟು ಆರು ಮಂದಿ ಮೃಗೀಯವಾಗಿ ಅತ್ಯಾಚಾರವೆಸಗಿ, ಕೊಲೆಗೈದು ವಿಕೃತಿ ಮೆರೆದಿದ್ದರು.

    ಒಟ್ಟು ಆರು ಅಪರಾಧಿಗಳಲ್ಲಿ ರಾಮ ಸಿಂಗ್​ ತಿಹಾರ್​ ಜೈಲಿನಲ್ಲೇ 2013 ಮಾರ್ಚ್​ನಲ್ಲಿ ಪಾಪಾಪ್ರಜ್ಞೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ. ಮತ್ತೊಬ್ಬ ಬಾಲಾಪಾರಾಧಿಯನ್ನು ಅಪರಾಧ ನಡೆದ ಮೂರು ವರ್ಷಗಳ ಬಳಿಕ ಬಿಡುಗಡೆ ಮಾಡಲಾಗಿತ್ತು. (ಏಜೆನ್ಸೀಸ್​)

    ತಿಹಾರ್​ ಜೈಲಿನಲ್ಲಿ ನೇಣುಗಂಬಕ್ಕೆ ಏರಿದ ನಿರ್ಭಯಾ ಅತ್ಯಾಚಾರ ಅಪರಾಧಿಗಳು; ಮಾಡಿದ ಪಾಪಕ್ಕೆ ಕುಣಿಕೆಯಲ್ಲಿ ಹೋಯ್ತು ಜೀವ

    ನಿರ್ಭಯಾ ಕೊಲೆ ಪ್ರಕರಣದ ಅಪರಾಧಿಗಳಿಗೆ ಗಲ್ಲು: ತಾಯಿ ಆಶಾದೇವಿ ಅವರ ಮೊದಲ ಪ್ರತಿಕ್ರಿಯೆ ಇದಾಗಿತ್ತು..

    ನ್ಯಾಯ ದೊರೆತರೂ ಮತ್ತೆ ಸುಪ್ರೀಂಕೋರ್ಟ್​ ಮೆಟ್ಟಿಲೇರುತ್ತೇನೆಂದು ನಿರ್ಭಯಾ ತಾಯಿ ಹೇಳಿದ್ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts