More

    ಪ್ರವಾಸಿ ಕ್ಷೇತ್ರಗಳ ಪುನಶ್ಚೇತನಕ್ಕೆ ಆದ್ಯತೆ ; ಉಮಾಮಹದೇವನ್ ಹೇಳಿಕೆ

    ಮುಳಬಾಗಿಲು : ಕೋಲಾರ ಜಿಲ್ಲೆಯಲ್ಲಿ ಐತಿಹಾಸಿಕ ಪ್ರವಾಸಿ ಪುಣ್ಯ ಕ್ಷೇತ್ರಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸದ ಕಾರಣ ಇವುಗಳು ಅಳಿವಿನಂಚಿನಲ್ಲಿವೆ. ಪ್ರವಾಸಿ ಕ್ಷೇತ್ರಗಳ ಪುನಶ್ಚೇತನಕ್ಕೆ ಆದ್ಯತೆ ನೀಡುವ ಮೂಲಕ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಮಾಡಬೇಕಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಮಹದೇವನ್ ಹೇಳಿದರು.

    ತಾಲೂಕಿನ ವಿರೂಪಾಕ್ಷಿ ಗ್ರಾಮದಲ್ಲಿರುವ ಐತಿಹಾಸಿಕ ವಿರೂಪಾಕ್ಷೇಶ್ವರ ದೇವಾಲಯಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ದೇವಾಲಯದ ಆವರಣದಲ್ಲಿರುವ ಬೆಳೆದಿರುವ ಗಿಡಗಂಟಿಗಳು, ಅಭಿವೃದ್ಧಿ ಕಾಣದ ಕಲ್ಯಾಣಿಗಳನ್ನು ಗ್ರಾಪಂ ಮತ್ತು ತಾಪಂ ಸಹಯೋಗದಲ್ಲಿ ಹಾಗೂ ನರೇಗಾ ಯೋಜನೆಯಲ್ಲಿ ಅಭಿವೃದ್ಧಿ ಪಡಿಸುವಂತೆ ಸೂಚಿಸಿದರು.

    ದೇವಾಲಯದ ಗೋಪುರಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕಾಗಿದೆ ಎಂದ ಅವರು, ರಾಜ್ಯ ಸರ್ವೆಕ್ಷಣ ಇಲಾಖೆಯ ಅಧಿಕಾರಿ ಪೂರ್ಣಿಮ ಅವರನ್ನು ಮೊಬೈಲ್ ಮೂಲಕ ಸಂರ್ಪಸಿ ವಿರೂಪಾಕ್ಷ ದೇವಾಲಯ ಐತಿಹಾಸಿಕವಾಗಿದ್ದು, ಇದರ ಬಗ್ಗೆ ವಿಶೇಷವಾದ ಕಾಳಜಿ ವಹಿಸುವಂತೆ ತಿಳಿಸಿದರು.

    ಜಿಪಂ ಸಿಇಒ ಎಂ.ಆರ್.ರವಿಕುಮಾರ್ ಮಾತನಾಡಿ, ವಿರೂಪಾಕ್ಷಿ ದೇವಾಲಯಕ್ಕೆ 150 ಎಕರೆ ಆಸ್ತಿ ಇದೆ ಎಂಬ ಮಾಹಿತಿ ಇದೆಯಾದರೂ ಈಗಿರುವ ಮೂರು ಎಕರೆ 38 ಗುಂಟೆ ವಿಸ್ತೀರ್ಣದ ದೇವಾಲಯದ ಸ್ಥಳದಲ್ಲಿ ಬೆಳೆದಿರುವ ಕಳೆಯನ್ನು ಸ್ವಚ್ಛ ಮಾಡಲು ನರೇಗಾ ಯೋಜನೆಯಲ್ಲಿ ಅನುದಾನವನ್ನು ಉಪಯೋಗಿಸಿಕೊಳ್ಳಲಾಗುವುದು. ಜತೆಗೆ ಮುಜರಾಯಿ, ಸರ್ವೆಕ್ಷಣ ಇಲಾಖೆ, ಜಿಪಂ ಇಲಾಖೆಗಳ ಅನುದಾನ ಬಳಸಿಕೊಂಡು ದೇವಾಲಯದ ಕಟ್ಟಡವನ್ನು ಹೊರತುಪಡಿಸಿ ಉಳಿದೆಲ್ಲಾ ಕಡೆ ಸ್ವಚ್ಛಗೊಳಿಸುವ ಕಾರ್ಯ ಮಾಡಲಾಗುವುದು ಎಂದರು.

    ತಹಸೀಲ್ದಾರ್ ಕೆ.ಎನ್.ರಾಜಶೇಖರ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಸೌಮ್ಯ, ಆವಣಿ ಗ್ರಾಪಂ ಆಡಳಿತಾಧಿಕಾರಿ ಡಿ.ಗಿರಿಜೇಶ್ವರಿದೇವಿ, ಮುಜರಾಯಿ ಆರ್​ಐ ಸಿ.ಚೆಲುವಸ್ವಾಮಿ, ಆವಣಿ ಹೋಬಳಿ ಆರ್​ಐ ಸಿ.ಸುಬ್ರಮಣಿ, ಗ್ರಾಪಂ ಮಾಜಿ ಸದಸ್ಯ ವಿರೂಪಾಕ್ಷಿ ಮಾರಪ್ಪ ಮತ್ತಿತರರು ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts