More

    ಕೃಷಿ ಕಾಯ್ದೆಗಳಿಂದ ಪ್ರಯೋಜನ ಆಗದಿದ್ದರೆ ತಿದ್ದುಪಡಿಗೆ ಸಿದ್ಧ

    ನವದೆಹಲಿ: ಕೃಷಿ ಸಂಬಂಧಿತ ನೂತನ ಕಾಯ್ದೆಗಳನ್ನು ಒಂದು ಅಥವಾ ಎರಡು ವರ್ಷಗಳ ಕಾಲ ಜಾರಿಯಲ್ಲಿರಲು ಬಿಡಿ. ಒಂದುವೇಳೆ ಈ ಕಾಯ್ದೆಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಕಂಡುಬಂದಲ್ಲಿ ತಿದ್ದುಪಡಿ ಮಾಡಲು ಸರ್ಕಾರ ಸಿದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಪ್ರತಿಭಟನಾನಿರತ ರೈತರಿಗೆ ಮನವಿ ಮಾಡಿದ್ದಾರೆ. ಕೃಷಿ ಕಾಯ್ದೆಗಳ ಕುರಿತು ರೈತರಿಗೆ ಅರಿವು ಮೂಡಿಸಲು ದೇಶಾದ್ಯಂತ 100 ಸುದ್ದಿಗೋಷ್ಠಿಗಳು ಹಾಗೂ 700 ಸಭೆಗಳನ್ನು ನಡೆಸುವ ಬಿಜೆಪಿಯ ಯೋಜನೆಯಡಿ ದೆಹಲಿಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ರಾಜನಾಥ ಮಾತನಾಡಿದರು. ಕೇಂದ್ರದ 54 ಸಚಿವರು ದೇಶದ ವಿವಿಧ ಭಾಗದಲ್ಲಿ ಇಂಥ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

    ಹೊಸ ಕೃಷಿ ಕಾಯ್ದೆಗಳನ್ನು ಪ್ರಯೋಗವಾಗಿ ಪ್ರಯತ್ನಿಸೋಣ. ಇವುಗಳು ರೈತರಿಗೆ ಪ್ರಯೋಜನಕಾರಿ ಅಲ್ಲ ಎಂದಾದರೆ ಸಾಧ್ಯವಿರುವ ಎಲ್ಲ ಮಾರ್ಪಾಟುಗಳನ್ನು ಮಾಡಲು ಸರ್ಕಾರ ಸಿದ್ಧವಾಗಲಿದೆ. ಎಲ್ಲ ಸಮಸ್ಯೆಗಳನ್ನು ಸಂವಾದದ ಮೂಲಕ ಪರಿಹರಿಸಬಹುದು. ಧರಣಿ ಕುಳಿತಿರುವ ರೈತರ ಬಗ್ಗೆ ಅಪಾರ ಗೌರವವಿದೆ. ರೈತರೊಂದಿಗೆ ಮಾತುಕತೆ ಮುಂದುವರಿಯಬೇಕೆಂದು ಪ್ರಧಾನಿ ಮೋದಿ ಬಯಸಿದ್ದು, ಚರ್ಚೆಗೆ ಬನ್ನಿ ಎಂದು ಮನವಿ ಮಾಡಿದರು.

    ಪ್ರತಿಪಕ್ಷಗಳು ದಾರಿತಪ್ಪಿಸುತ್ತಿವೆ

    ಹೊಸ ಕೃಷಿ ಕಾಯ್ದೆಗಳು ಹಾಗೂ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ಬಗ್ಗೆ ಪ್ರತಿಪಕ್ಷಗಳು ರೈತರ ದಾರಿ ತಪ್ಪಿಸಿತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಆರೋಪಿಸಿದ್ದಾರೆ. ದೇಶದಲ್ಲಿ ಬಹಳ ಹಿಂದಿನಿಂದಲೂ ಇರುವ ಎಂಎಸ್​ಪಿ ವ್ಯವಸ್ಥೆಯನ್ನು ಯಾರೂ ತೆಗೆಯಲು ಸಾಧ್ಯವಿಲ್ಲ. ನರೇಂದ್ರ ಮೋದಿ ಪ್ರಧಾನಮಂತ್ರಿ ಆಗಿರುವವರೆಗೂ ಯಾವುದೇ ರೈತರ ಭೂಮಿಯನ್ನು ಯಾವುದೇ ಕಾರ್ಪೆರೇಟ್​ಗಳು ಕಸಿದುಕೊಳ್ಳಲು ಸಾಧ್ಯವಿಲ್ಲ. ಹೊಸ ಕೃಷಿ ಕಾನೂನು ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ರೈತ ಸಂಘಟನೆಗಳು ಭಾವಿಸಿದರೆ, ಅದನ್ನು ಮುಕ್ತ ಮನಸ್ಸಿನಿಂದ ರ್ಚಚಿಸಲು ಮತ್ತು ಪರಿಗಣಿಸಲು ಸರ್ಕಾರ ಸಿದ್ಧವಾಗಿದೆ ಎಂದು ಅಮಿತ್ ಷಾ ಭರವಸೆ ನೀಡಿದ್ದಾರೆ.

    ಪ್ರತಿಭಟನೆ ಕುರಿತು ಧ್ವನಿಯೆತ್ತಲು ಪಾಂಪಿಯೊಗೆ ಮನವಿ

    ಭಾರತದಲ್ಲಿನ ರೈತರ ಪ್ರತಿಭಟನೆ ಕುರಿತು ಧ್ವನಿಯೆತ್ತಿ ಎಂದು ಭಾರತ ಮೂಲದ ಅಮೆರಿಕದ ಸಂಸದೆ ಪ್ರಮೀಳಾ ಜಯಪಾಲ್ ಸೇರಿದಂತೆ ಅಮೆರಿಕದ 7 ಪ್ರಭಾವಿ ಸಂಸದರ ಗುಂಪು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊಗೆ ಪತ್ರ ಬರೆದಿದೆ. ರೈತರ ಪ್ರತಿಭಟನೆ ಪ್ರಮುಖವಾಗಿ ಪಂಜಾಬ್​ನವರಿಗೆ ಸಂಬಂಧಿಸಿದ್ದು, ಅಮೆರಿಕದ ಮೇಲೂ ಪರಿಣಾಮ ಬೀರಲಿದೆ. ಅನೇಕ ಭಾರತೀಯ ಅಮೆರಿಕನ್ನರು ಪಂಜಾಬ್​ನಲ್ಲಿನ ತಮ್ಮ ಕುಟುಂಬ ಸದಸ್ಯರು ಮತ್ತು ಪೂರ್ವಜರ ಭೂಮಿಯನ್ನು ಹೊಂದಿರುವುದರಿಂದ ಅವರಿಗೆ ಸಂಕಷ್ಟ ಎದುರಾಗಲಿದೆ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ. ಆದರೆ ರೈತರ ಪ್ರತಿಭಟನೆ ಕುರಿತು ವಿದೇಶಿ ನಾಯಕರ ಹೇಳಿಕೆ ಅನಪೇಕ್ಷಿತ ಮತ್ತು ಅನಗತ್ಯ ಎಂದು ಭಾರತ ಟೀಕಿಸಿದೆ. ಪ್ರಜಾಪ್ರಭುತ್ವ ರಾಷ್ಟ್ರದ ಆಂತರಿಕ ವ್ಯವಹಾರ ಸಂಬಂಧ ವಿದೇಶಿ ನಾಯಕರ ಹೇಳಿಕೆಗಳು ಅನಗತ್ಯ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ಹೇಳಿದ್ದಾರೆ.

