ಚೆನ್ನೈ: ಆಸ್ಟ್ರೇಲಿಯಾದ ಸ್ಫೋಟಕ ಆಟಗಾರ ಗ್ಲೇನ್ ಮ್ಯಾಕ್ಸ್ವೆಲ್ ಪ್ರಸಕ್ತ ಐಪಿಎಲ್ ಹರಾಜಿನಲ್ಲಿ ಭಾರಿ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ ಬಿಕರಿಯಾಗಿದ್ದಾರೆ.
ಬರೋಬ್ಬರಿ 14.25 ಕೋಟಿ ರೂ.ಗೆ ಮ್ಯಾಕ್ಸ್ವೆಲ್ ಆರ್ಸಿಬಿ ತೆಕ್ಕೆಗೆ ಜಾರಿದ್ದಾರೆ. ಆದರೆ, ಸಹಜವಾಗಿ ಐಪಿಎಲ್ ಅಭಿಮಾನಿಗಳಲ್ಲಿ ಕಾಡುವ ಪ್ರಶ್ನೆಯೆಂದರೆ ಮ್ಯಾಕ್ಸ್ವೆಲ್ಗೆ ಇಷ್ಟೊಂದು ಹಣ ಕೊಟ್ಟ ಖರೀದಿ ಮಾಡಬೇಕಿತ್ತಾ ಎನ್ನುವುದು. ಏಕೆಂದರೆ ಕಳೆದ ಐಪಿಎಲ್ನಲ್ಲಿ ಮ್ಯಾಕ್ಸಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಕಳೆದ ಬಾರಿಯು ಸಾಮಾನ್ಯ ಮೊತ್ತಕ್ಕೇನೋ ಬಿಕರಿಯಾಗಿರಲಿಲ್ಲ. ಬರೋಬ್ಬರಿ 10 ಕೋಟಿ ರೂ. ನೀಡಿ ಪಂಜಾಬ್ ತಂಡ ಮ್ಯಾಕ್ಸಿಯನ್ನು ಖರೀದಿಸಿತ್ತು. ಆದರೆ, ಪ್ರಯೋಜನ ಮಾತ್ರ ಹೇಳಿಕೊಳ್ಳುವ ಮಟ್ಟಕ್ಕಿರಲಿಲ್ಲ.
ಇದನ್ನೂ ಓದಿರಿ: ತಾಳಿ ಕಟ್ಟಬೇಕಿದ್ದ ಕುತ್ತಿಗೆಗೆ ಚಾಕು ಹಾಕಿದ ಭಾವಿ ಪತಿ! ದುಪ್ಪಟ್ಟದಿಂದಲೇ ನೇಣಿಗೆ ಶರಣಾದ
ಹೀಗಾಗಿ ಕ್ರೀಡಾಭಿಮಾನಿಗಳಲ್ಲಿ ಸೃಷ್ಟಿಯಾಗಿರುವ ಪ್ರಶ್ನೆಗೆ ಆರ್ಸಿಬಿ ನಿರ್ದೇಶಕ ಮೈಕ್ ಹೆಸ್ಸನ್ ಉತ್ತರ ನೀಡಿದ್ದಾರೆ. ಮ್ಯಾಕ್ಸ್ವೆಲ್ ಖರೀದಿ ಬಗ್ಗೆ ಮಾತನಾಡಿರುವ ಹೆಸ್ಸನ್, 2020ರ ಐಪಿಎಲ್ಗೂ ಮೊದಲು ಮ್ಯಾಕ್ಸಿ ಕ್ರಿಕೆಟ್ನಲ್ಲಿ ಎಷ್ಟು ಹಿಡಿತ ಹೊಂದಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಅವರನ್ನು ಎಷ್ಟರ ಮಟ್ಟಿಗೆ ಉತ್ತಮವಾಗಿ ಬಳಸಿಕೊಳ್ಳಬಹುದು ಎಂಬುದರ ಕಡೆ ಗಮನಹರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ಮ್ಯಾಕ್ಸಿ ಪವರ್ ಬಳಸಿಕೊಳ್ಳಬಹುದು. ಎಕ್ಷ್-ಫ್ಯಾಕ್ಟರ್ ಪ್ಲೇಯರ್ ಅನ್ನು ಮ್ಯಾಕ್ಸಿಯಲ್ಲಿ ಕಂಡುಕೊಂಡಿದ್ದೇವೆಂದು ಹೆಸ್ಸನ್ ತಿಳಿಸಿದ್ದಾರೆ.
ಹರಾಜಿನಲ್ಲಿ ಕೋಲ್ಕತ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಆರ್ಸಿಬಿ ತಂಡಗಳ ನಡುವೆ ತೀವ್ರ ಪೈಪೋಟಿ ನಡೆದವು. ಹರಾಜು ಮೊತ್ತ 12.25 ಕೋಟಿ ತಲುಪಿದಾಗ ಕೆಕೆಆರ್ ಬಿಡ್ನಿಂದ ಹಿಂದೆ ಸರಿಯಿತು. ಬಳಿಕ ಸಿಎಸ್ಕೆ ಮತ್ತು ಆರ್ಸಿಬಿ ನಡುವೆ ನಡೆದ ತೀವ್ರ ಪೈಪೋಟಿಯಲ್ಲಿ ಅಂತಿಮವಾಗಿ ಮ್ಯಾಕ್ಸ್ವೆಲ್ 14.25 ಕೋಟಿ ರೂ.ಗೆ ಆರ್ಸಿಬಿ ತೆಕ್ಕೆಗೆ ಜಾರಿದರು.
ಇದನ್ನೂ ಓದಿರಿ: ‘ನಾ ಪುರುಷನಿಂದ ಗರ್ಭಿಣಿಯಾಗಲಿಲ್ಲ’ ಈ ಗರ್ಭಿಣಿಯ ಕಥೆ ಕೇಳಿದರೆ ನೀವೂ ಗಾಬರಿಯಾಗುತ್ತೀರ..
ಮ್ಯಾಕ್ಸ್ವೆಲ್ ಕಳೆದ ಬಾರಿ 10.75 ಕೋಟಿ ರೂ.ಗೆ ಪಂಜಾಬ್ ಪಾಲಾಗಿದ್ದರು. ಆದರೆ, ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ. ಇದಾದ ಬೆನ್ನಲ್ಲೇ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿಯಲ್ಲಿ ಮ್ಯಾಕ್ಸ್ವೆಲ್ ಅಬ್ಬರಿಸಿ ಐಪಿಎಲ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.
ಇತ್ತೀಚೆಗೆ ಮಾತನಾಡಿದ ಮ್ಯಾಕ್ಸ್ವೆಲ್ ಆರ್ಸಿಬಿ ತಂಡದಲ್ಲಿ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಅದರಂತೆಯೇ ಇಂದು ಚೆನ್ನೈನಲ್ಲಿ ನಡೆದ ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ಆರ್ಸಿಬಿ ಸೇರಿಕೊಂಡಿದ್ದಾರೆ.
ಯುವಿ ದಾಖಲೆ ಮುರಿದ ಕ್ರಿಸ್ ಮೋರಿಸ್! ದಾಖಲೆಯ ಮೌಲ್ಯಕ್ಕೆ ಬಿಡ್ ಆದ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ
ಈಡೇರಿತು ಆಲ್ರೌಂಡರ್ ಮ್ಯಾಕ್ಸಿ ಆಸೆ: ಹರಾಜಿನಲ್ಲಿ ಆರ್ಸಿಬಿ ಪಾಲಾದ ಆಸಿಸ್ ದಾಂಡಿಗ!
ಐಪಿಎಲ್ ಹರಾಜಿನಲ್ಲಿ ಅತಿ ಹೆಚ್ಚು ಮೌಲ್ಯಕ್ಕೆ ಬಿಡ್ ಆದವರು ಯಾರು ಗೊತ್ತೇ? ಇಲ್ಲಿದೆ ಹರಾಜಿನ ಇತಿಹಾಸ…