    ಆಪ್ ಸಂಸದರ ಘೋಷಣೆ

    ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಸತ್​ನ ಸೆಂಟ್ರಲ್ ಹಾಲ್​ನಲ್ಲಿ ಆಮ್ ಆದ್ಮಿ ಪಕ್ಷದ ಇಬ್ಬರು ಸಂಸದರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಸಂಸತ್ ಭವನದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ನಮನ ಸಲ್ಲಿಸುತ್ತಿದ್ದ ವೇಳೆ ಆಪ್​ನ ಸಂಜಯ್ ಸಿಂಗ್ ಹಾಗೂ ಭಗವಂತ್ ಮಾನ್ ಗದ್ದಲವೆಬ್ಬಿಸಿದರು. ರೈತ ವಿರೋಧಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ಆರೋಪಿಸಿ ಪೋಸ್ಟರ್​ಗಳನ್ನು ಪ್ರದರ್ಶಿಸಿ, ಘೋಷಣೆಗಳನ್ನು ಕೂಗಿದರು.

    ಪ್ರಧಾನಿ ಮೋದಿ ರೈತರ ಸಮಸ್ಯೆಗಳನ್ನು ಪರಿಹರಿಸುವ ಬದಲು ಟಿವಿ ಕಾರ್ಯಕ್ರಮಗಳ ಮೂಲಕ ರೈತರ ಬಗ್ಗೆ ಕಾಳಜಿ ತೋರಿಸುತ್ತಿದ್ದಾರೆ. ಪಿಎಂ-ಕಿಸಾನ್ ಮೂಲಕ ಪಶ್ಚಿಮ ಬಂಗಾಳದ ರೈತರಿಗೆ ಸಹಾಯ ಮಾಡುವ ಉದ್ದೇಶವನ್ನು ಅವರು ಹೇಳಿದ್ದಾರೆ. ಆದರೆ ವಾಸ್ತವವಾಗಿ ಅವರು ಅರ್ಧಸತ್ಯದಿಂದ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ.

    | ಮಮತಾ ಬ್ಯಾನರ್ಜಿ ಪ.ಬಂಗಾಳ ಮುಖ್ಯಮಂತ್ರಿ

    ಕೇಂದ್ರ ಶೀಘ್ರ ನಿರ್ಧಾರ ಕೈಗೊಳ್ಳದಿದ್ದರೆ ಟ್ರಾ್ಯಕ್ಟರ್ ಮತ್ತು ಟ್ರಾ್ಯಲಿಗಳ ಮೇಲೆ ತ್ರಿವರ್ಣ ಧ್ವಜ ಹಿಡಿದು ಜನವರಿ 26ರ ಗಣರಾಜ್ಯೋತ್ವವ ದಿನದ ಪರೇಡ್​ನಲ್ಲಿ ಭಾಗವಹಿಸುತ್ತೇವೆ.

    | ರಾಕೇಶ್ ಟಿಕಾಯತ್ ಭಾರತೀಯ ಕಿಸಾನ್ ಯೂನಿಯನ್ ಮುಖಂಡ

    ಪೊಲೀಸರಿಗೆ ಕ್ರಿಸ್‌ಮಸ್ ಬಂಪರ್ ಕೊಡುಗೆ; ಚುನಾವಣೆ ಗೌರವಧನ ಪರಿಷ್ಕೃತ

    ಟೀಮ್ ಇಂಡಿಯಾದ ಹೊಸ ಉಪನಾಯಕ ಯಾರು ಗೊತ್ತೇ..?

    ನೈಟ್​ ಕರ್ಫ್ಯೂ ಇಲ್ಲ ಅಂತ ಹೊಸ ವರ್ಷಕ್ಕೆ ಬೇಕಾಬಿಟ್ಟಿ ಓಡಾಡಿದರೆ ಬೀಳುತ್ತೆ ಕೇಸ್​! ಬೆಂಗಳೂರಲ್ಲಿ ನ್ಯೂ ಇಯರ್​ ಪಾರ್ಟಿಗೆ ಬ್ರೇಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts